ವ್ಯವಸ್ಥೆಯ ಅವ್ಯವಸ್ಥೆಗೆ ಹಿಡಿದ ಕನ್ನಡಿ!
ಕನ್ನಡ ಚಿತ್ರ ನೋಡಲು ಕನ್ನಡಿಗರು ಥೀಯೆಟರ್ ಕಡೆ ಬರ್ತಿಲ್ಲ ಎಂಬ ಕೂಗು ಎದ್ದಿರುವ ಸಂದರ್ಭದಲ್ಲಿ ಇದೊಂದು ಸಿನಿಮಾ ಖಂಡಿತವಾಗಿಯೂ ಪ್ರೇಕ್ಷಕರನ್ನು ಕರೆತರುತ್ತೆ ಎಂಬ ಭರವಸೆ ಮೂಡಿಸಿತ್ತು. ಈಗ ಆ ಸಿನಿಮಾ ಈಗ ರಿಲೀಸ್ ಆಗಿ ಭರವಸೆಯನ್ನು ಹುಸಿ ಮಾಡಿಲ್ಲ. ಹೌದು, ನಾವು ಹೇಳ್ತಿರೋ ಸಿನಿಮಾ ದುನಿಯಾ ವಿಜಿ ನಟಿಸಿ ನಿರ್ದೇಶಸಿದ `ಭೀಮ’ ಚಿತ್ರದ ಬಗ್ಗೆ. ಈ ಹಿಂದೆ ‘ಸಲಗ’ ಚಿತ್ರವನ್ನು ನಿರ್ದೇಶಿಸಿ ನಟಿಸಿ ವಿಜಿ ಗೆದ್ದಿದ್ದರು. ಹಾಗಾಗಿ ಸಹಜವಾಗಿಯೇ `ಭೀಮ’ ಕುತೂಹಲ ಮೂಡಿಸಿದ್ದು ಸುಳ್ಳಲ್ಲ.
ಏನೇ ಪ್ಯಾನ್ ಇಂಡಿಯಾ ಭರಾಟೆ ಇದ್ದರೂ ಪಕ್ಕಾ ಲೋಕಲ್ ಕಂಟೆAಟ್‌ಗೆ ಇನ್ನು ಆಯಸ್ಸು ಇದೆ ಎನ್ನುವುದನ್ನು ಭೀಮ ಸಾಬೀತು ಪಡಿಸಿದೆ. ಬೆಂಗಳೂರಿನ ಗಲ್ಲಿ ಗಲ್ಲಿ ಕಿರಿಕ್ಕು, ಅಂಡರ್‌ವರ್ಲ್ಡ್, ರೌಡಿಸಂ, ಗನ್ನು, ಲಾಂಗು, ಡ್ರಗ್ಸು ಭೀಮಾ ಚಿತ್ರಕ್ಕೆ ಸರಕಾಗಿದೆ. ಪ್ರೇಮ್, ಪಿ. ಎನ್.ಸತ್ಯ, ಸೂರಿ ಹಾದಿಯಲ್ಲಿ ವಿಜಿ `ಭೀಮ’ನನ್ನು ಪ್ರೇಕ್ಷಕರ ಮುಂದೆ ತಂದು ಗೆದ್ದಿದ್ದಾರೆ.
