ಶಕುಂತಲಾ ಹೇಳಿದ ಒಂದೇ ಒಂದು ಸುಳ್ಳು ಗೌತಮ್ ಮನಸ್ಸನ್ನು ಹಾಳು ಮಾಡಿದೆ. ಅದಕ್ಕಾಗಿ ಪತ್ನಿ ಭೂಮಿಕಾಳಿಗಾಗಿ ಗೌತಮ್, ಉರುಳು ಸೇವೆ ಮಾಡಿದ್ದಾನೆ, ನೆಲದ ಮೇಲೆ ಊಟ ಮಾಡಿದ್ದಾನೆ. ಭೂಮಿಕಾ ಇದೆಲ್ಲಾ ಏನು ಎಂದು ಕೇಳಿದಾಗ, ಮನೆಯವರಿಗಾಗಿ ಎಂದು ಗೌತಮ್ ಹೇಳಿದ್ದಾನೆ. ಪತಿಯ ಈ ಸ್ಥಿತಿ ಕಂಡು ಭೂಮಿಕಾ ಕಣ್ಣೀರಾಗಿದ್ದಾಳೆ. ಆದರೆ ಅವಳಿಗೆ ವಿಷಯವೇ ಗೊತ್ತಿಲ್ಲ.

ಗೌತಮ್ ಮತ್ತು ಭೂಮಿಕಾ ಹತ್ತಿರವಾಗುತ್ತಿರುವ ವಿಷಯ ತಿಳಿಯುತ್ತಲೇ ಶಕುಂತಲಾ ದೇವಿ ಜ್ಯೋತಿಷಿಯನ್ನು ಕರೆತಂದು ಆತನ ಬಾಯಲ್ಲಿ ಸುಳ್ಳು ಹೇಳಿಸಿದ್ದಾಳೆ. ಜ್ಯೋತಿಷಿಯೊಬ್ಬ ಮನೆಗೆ ಬಂದು ಗೌತಮ್ ಮತ್ತು ಭೂಮಿಕಾ ಪತಿ-ಪತ್ನಿಯಂತೆ ದೈಹಿಕ ಸಂಪರ್ಕ ಹೊಂದಿದರೆ ಭೂಮಿಕಾ ಜೀವಕ್ಕೆ ಅಪಾಯವಿದೆ ಎಂದಿದ್ದಾನೆ. ಇದನ್ನು ಕೇಳಿ ಗೌತಮ್ಗೆ ಶಾಕ್ ಆಗಿದೆ. ಈ ವಿಷಯವನ್ನು ಗೌತಮ್ ಗೆಳೆಯ ಆನಂದ್ಗೆ ಹೇಳಿದ್ದಾನೆ ಬಿಟ್ಟರೆ ಪತ್ನಿಗೆ ಹೇಳಲಿಲ್ಲ. ಆತನಿಗೆ ಈಗ ಭೂಮಿಕಾ ಬೇಕು. ಯಾವುದೇ ಕಾರಣಕ್ಕೂ ಭೂಮಿಕಾಳನ್ನು ಕಳೆದುಕೊಳ್ಳಲು ಇಷ್ಟವಿಲ್ಲ.

ಇದೀಗ, ಭೂಮಿಕಾ ಅತ್ತೆ ಶಕುಂತಲಾದೇವಿಯ ಕುತಂತ್ರ ಭೂಮಿಗೆ ತಿಳಿದೆ. ಸತ್ಯ ತಿಳಿದ ಮಲ್ಲಿ ಭೂಮಿಕಾಗೆ ಹೇಳಿದ್ದಾಳೆ. ತನ್ನ ಅಮ್ಮನಿಗೆ ಹುಷಾರು ಇಲ್ಲ ಎಂದುಕೊಂಡು ಗೌತಮ್ ಕಷ್ಟಪಡುತ್ತಿದ್ದಾನೆ ಎಂದು ಭೂಮಿಕಾ ಅಂದುಕೊಂಡಿದ್ದಳು. ಆದರೆ ಅಸಲಿಗೆ ಗೌತಮ್ ಭೂಮಿಕಾ ಸಲುವಾಗಿ ಹೀಗೆ ಮಾಡುತ್ತಿದ್ದ, ಅದೂ ಜ್ಯೋತಿಷಿಯ ಸುಳ್ಳು ಮಾತನ್ನು ಕೇಳಿಕೊಂಡು. ಇದೀಗ ಸತ್ಯ ಗೊತ್ತಾಗುತ್ತಿದ್ದಂತೆಯೇ ಭೂಮಿಕಾ ಸಿಟ್ಟು ನೆತ್ತಿಗೇರಿದೆ. ಸತ್ಯ ತಿಳಿಯುವುದಕ್ಕೆ ಅತ್ತೆಗೆ ಮಾತ್ರೆ ಕೊಡುವುದಕ್ಕೆಂದು ಹೋಗಿದ್ದಾಳೆ. ಇದರಿಂದಾನೇ ಸತ್ಯ ಅರ್ಥವಾಗಿದೆ.

ಇದೀಗ ಜಾತಕವನ್ನು ಹಿಡಿದು ಅಮ್ಮನ ಬಳಿ ಹೋಗಿದ್ದಾಳೆ. ಮತ್ತೊಬ್ಬ ಜ್ಯೋತಿಷಿಯ ಬಳಿ ಜಾತಕ ತೋರಿಸಿದಾಗ ಇವರಿಬ್ಬರ ಜಾತಕ ಅದ್ಭುತವಾಗಿದೆ ಎಂದಿದ್ದಾರೆ ಜ್ಯೋತಿಷಿ. ಇನ್ನು ಹೇಳಿ ಕೇಳಿ ಭೂಮಿಕಾ ಈಕೆ. ಸುಮ್ಮನೆ ಇರ್ತಾಳಾ? ಇನ್ನು ಶುರು ಮಾಡ್ತಾಳೆ ತನ್ನ ಆಟ. ಅದೇನು ಎನ್ನುವುದು ಕುತೂಹಲವಷ್ಟೇ. ಇದರ ಪ್ರೊಮೋ ಬಿಡುಗಡೆಯಾಗ್ತಿದ್ದಂತೆಯೇ ಅಭಿಮಾನಿಗಳು ಥಹರೇವಾರಿ ಕಮೆಂಟ್ಸ್ ಮಾಡಿದ್ದಾರೆ. ಅತ್ಯಮ್ಮಾ ಸೊಸೆ ಭೂಮಿಗೆ ಎಲ್ಲಾ ಗೊತ್ತಾಗಿದೆ, ಇನ್ನು ನಿನ್ನ ಕೌಂಟ್ಡೌನ್ ಶುರುವಾಯ್ತು ಎನ್ನುತ್ತಿದ್ದಾರೆ.
