ಹುಟ್ಟುಹಬ್ಬದ ಸಂಭ್ರಮದಲ್ಲಿ ಡ್ಯಾನ್ಸ್ ಕ್ವೀನ್ ಭಾವನ ರಾವ್
ಭಾವನ ರಾವ್ : ಸ್ಯಾಂಡಲ್ ವುಡ್ ಸಿನಿ ಪ್ರಿಯರಿಗೆ ಈ ಹೆಸರು ಚಿರಪರಿಚಿತ. ಯಾಕಂದ್ರೆ ತಮ್ಮ ನಟನಾ ಕೌಶಲ್ಯದಿಂದ ಕನ್ನಡಿಗರ ಮನಗೆದ್ದ ನಟಿ ಭಾವನ ರಾವ್ . ಸ್ಯಾಂಡಲ್ವುಡ್ ನಟಿ ಭಾವನ ರಾವ್ ಅವರಿಗೆ ಇಂದು ಜನ್ಮದಿನದ ಸಂಭ್ರಮ. ಭಾವನ ರಾವ್ ಜನ್ಮದಿನದ ಹಿನ್ನೆಲೆಯಲ್ಲಿ ಚಿತ್ರರಂಗದ ಗಣ್ಯರು, ಸ್ನೇಹಿತರು, ಅಭಿಮಾನಿಗಳು ಜನ್ಮದಿನದ ಶುಭಾಶಯ ಕೋರುತ್ತಿದ್ದಾರೆ.
ಕರ್ನಾಟಕದ ಶಿವಮೊಗ್ಗದಲ್ಲಿ ಜನಿಸಿದ ಮಲೆನಾಡಿನ ಚೆಲುವೆ ಭಾವನ ರಾವ್ ಮೊದಲ ಬಾರಿಗೆ ಚಿತ್ರರಂಗಕ್ಕೆ ಕಾಲಿಟ್ಟಿದ್ದು 2008ರಲ್ಲಿ ಬಿಡುಗಡೆಯಾದ ಫೇಮಸ್ ಸಿನಿಮಾ ʼಗಾಳಿಪಟ ʼ ಮೂಲಕ. ಈ ಚಿತ್ರದಲ್ಲಿ ಪಾವನಿ ಎಂಬ ಪಾತ್ರಕ್ಕೆ ಬಣ್ಣ ಹಚ್ಚಿದ ಇವರು ಆ ಬಳಿಕ ಸ್ಯಾಂಡಲ್ವುಡ್ ನ ಪ್ರಖ್ಯಾತ ನಟಿಯರಲ್ಲಿ ಒಬ್ಬರಾದರು. ಇನ್ನು 2008ರಲ್ಲಿ ತಮಿಳು ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದರು.
ಅನೇಕ ಪ್ರಶಸ್ತಿಗಳನ್ನ ಪಡೆದಿರುವ ಈ ಸುಂದರಿಯ ನೃತ್ಯಕ್ಕೆ ಅದೆಷ್ಟೋ ಮಂದಿ ಫಿದಾ ಆಗಿದ್ದಾರೆ. ಯಾವುದೇ ತರಬೇತಿ ಪಡೆಯದೆಯೇ ಈಕೆ ನಾಟ್ಯ ಮಾಡುವ ಶೈಲಿ ಎಲ್ಲರನ್ನು ಅಚ್ಚರಿಗೊಳಿಸುತ್ತದೆ.
ದಕ್ಷಿಣ ಭಾರತ ಸಿನಿರಂಗದ ಈ ಮಹೋನ್ನತ ಕಲಾವಿದೆ, ನೃತ್ಯಗಾರ್ತಿ ಇಂದು ತಮ್ಮ ಹುಟ್ಟುಹಬ್ಬವನ್ನು ಆಚರಣೆ ಮಾಡಿಕೊಳ್ಳುತ್ತಿದ್ದಾರೆ. ತನ್ನ ಸಹಜ ಅಭಿನಯ ಮತ್ತು ಸೌಂದರ್ಯದ ಮೂಲಕ ಪಡ್ಡೆ ಹುಡುಗರ ಮನಗೆದ್ದ ಚೆಲುವೆ.
ಇನ್ನು ಬಿಡುಗಡೆಯಾಗಬೇಕಾಗಿರುವ “ಹೊಂದಿಸಿ ಬರೆಯಿರಿ “ಚಿತ್ರದಲ್ಲಿ ಭೂಮಿಕಾ ಎನ್ನುವ ಪಾತ್ರದಲ್ಲಿ ನಟಿಸಿರುವ ಈ ಕನ್ನಡತಿ ಇನ್ನಷ್ಟೂ ಯಶಸ್ಸು ಸಾಧಿಸಲಿ ಎಂಬುದೇ ನಮ್ಮ ಆಶಯ.