Sandalwood Leading OnlineMedia

`ಬಿಗ್‌ಬಾಸ್’ ಮನೆಯಿಂದ ಹೊರಬಿತ್ತು ಬಿಗ್‌ನ್ಯೂಸ್! `ಬಾಸ್’ ಮನೆಯೊಳಗೆ ಹೋಗ್ತಿರೋರು ಯಾರು ಗೊತ್ತಾ?

 

 

ಕನ್ನಡ ಬಿಗ್ ಬಾಸ್ ಯಾವಾಗ ಎನ್ನುವ ಕುತೂಹಲವೊಂದು ಎಲ್ಲರಲ್ಲೂ ಇತ್ತು. ಈ ರಿಯಾಲಿಟಿ ಶೋ ಕಿಚ್ಚ ಸುದೀಪ್ ನಿರೂಪಣೆಯಲ್ಲಿ ಮೂಡಿ ಬರುತ್ತಿರುತ್ತಿದೆ . ಕಲರ್ಸ್ ಕನ್ನಡ ವಾಹಿನಿಯ ಜನಪ್ರಿಯ ರಿಯಾಲಿಟಿ ಶೋ `ಬಿಗ್ ಬಾಸ್ ‘ ಯಾವಾಗ ಎನ್ನುವ ಪ್ರಶ್ನೆಗೆ ಈಗ ಉತ್ತರ ದೊರಕಿದೆ. ಬಿಗ್ ಬಾಸ್ ಸೀಸನ್ ಅದು ಕೂಡಾ ಕನ್ನಡ ಬಿಗ್ ಬಾಸ್‌ಗೆ ಕಿರುತೆರೆ ಪ್ರೇಕ್ಷಕರು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ `ಬಿಗ್ ಬಾಸ್ ಸೀಸನ್ ೯’ ಬಗ್ಗೆ ಹೊಸ ಅಪ್ ಡೇಟ್ ಹೊರಬಿದ್ದಿದೆ .

 

ಮೈಸೂರಿನಲ್ಲಿ `ಹೊಯ್ಸಳ’ನ ದಂಡಯಾತ್ರೆ!

ಹೌದು , ಬಹುನಿರೀಕ್ಷೆಯ ಬಿಗ್ ಬಾಸ್ ಆಗಸ್ಟ್ ಮೊದಲ ವಾರದಿಂದ ಆರಂಭವಾಗಲಿದೆ ಎನ್ನುವ ಮಾಹಿತಿ ಬಹಿರಂಗವಾಗಿದೆ.  ಸಾಮಾಜಿಕ ಜಾಲತಾಣದ ಮತ್ತು ಸಿನಿ ಜಗತ್ತಿನ ದೊಡ್ಡವರಲ್ಲಿ ಹಲವರು ಬಿಗ್ ಬಾಸ್ ಮನೆಗೆ ಬಂದು ವಾಸ ಮಾಡಲಿದ್ದಾರೆ. ಕಳೆದ ಬಾರಿಯಂತೆ ಈ ಬಾರಿಯೂ ಸಹ ವೋಟ್ ಸೆಲೆಕ್ಟ್ ನಲ್ಲಿಯೂ ಬಿಗ್ ಬಾಸ್ ಪ್ರಸಾರವಾಗಲಿದೆ . ಓಟಿಟಿಯಲ್ಲಿ ಮತ್ತು ಕಲರ್ಸ್ ವಾಹಿನಿಯಲ್ಲಿ ಎರಡು ರೀತಿಯ ಬಿಗ್ ಬಾಸ್ ಸೀಸನ್ಗಳನ್ನು ಪ್ರಸಾರ ಮಾಡಲು ಕಲರ್ಸ್ ಸಂಸ್ಥೆ ನಿರ್ಧರಿಸಿದೆ.

