Sandalwood Leading OnlineMedia

‘ಮ್ಯಾಕ್ಸ್’ ಬಗ್ಗೆ ಬಿಗ್ ಅಪ್ಡೇಟ್ ಕೊಟ್ರು ಕಿಚ್ಚ ಸುದೀಪ್

ಕ್ರಿಕೆಟ್ ಪಂದ್ಯ ಮುಗಿಸಿಕೊಂಡು ಮತ್ತೆ ಮ್ಯಾಕ್ಸ್ ಚಿತ್ರೀಕರಣದಲ್ಲಿ ತೊಡಗಿರುವ ಸುದೀಪ್ (Sudeep), ಇದೀಗ ಮ್ಯಾಕ್ಸ್ ಚಿತ್ರದ ಬಗ್ಗೆ ಹೊಸ ಅಪ್ ಡೇಟ್ ನೀಡಿದ್ದಾರೆ. 15 ದಿನಗಳ ಕಾಲ ಶೂಟಿಂಗ್ ಮುಗಿಸಿದರೆ, ಮ್ಯಾಕ್ಸ್ ಚಿತ್ರದ ಚಿತ್ರೀಕರಣ ಮುಕ್ತಾಯವಂತೆ. ನಂತರ ಮೇ ತಿಂಗಳಿನಲ್ಲಿ ಚಿತ್ರ ರಿಲೀಸ್ (Release) ಆಗಬಹುದು ಅಂದಿದ್ದಾರೆ ಕಿಚ್ಚ ಸುದೀಪ್. ಚಂದನ್ ಅವರ ಹೋಟೆಲ್ ಗೆ ಆಗಮಿಸಿದ್ದ ಸುದೀಪ್ ಮ್ಯಾಕ್ಸ್ ಬಗ್ಗೆ ಕೆಲವು ವಿಷಯಗಳನ್ನೂ ಮಾತನಾಡಿದ್ದಾರೆ.

ಇದನ್ನು ಸಹ ಓದಿ:Toxic: ರಾಕಿಂಗ್ ಸ್ಟಾರ್ ಯಶ್ ಸಿನಿಮಾದಲ್ಲಿ ನಟಿಸಲು ಅವಕಾಶ; ಮಾಹಿತಿ, ವಿವರ

ಮ್ಯಾಕ್ಸ್’ ಸಿನಿಮಾ ಬಗ್ಗೆ ಅಭಿಮಾನಿಗಳು ಪದೇ ಪದೇ ಅಪ್‌ಡೇಟ್ ಕೇಳುತ್ತಲೇ ಇರುತ್ತಾರೆ. ಅದಕ್ಕೆ ಈ ಹಿಂದೆಯೂ ಪ್ರತಿಕ್ರಿಯೆ ನೀಡಿದ್ದರು ಸುದೀಪ್,  ‘ನಿಮ್ಮ ಪ್ರೀತಿ, ಕ್ಯೂರಿಯಾಸಿಟಿ ನನಗೆ ಅರ್ಥವಾಗುತ್ತದೆ.

ಆದರೆ, ಸಿನಿಮಾ ಶಟ್ (Shooting) ಪೂರ್ಣಗೊಳ್ಳದೆ ಆ ಬಗ್ಗೆ ಅಪ್‌ಡೇಟ್ ನೀಡೋದು ಹೇಗೆ’ ಅನ್ನೋದು ಸುದೀಪ್ ಅವರ ಪ್ರಶ್ನೆಯಾಗಿತ್ತು. ನವೆಂಬರ್‌ನಲ್ಲಿ ಮಳೆಯಿಂದ ಶೂಟ್ ಮಾಡಲು ಸಾಧ್ಯವಾಗಿರಲಿಲ್ಲ. ಡಿಸೆಂಬರ್‌ನಲ್ಲಿ ಕೆಲವು ಅಡೆತಡೆಗಳು ಎದುರಾದವು. ಈಗ ಸಂಕ್ರಾಂತಿ ಬಳಿಕ ಮತ್ತೆ ‘ಮ್ಯಾಕ್ಸ್’ ಶೂಟಿಂಗ್ ಶುರು ಆಗಿದೆ ಎಂದು ತಿಳಿಸಿದ್ದರು.