ಈ ಹಿಂದೆ ಡ್ರಗ್ಸ್ ವ್ಯಸನದ ಕಥೆ ಎನ್ನುವುದು ಬಿಟ್ಟರೆ ಹೆಚ್ಚೇನು ಚಿತ್ರತಂಡ ಬಿಟ್ಟುಕೊಡದೆ, ಒಂದು `ಅದ್ಭುತ ಕಂಟೆAಟ್’ ಇದೆ ಎಂದು ಹೇಳಿಕೊಂಡಿದ್ದರು. ಸಿನಿಮಾ ರಿಲೀಸ್ ಆಗಿ ಚಿತ್ರತಂಡ ಭರವಸೆಯನ್ನು ಉಳಿಸಿಕೊಂಡಿದ್ದಾರೆ. ನಿಜಕ್ಕೂ ಇಲ್ಲಿವರೆಗೂ ಭಾರತೀಯ ಚಿತ್ರರಂಗದಲ್ಲಿ ರಿವೀಲ್ ಆಗದ ಆಘಾತಕಾರಿ ಸಂಗತಿಯನ್ನು ನಿರ್ದೇಶಕರು ಕೆಚ್ಚೆದೆಯಿಂದ ತೆರೆಯಮೇಲೆ ತಂದಿದ್ದಾರೆ. ಚರಣ್ ರಾಜ್ ಸಾಂಗ್ಸ್ ಇಡೀ ಸಿನಿಮಾವನ್ನು ಬೆರೆಯದೇ ಲೆವೆಲ್‌ಗೆ ತೆಗೆದುಕೊಂಡೋಗಿದೆ. ಸಿನಿಮಾ ಮೇಲಿನ ಕುತೂಹಲ ಹೆಚ್ಚಿಸಿತ್ತು. ಕೊನೆಗೂ `ಭೀಮ’ ಬೆಳ್ಳಿಪರದೆಗೆ ಎಂಟ್ರಿ ಕೊಟ್ಟು ತನ್ನ ಕಥೆಯನ್ನು ಅದ್ಭುತವಾಗಿ ಹೇಳಿ ಪ್ರೇಕ್ಷಕನಿಗೆ ಅಚ್ಚರಿ ನೀಡಿದ್ದಾನೆ. `ಭೀಮ’ನ ಕಥೆ ಬಿಚ್ಚಿಕೊಳ್ಳಯವುದೇ ಜೆ.ಸಿ ರಸ್ತೆ ಪಕ್ಕ ಗ್ಯಾರೇಜ್‌ವೊಂದರಲ್ಲಿ, ಮೆಕಾನಿಕ್ ಜಾವಾ ರಾಮಣ್ಣನ ಗ್ಯಾರೇಜ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಡ್ರ್ಯಾಪಗನ್ ಮಂಜ ಗಾಂಜಾ ಸಪ್ಲೆಯರ್ ಆಗಿ ಇಡೀ ಏರಿಯಾ ಹುಡುಗರನ್ನು ನಶೆಯಲ್ಲಿ ತೇಲಿಸುತ್ತಿರುತ್ತಾನೆ. ಅದೇ ನಶೆಯಲ್ಲಿ ಮುಳುಗಿ ರಾಮಣ್ಣ ಮಗ ಸಾಯುತ್ತಾನೆ. ಆಗ ಗ್ಯಾರೇಜ್‌ಯಿಂದ ಮಂಜು ದೂರಾಗುತ್ತಾನೆ. ಅದೇ ಗ್ಯಾರೇಜ್‌ಗೆ ಅನಾಥ ಹುಡುಗ ಭೀಮ ಎಂಟ್ರಿ ಆಗುತ್ತದೆ.
ರಾಮಣ್ಣನ ಗ್ಯಾರೇಜ್ ಗಾಂಜಾ ದಂಧೆ ಕಾರಣಕ್ಕೆ ಕೆಟ್ಟ ಹೆಸರುಪಡೆದುಕೊಂಡಿರುತ್ತದೆ. ಆ ಕೆಟ್ಟ ಹೆಸರನ್ನು ಅಳಿಸಲು ಭೀಮ ಪಣ ತೊಡುತ್ತಾನೆ. ಈ ಹಾದಿಯಲ್ಲಿ ಏನೆಲ್ಲಾ ಆಗುತ್ತದೆ. ಯಾರನ್ನೆಲ್ಲಾ, ಹೇಗೆ ಭೀಮ ಕಳೆದುಕೊಳ್ಳುತ್ತಾನೆ? ಅದಕ್ಕೆ ಪ್ರತಿಕಾರಕ್ಕಾಗಿ ಭೀಮ ಹಿಡಿದ ದಾರಿ ಯಾವುದು? ಗಾಂಜಾ, ಡ್ರಗ್ಸ್ ದಂಧೆಯ ಕಿಂಗ್ ಪಿನ್ ಆಗಿ ಬೆಳೆಯುವ ಮಂಜನನ್ನು ಮಟ್ಟ ಹಾಕ್ತಾನಾ? ಮಂಜನ ರಾಜಕೀಯ ಬದುಕು ಏನಾಗುತ್ತೆ? ಅನ್ನೋದಕ್ಕೆಲ್ಲಾ ನಿರ್ದೇಶಕರು ತೆರೆಮೇಲೆ ಪರಿಣಾಮಕಾರಿಯಾಗಿ ಉತ್ತರ ಕೊಟ್ಟಿದ್ದಾರೆ.
