ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದಉಸಿರೇ ಉಸಿರೇ ಹೊಸ ಸಿನಿಮಾ ಅನೌನ್ಸ್ ಆಗಿದೆ. ಆದರೆ ಇದೇ ಕಿಚ್ಚ ಸುದೀಪ್ ಇನ್ನೂ ಒಂದು ಸಿನಿಮಾ ಮಾಡಿದ್ದಾರೆ. ಈ ಚಿತ್ರದ ಟೀಸರ್ ಕೂಡ ರಿಲೀಸ್ ಆಗಿದೆ. ಈ ಸಿನಿಮಾದ ಕುರಿತು ಹೇಳಲಿಕ್ಕೆ ಸುಮಾರು ವಿಷಯ ಕೂಡ ಇದೆ.ಗೆಳೆಯನಿಗಾಗಿಯೇ ಕಿಚ್ಚ ಸುದೀಪ್ ಈ ಒಂದು ಸಿನಿಮಾ ಮಾಡಿದ್ದಾರೆ. ಹಾಗಂತ ಇಡೀ ಸಿನಿಮಾದಲ್ಲಿ ಇದ್ದಾರೆ ಅನ್ನೋ ಪ್ರಶ್ನೆಗೆ ಇಲ್ಲೊಂದಷ್ಟು ಕುತೂಹಲದ ವಿಷಯವೂ ಇವೆ. ಜೊತೆಗೆ ಈ ಚಿತ್ರದಲ್ಲಿ ಸುದೀಪ್ ಹೀರೋನಾ? ಈ ಒಂದು ಪ್ರಶ್ನೆಗೂ ಉತ್ತರ ಇದೆ. ಆದರೆ ಕಿಚ್ಚ ಸುದೀಪ್ ಇಲ್ಲಿ ಮಾಡಿರೋ ಪಾತ್ರ ಇತರರಿಗೂ ಸ್ಪೂರ್ತಿ ಆಗುತ್ತದೆ.ಜನ ಇದನ್ನ ನೋಡಿ ಫಾಲೋ ಮಾಡಿದ್ರು ತಪ್ಪಿಲ್ಲ. ಅಷ್ಟು ಒಳ್ಳೆ ಪಾತ್ರದ ಈ ಚಿತ್ರಕ್ಕೆ ಉಸಿರೇ ಉಸಿರೇ ಅನ್ನೋ ಟೈಟಲ್ ಇದೆ.
ಬಿಗ್ ಬಾಸ್ ರಾಜೀವನ ಸಿನಿಮಾದಲ್ಲಿ ಕಿಚ್ಚ ಸುದೀಪ್.!ಉಸಿರೇ ಉಸಿರೇ ಅನ್ನೋ ವಿಶೇಷ ಟೈಟಲ್‌ನ ಈ ಚಿತ್ರಕ್ಕೆ ಬಿಗ್ ಬಾಸ್ ಖ್ಯಾತಿಯ ನಟ ರಾಜೀವ್ ಹೀರೋ ಆಗಿದ್ದಾರೆ. ಡೈನಾಮಿಕ್ ಸ್ಟಾರ್ ದೇವರಾಜ್ ಕೂಡ ಈ ಚಿತ್ರದಲ್ಲಿ ಪ್ರಮುಖ ಪಾತ್ರ ಮಾಡಿದ್ದಾರೆ. ಈ ಸಿನಿಮಾಗೋಸ್ಕರ ಹೊಸ ರೀತಿಯ ಪಾತ್ರದಲ್ಲೂ ಡೈನಾಮಿಕ್ ಸ್ಟಾರ್ ಕಾಣಿಸಿಕೊಳ್ಳುತ್ತಿದ್ದಾರೆ.