ಇದನ್ನು ಸಹ ಓದಿ:ರಾಮೇಶ್ವರಂ ಕೆಫೆ ಸ್ಪೋಟದ ಹಿಂದಿದೆ ಚೆನ್ನೈ ಲಿಂಕ್ : NIA ಹೇಳಿದ್ದೇನು..?

ಮೊನ್ನೆಯಷ್ಟೇ ಸಿನಿಮಾದ ಪ್ರಮುಖ ದೃಶ್ಯವನ್ನು ಶೂಟ್ ಮಾಡಿ ಮುಗಿಸಿದ್ದಾರೆ. ಅದೊಂದು ಪ್ರಮುಖ ಘಟ್ಟ. ಜೊತೆಗೆ ಸಣ್ಣದೊಂದು ಭಾಗದ ಚಿತ್ರೀಕರಣ ಮುಗಿದರೆ ಸಿನಿಮಾ ಮುಗಿದಂತೆ. ಎಲ್ಲ ರಫ್ ಕಟ್ ದೃಶ್ಯಗಳನ್ನು ನೋಡಿದೆ. ಸೂಪರ್. ಅದ್ಭುತವಾಗಿ ಸಿನಿಮಾ ಮೂಡಿ ಬಂದಿದೆ. ಪ್ರತಿಯೊಬ್ಬರ ಎಫರ್ಟ್ ಕಾಣುತ್ತಿದೆ ಎಂದು ಸುದೀಪ್ ಈ ಹಿಂದೆ ಎಕ್ಸ್ (ಟ್ವಿಟ್) ಮಾಡಿದ್ದರು.

 

ಕ್ರಿಕೆಟ್, ಬಿಗ್ ಬಾಸ್ ನಡುವೆಯೂ ನಿರೀಕ್ಷಿತ ಮ್ಯಾಕ್ಸ್ (Max) ಸಿನಿಮಾದ ಚಿತ್ರೀಕರಣ ಮುಗಿಸುತ್ತಿದ್ದಾರೆ ಕಿಚ್ಚ ಸುದೀಪ್. ಈಗಷ್ಟೇ ಚಿತ್ರದ ಕ್ಲೈಮ್ಯಾಕ್ಸ್ (Climax) ಶೂಟಿಂಗ್ ಮುಗಿಸಿದ್ದಾರೆ. ಅಂದುಕೊಂಡ ತಿಂಗಳಲ್ಲೇ ಸಿನಿಮಾ ತೆರೆಗೆ ತರಬೇಕಾಗಿದ್ದರಿಂದ ಚಿತ್ರೀಕರಣಕ್ಕೆ ಹೆಚ್ಚು ಒತ್ತು ನೀಡಿದ್ದಾರಂತೆ. ಇನ್ನು ಕೆಲವೇ ದಿನಗಳಲ್ಲಿ ಮ್ಯಾಕ್ಸ್ ಸಿನಿಮಾದ ಸಂಪೂರ್ಣ ಚಿತ್ರೀಕರಣ ಕೂಡ ಮುಗಿಯಲಿದೆ.

ಇದನ್ನು ಸಹ ಓದಿ.:ಗೀತು ಮೋಹನ್ ದಾಸ್ ಜೊತೆ ನಮ್ಮ ರಾಕಿಂಗ್ ಸ್ಟಾರ್ ಯಶ್ ಕಾಣಿಸಿಕೊಂಡಿದ್ದು, ಟಾಕ್ಸಿಕ್ ಸಿನಿಮಾ ತಯಾರಿ ನಡೆಯುತ್ತಿದೆ

ಈ ಸಿನಿಮಾ ಮುಗಿಯುತ್ತಿದ್ದಂತೆಯೇ ಬೇರೆ ಯಾವ ಸಿನಿಮಾದಲ್ಲಿ ಅವರು ತೊಡಗಿಕೊಳ್ಳಲ್ಲಿದ್ದಾರೆ ಎನ್ನುವ ಬಗ್ಗೆ ಮಾಹಿತಿ ನೀಡಿಲ್ಲ. ಮ್ಯಾಕ್ಸ್ ಮುಗಿದ ನಂತರ ಬಹುಶಃ ಅನೂಪ್ ಭಂಡಾರಿ ನಿರ್ದೇಶನದ ಚಿತ್ರದಲ್ಲಿ ಸುದೀಪ್ ತೊಡಗಿಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ.

Share this post:

Related Posts

To Subscribe to our News Letter.

Translate »