ಕಲೆಯ ಬೇರಿನ ಬಳ್ಳಿಯಲ್ಲಿ ಕಲೆಯ ಎಲೆಯೆ ಕುಡಿಯೊಡೆಯುವುದು ಅನ್ನುವ ಮಾತು ಸತ್ಯ. ಭಾವನ ರಾವ್ ಮನೆಯಲ್ಲಿ ಯಾರಿಗೂ ಸಿನಿಮಾ ನಂಟಿರಲಿಲ್ಲಾ ನಿಜ, ಆದರೆ ಕಲೆಯ ನಂಟಿತ್ತು. ಭಾವನಾ ತಾಯಿ ಖುದ್ದು ಭರತ ನಾಟ್ಯ ಕಲಾವಿದೆ, ಅದೇ ಕಲೆಯ ನಂಟು ಭಾವನಾರನ್ನು ಭರತ ನಾಟ್ಯ ಕಲಿಯಲು ಪ್ರೇರೇಪಿಸಿತು. ತನ್ನ ಐದನೇ ವಯಸ್ಸಿಗೇ ಭರತನಾಟ್ಯ ಕಲಿಯೊಕೆ ಶುರುಮಾಡಿದರು. ನೃತ್ಯ ಮಾಡುತಿದ್ದ ಕಾಲ್ಗಳು ಚಂದನವನದ ದಾರಿ ಹುಡುಕುತಿದ್ದರೆ ಕಂಗಳು ನಟಿಯಾಗುವ ಕನಸು ಹೊತ್ತು ಕುಣಿಯುತಿತ್ತು. ಭರತ ನಾಟ್ಯದಲ್ಲಿ ಮುಖಭಾವವನ್ನು, ನಾಟ್ಯ ರಸದೊಂದಿಗೆ ನಟನಾ ರಸವನ್ನು ಅರಿತುಕೊಂಡ ಭಾವನಾ ಟಿ.ವಿ ವಾಹಿನಿಯೊಂದರ ನಿರೂಪಕಿಯಾಗಿ ಕೆಲಸ ಆರಂಭಿಸಿದರು. ವಾಹಿನಿಯಲ್ಲಿ ತುಂಬಾ ಬ್ಯುಸಿಯಾಗಿ, ಆಕ್ಟಿವ್ ಆಗಿ ಸದಾ ಚಟುವಟಿಕೆಯಿಂದ ಇರುತಿದ್ದ ಭಾವನಾ ಬಿದ್ದಿದ್ದು ಸಂಕಲನಕಾರ, ಛಾಯಾಗ್ರಾಹಕ ಶ್ರೀಕ್ರೇಜಿಮೈಂಡ್ಸ್ ಅನ್ನುವವರ ಕಣ್ಣಿಗೆ, ಅದೇ ಶ್ರೀಯವರು ಯೋಗರಾಜ್ ಭಟ್ರು ಹುಡುಕುತಿದ್ದ ಗಾಳಿಪಟದ ಪಾವನಿ ಪಾತ್ರಕ್ಕೆ ಭಾವನಾರನ್ನು ಆಡಿಷನ್‌ಗೆ ಕಳಿಸಿಕೊಟ್ಟರು, ಮುಂದೆ ಅಲ್ಲಿ ನಡೆದುದ್ದು ರೊಚಕ ಕಹಾನಿ….
ಪಾವನ ಪಾತ್ರದಿಂದ ಬದುಕು ಪಾವನವಾಯ್ತು!