ಉಸಿರೇ ಉಸಿರೇ ಚಿತ್ರದಲ್ಲಿ ಕಿಚ್ಚನ ಸ್ಪೆಷಲ್ ಸಂದೇಶವಿದೆ!,ಆದರೆ ಕಿಚ್ಚ ಸುದೀಪ್ ಈ ಸಿನಿಮಾದಲ್ಲಿ ಒಂದು ವಿಶೇಷ ರೋಲ್ ಮಾಡಿದ್ದಾರೆ. ಈ ರೋಲ್ ಮೂಲಕ ಕಿಚ್ಚ ಸುದೀಪ್ ಒಂದು ಸಂದೇಶವನ್ನು ಕೂಡ ಕೊಟ್ಟಿದ್ದಾರೆ. ಈ ಸಂದೇಶ ಜನರಲ್ಲಿ ಜಾಗೃತಿ ಮಾಡೋ ಕೆಲಸವನ್ನ ಕೂಡ ಮಾಡುತ್ತದೆ.ಹೌದು, ಸಾಮಾನ್ಯವಾಗಿ ರಸ್ತೆ ಅಪಘಾತಗಳಲ್ಲಿ ಜನ ಸಹಾಯ ಮಾಡೋಕೆ ಹಿಂಜರಿಯುತ್ತಾರೆ. ಹೆಲ್ಪ್ ಮಾಡಿದ್ರೆ, ಪೊಲೀಸ್ ಕೇಸ್-ಕೋರ್ಟ್ ಅಂತ ಓಡಾಡಬೇಕು ಅನ್ನೋ ಭಯ ಇದ್ದೇ ಇರುತ್ತದೆ. ಆ ಒಂದು ಭಯವನ್ನ ಹೋಗಲಾಡಿಸೋ ಒಂದು ಕೆಲಸವನ್ನ ಕಿಚ್ಚ ಸುದೀಪ್ ಈ ಚಿತ್ರದ ಸ್ಪೆಷಲ್ ರೋಲ್‌ನಲ್ಲಿ ಮಾಡಿದ್ದಾರೆ ಅಂತಲೇ ಹೇಳಬಹುದು ಕಿಚ್ಚ ಸುದೀಪ್ ಈ ಚಿತ್ರದಲ್ಲಿ ಅಭಿನಯಿಸೋಕೆ ಕಾರಣವೂ ಇದೆ. ಗೆಳೆಯ ರಾಜೀವ್ ಗೋಸ್ಕರವೇ ಈ ಒಂದು ಪಾತ್ರವನ್ನ ಕಿಚ್ಚ ಸುದೀಪ್ ಮಾಡಿದ್ದಾರೆ ಅಂತಲೇ ಹೇಳಬಹುದು. ಈ ಮೂಲಕ ಗೆಳೆಯನಿಗೆ ಕಿಚ್ಚ ಸುದೀಪ್ ಸಪೋರ್ಟ್ ಮಾಡಿದ್ದಾರೆ.
ಉಸಿರೇ ಉಸಿರೇ ಚಿತ್ರದಲ್ಲಿ ಕಿಚ್ಚನ ಸ್ಪೆಷಲ್ ಸಂದೇಶ ಏನಪ್ಪಾ ಅಂದ್ರೇ,ಸುದೀಪ್ ಸ್ಪೆಷಲ್ ರೋಲ್‌ನಲ್ಲಿರೋ ಈ ಚಿತ್ರದಲ್ಲಿ ರಾಜೀವ್ ಭರ್ಜರಿ ಆಕ್ಷನ್ ಮಾಡಿದ್ದಾರೆ. ಸಿನಿಮಾದಲ್ಲಿ ಲವ್ ಸ್ಟೋರಿನೂ ಇದೆ. ಈ ಹಿನ್ನೆಲೆಯಲ್ಲಿ ರಾಜೀವ್ ಇಲ್ಲಿ ಅಮರ ಪ್ರೇಮಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.
ಉಸಿರೇ ಉಸಿರೇ ಚಿತ್ರದಲ್ಲಿ ಟಾಲಿವುಡ್ ಹಾಸ್ಯ ಕಲಾವಿದರ ಅಬ್ಬರವಿದೆ ಎನ್ನಲಾಗುತ್ತಿದೆ ಚಿತ್ರದ ಮೊದಲ ಟೀಸರ್‌ನಲ್ಲಿ ಈ ಎಲ್ಲ ವಿಷಯಗಳು ಇದೀಗ ರಿವೀಲ್ ಆಗಿವೆ. ಡೈರೆಕ್ಟರ್ ಸಿ.ಎಂ. ವಿಜಯ್ ಈ ಚಿತ್ರದಲ್ಲಿ ಹೊಸ ರೀತಿಯ ಕಥೆಯನ್ನ ಹೇಳುತ್ತಿದ್ದಾರೆ. ಕಿಚ್ಚ ಸುದೀಪ್ ಸೇರಿದಂತೆ ರಾಜೀವ್, ಶ್ರೀಜಿತಾ ಘೋಷ್, ತಾರಾ, ಸುಚೇಂದ್ರ ಪ್ರಸಾದ್, ಸಾಧು ಕೋಕಿಲ ಅಭಿನಯಿಸಿದ್ದಾರೆ.ಟಾಲಿವುಡ್‌ನ ಹಾಸ್ಯ ಕಲಾವಿದರಾದ ಆಲಿ ಮತ್ತು ಬ್ರಹ್ಮಾನಂದಂ ಕೂಡ ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಸಿನಿಮಾದ ರಿಲೀಸ್ ಇನ್ನು ಅನೌನ್ಸ್ ಆಗಿಲ್ಲ. ಆದರೆ ರಿಲೀಸ್ ಆದ ಟೀಸರ್‌ನಲ್ಲಿ ಅತಿ ಶೀಘ್ರದಲ್ಲಿಯೇ ಚಿತ್ರ ಬರುತ್ತದೆ ಅನ್ನೋ ಮಾಹಿತಿಯನ್ನ ಕೂಡ ಕೊಡಲಾಗಿದೆ