ಇವತ್ತಿನ ಅಂಡರ್‌ವರ್ಲ್, ಡ್ರಗ್ಸ್ ದಂಧೆ, ಅದರಿಂದ ಬಲಿಯಾಗುತ್ತಿರುವ ಯುವ ಜನತೆ. ಅದಕ್ಕೆಲ್ಲಾ ಕಡಿವಾಣ ಹಾಕಬೇಕು ಎನ್ನುವ ಆಶಯದೊಂದಿಗೆ `ಭೀಮ’ ಸಿನಿಮಾ ಕಥೆ ಸಾಗುತ್ತದೆ. ಭೀಮ ಮೂಲಕ ದುನಿಯಾ ವಿಜಯ್ ಸಲಗ ನಂತರ ಮತ್ತಷ್ಟು ಲೋಕಲ್ ಕಥೆ ಹೇಳುವ ಸಾಹಸ ಮಾಡಿ ಮತ್ತೊಮ್ಮೆ ಗೆದ್ದಿದ್ದಾರೆ. ಚಿಲ್ಟಾರಿಗಳೆಲ್ಲಾ ಗಾಂಜಾ ನಶೆಯಲ್ಲಿ ತೇಲುತ್ತಾ, ಪಕ್ಕಾ ಲೋಕಲ್ ಅವಾಚ್ಯ ಶಬ್ಧಗಳನ್ನಾಡುತ್ತಾ, ವಿಭಿನ್ನ ಪಾತ್ರಗಳು ಎಂಟ್ರಿ ಆಗುತ್ತಾ.. ಸಿನಿಮಾ ಸಾಗುತ್ತದೆ. ಚಿತ್ರತಂಡ `ಎ’ ಸರ್ಟಿಫಿಕೇಟ್ ಉಳಿಸಿಕೊಂಡು, ಅವಾಚ್ಯ ಶಬ್ಧಗಳನ್ನು ಟ್ರಿಮ್ ಮಾಡದಿರುವುದು ಚಿತ್ರಕ್ಕೆ ಪ್ಲಸ್ ಆಗಿದೆ. ಏಕೆಂದರೆ ಸ್ಮಮ್‌ನಲ್ಲಿನ ಪಾತ್ರಗಳ ಬಾಯಲ್ಲಿ ಭಗವಧ್ಗೀತೆಯನ್ನು ನಿರೀಕ್ಷಿಸಬಾರದರು.
ದುನಿಯಾ ವಿಜಯ್, ಅಶ್ವಿನಿ ಅಂಬರೀಶ್, ಅಚ್ಯುತ್ ಕುಮಾರ್, ರಂಗಾಯಣ ರಘು, ಗೋಪಾಲಕೃಷ್ಣ ದೇಶಪಾಂಡೆ, ಡ್ರಾಗನ್ ಮಂಜು, ಕಾಕ್ರೋಚ್ ಸುಧೀ, ಪ್ರಿಯಾ.. ಹೀಗೆ ಎಲ್ಲರೂ ಹಠಕ್ಕೆ ಬಿದ್ದು ನಟಿಸಿದ್ದು.. ಪ್ರತಿಯೊಂದು ಚಿಕ್ಕ ಪುಟ್ಟ ಪಾತ್ರಗಳನ್ನೂ ನಾಜೂಕಿನಿಂದ ಡಿಸೈನ್ ಮಾಡಲಾಗಿದೆ. ಉಳಿದಂತೆ.. ಚಿತ್ರದ ಛಾಯಾಗ್ರಹಣ, ಸಂಕಲನ, ನೃತ್ಯ ನಿರ್ದೇಶನ.. ಹೀಗೆ ಪ್ರತಿಯೊಂದು ವಿಭಾಗದಲ್ಲೂ ಚಿತ್ರ ಪ್ರೇಕ್ಷಕನನ್ನು ಹಿಡಿದಿಟ್ಟುಕೊಳ್ಳುವ ಪ್ರಯತ್ನ ಚಿತ್ರತಂಡ ಮಾಡಿದೆ. ನಿರ್ಮಾಪಕರಾದ ಕೃಷ್ಣ ಸಾರ್ಥಕ್ ಮತ್ತು ಜಗದೀಶ್ ಅವರ ಸಾಹಸಕ್ಕೆ ಕನ್ನಡಿಗರು ಕೈ ಹಿಡಿಯು ಲಕ್ಷಣಗಳು ಕಾಣುತ್ತಿವೆ. ಕೊನೆಗೂ ಭೀಮ ಪ್ರೇಕ್ಷಕನನ್ನು ಕೈಹಿಡಿದು ಚಿತ್ರಮಂದರಿಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದ್ದು ಸಧ್ಯದ ಸಂಭ್ರಮದ ಕ್ಷಣ.