 

ಮೋಡಿಮಾಡುತ್ತಿದೆ ಸೂರಿ ನಿರ್ದೇಶನದ ಚಿತ್ರದ ಹಾಡು

 

ಈ ಬಾರಿ ಕಲರ್ಸ್ ವಾಹಿನಿಯಲ್ಲಿ ಬಿಗ್ ಬಾಸ್ ಪ್ರಸಾರ ಆರಂಭವಾಗುವ ಮೊದಲೇ ವೋಟ್ ಸೆಲೆಕ್ಟ್ ನಲ್ಲಿ ಬಿಗ್ ಬಾಸ್ ಮಿನಿ ಸೀಸನ್ ಪ್ರಸಾರವಾಗಲಿದೆ. ಈ ಮಿನಿ ಸೀಸನ್ ೪೨ ದಿನಗಳ ಕಾಲ ಪ್ರಸಾರವಾಗಲಿದ್ದು, ಇಂಟರ್ನೆಟ್ ಸ್ಟಾರ್ಗಳು , ಇನ್ಫುಲೆನ್ಸ್ರ‍್ಸ್ಗಳು ಇದರಲ್ಲಿ ಪಾಲ್ಗೊಳ್ಳಲಿದ್ದಾರೆ. ಈ ಮಿನಿ ಸೀಸನ್ನಲ್ಲಿ ಆಯ್ಕೆಯಾದ ಒಂದಿಬ್ಬರು ಸ್ಪರ್ಧಿಯಲ್ಲಿ ವಾಹಿನಿಯಲ್ಲಿ ಪ್ರಸಾರವಾಗುವ ಪೂರ್ಣ ಪ್ರಮಾಣದ ಬಿಗ್ ಬಾಸ್ನಲ್ಲಿ ಭಾಗವಹಿಸುತ್ತಾರೆ . ಕಲರ್ಸ್ ಕನ್ನಡದಲ್ಲಿ ಪ್ರಸಾರವಾಗುವ ಬಿಗ್ ಬಾಸ್ ೯೦ ದಿನಗಳ ಕಾಲ ಪ್ರಸಾರವಾಗಲಿದೆ .

 

ಕಣ್ಮನ ಸೆಳೆಯುವ ಸೌಂದರ್ಯ.. ಬೆರಗುಗೊಳಿಸುವ ಲುಕ್​ನಲ್ಲಿ ಆಶಿಕಾ

 

ಈ ರೀತಿಯ ಪ್ರಯತ್ನ ಕಳೆದ ಬಾರಿ ಹಿಂದಿಯಲ್ಲಿ ಮಾಡಲಾಗಿತ್ತು . ಹಿಂದಿಯಲ್ಲಿ ಕರಣ್ ಜೋಹರ್ ನಡೆಸಿಕೊಟ್ಟಿದ್ದರು. ಒಟಿಟಿ ಬಳಿಕ ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರವಾಗಿತ್ತು. ಈ ಬಾರಿ ಕನ್ನಡದಲ್ಲೂ ಅದೇ ರೀತಿಯ ಪ್ರಯತ್ನ ಮಾಡಲಾಗುತ್ತಿದೆ. ಕನ್ನಡದಲ್ಲಿ ಪ್ರಸಾರವಾಗುವ ಒಟಿಟಿ ಬಿಗ್ ಬಾಸ್ ಅನ್ನು ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಡೆಸಿಕೊಡಲಿದ್ದು, ೯೦ ದಿನಗಳ ಟಿವಿಯಲ್ಲಿ ಆರಂಭವಾಗುವ ಬಿಗ್ ಬಾಸ್ ಜವಾಬ್ದಾರಿ ಕೂಡಾ ಸುದೀಪ್ ನಡೆಸಿಕೊಡಲಿದ್ದಾರೆ .  

 

ಮೈತ್ರಿಯಾಗಿ `ದೂರದರ್ಶನ’ಕ್ಕೆ ಎಂಟ್ರಿ ಕೊಟ್ಟ ಆಯಾನಾ

Share this post:

Related Posts

To Subscribe to our News Letter.

Translate »