Sandalwood Leading OnlineMedia

ಚಿತ್ತಾರ ರೈಸಿಂಗ್ ಸ್ಟಾರ್ ಪ್ರಶಸ್ತಿಗೆ ಪಾತ್ರರಾದ ಕೆ.ಜಿ.ಎಫ್ ಸಿನಿಮಾಟೋಗ್ರಾಫರ್ ಭುವನ್ ಗೌಡ

ಚಿತ್ತಾರ ರೈಸಿಂಗ್ ಸ್ಟಾರ್ ಪ್ರಶಸ್ತಿಗೆ ಪಾತ್ರರಾದ ಕೆ.ಜಿ.ಎಫ್ ಸಿನಿಮಾಟೋಗ್ರಾಫರ್ ಭುವನ್ ಗೌಡ

ಉಗ್ರಂ ಚಿತ್ರದ ಮೂಲಕ ಛಾಯಾಗ್ರಾಹಕರಾಗಿ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ಇವರು, ತಮ್ಮ ಕಣ್ಚಳಕ ಮತ್ತು ಕೈಚಳಕದಿಂದ ನಿರ್ದೇಶಕರ ಬೆಸ್ಟ್ ಡಿಒಪಿಯಾದರು. ನಂತರ ರಥಾವರ, ಪುಷ್ಪಕ ವಿಮಾನ ಚಿತ್ರಗಳಿಗೆ ಛಾಯಾಗ್ರಾಹಕರಾಗಿ ಕೆಲಸ ಮಾಡಿದರು.

 

ಉಗ್ರಂ ಮೂಲಕ ಪ್ರಶಾಂತ ನೀಲ್ ಅವರಿಗೆ ಹತ್ತಿರವಾಗಿದ್ದ ಇವರು, ಕೆ.ಜಿ.ಎಫ್ ಹಾಗು ಕೆ.ಜಿ.ಎಫ್- ಚಾಪ್ಟರ್2, ಚಿತ್ರಗಳ ಮೂಲಕ ಭಾರತವೇ ಕನ್ನಡ ಚಿತ್ರರಂಗದತ್ತ ತಿರುಗಿ ನೋಡುವಂತೆ ಮಾಡಿದರು.


ಕೆ.ಜಿ.ಎಫ್ ಚಾಪ್ಟರ್-1 ಗೆ ಸೈಮಾ ಬೆಸ್ಟ್ ಛಾಯಾಗ್ರಾಹಕರಾಗಿ ಹೊರಹೊಮ್ಮಿದ ಇವರು ಸದ್ಯ ಸಲಾರ್ ಚಿತ್ರದ ಮೂಲಕ ಭಾರತ ಚಿತ್ರರಂಗಕ್ಕೆ ಪರಿಚಯವಾಗುತ್ತಿದ್ದಾರೆ.

ಮುಂಬರುವ ಇವರ ಎಲ್ಲ ಚಿತ್ರಗಳು ಇವರಿಗೆ ಇನ್ನಷ್ಟು ಕೀರ್ತಿ ತಂದು ಕೊಡಲೆಂದು ಚಿತ್ತಾರವು ಆಶಿಸುತ್ತಾ ‘ಚಿತ್ತಾರ ರೈಸಿಂಗ್ ಸ್ಟಾರ್ ಅವಾರ್ಡ್’ ನೀಡಿ ಅಭಿನಂದಿಸುತ್ತದೆ.

Share this post:

Translate »