ಭಾವನ ನೀನು ಏನಾಗುತ್ತೀಯಮ್ಮ ಎಂದು ಕೇಳುತಿದ್ದವರಿಗೆಲ್ಲಾ ಹೇಳಿದ್ದು ಉತ್ತರವನ್ನು ನಿಜವಾಗಿಸುವ ಸಮಯ ಬಂದಿತ್ತು. ಅದು ಯೊಗರಾಜ್ ಭಟ್ರ ನಿರ್ದೇಶನದ ಸಿನೆಮಾದಲ್ಲಿ. ಅಲ್ಲಿಂದ ಭಾವನ ಪಾವನಿಯಾಗಿ ಗಾಳಿಪಟದಲ್ಲಿ ಹಾರಾಡುತಿದ್ದರು ಕನ್ನಡದ ನಟಿಯಾಗಿ. `ಇನ್ನು ನೀನು ಏನಾಗ್ತಿಯಮ್ಮ’ ಅಂತಾ ಯಾರಾದ್ರೂ ಕೇಳಿದ್ರೇ ನಾನು ನಟಿ ಆಗಿದ್ದೀನಿ ಅಂತಾ ಹೇಳ್ಬಹುದು ಅಂದ್ಕೊಂಡು, ಸಿನಿಮಾ ಪ್ರಪಂಚಕ್ಕೆ ಕಾಲಿಟ್ಟವರು ಭಾವನ. ಮನೆಯವರಿಗೆ ಸಿನೆಮಾ ರಂಗ ಇಷ್ಟವಿಲ್ಲದಿದ್ದರೂ ರಂಗ ಏರಿಯೆ ಬಿಟ್ಟಳು, ಕೊನೆಗೆ ತಿಳಿದದ್ದು ಅಮ್ಮನ ಆಸೆಯ ಕಣಜದಲ್ಲಿ ಇವರೂ ನಟಿಯಾಗುವ ಆಸೆ ಇತ್ತಂತ್ತೆ.
ಬಾಲಿ ದೇಶದಲ್ಲಿ ದಿಂ..ದೀಂ..ತ..ನಾ!
ಗಾಳಿಪಟ ಬಂದಮೇಲೆ ಭಾವನಾಳ ಪಾವನಿ ಪಾತ್ರ ಗಂಡುಡುಗರಿಗಂತೂ ಇನ್ನಿಲ್ಲದ ಸ್ಪೂರ್ತಿ ತಂದಿತ್ತು. ಲವ್ ಬ್ರೆಕ್ ಅಪ್ ಆದ್ಮೆಲೆ ಇಂತಾ ಒಬ್ಬಳು ತುಂಟು ಹುಡುಗಿ ಗಂಟು ಬಿದ್ದಾಳು ಎಂದು ಗಂಡ್ ಮಕ್ಳು ಕಾಯುವಷ್ಟು ಮನೊಜ್ಙ ಅಬಿನಯ ಮಾಡಿದ್ದರು ಭಾವನ. ಆ ಚಿತ್ರ ಬಿಡುಗಡೆಯಾದ ಎಷ್ಟೊ ದಿನದ ನಂತರ ಭಾವನ ಇಂಡೊನೇಷ್ಯಾದ ಬಾಲಿಗೆ ಪ್ರವಾಸ ಹೊಗಿದ್ದರಂತೆ ಆಗ ಅಲ್ಲಿ ಭಾವನಾರನ್ನು ನೊಡಿದ ಕನ್ನಡಿಗರು.. ನ.. ದಿಂ..ದೀಂ..ತ..ನಾ.. ಎಂದು ಕೂಗಿ ಕರೆದಿದ್ದರಂತೆ, ಭಾವನಾಳನ್ನು ನೊಡಿದ ಕನ್ನಡದ ಹುಡುಗರು ಅವರವರ ಹುಡುಗಿಯ ಕೈ ಹಿಡಿದು `ನಿದ್ದೇ ಬರದಾ ಕಣ್ಣಾ ಮೇಲೆ.. ಕೈಯಾ ಮುಗಿವೆ.. ಚುಂಬಿಸು ಒಮ್ಮೆ’ಎಂದು ಹಾಡುತ್ತಿದ್ದರಂತೆ. ಇದೊಂದು ಮರೆಯದ ಅನುಭವ ಎಂದು ಆಗಾಗ ನೆನೆದುಕೊಳ್ತಾರೆ.
ಮನೆಯೇ ಮಂತ್ರಾಲಯ
ಎಷ್ಟೇ ಊರು ಸುತ್ತಿ ಬಂದ ಮೇಲೂ ಭಾವನಾಗೆ ಮನೆಯೇ ಸ್ವರ್ಗ. ಶೂಟಿಂಗ್‌ಗೆ ಅಂತಾ ಎಲ್ಲೆಲ್ಲಿ ಅಲೆದು ಬಂದರೂ ಯಾವ ಸುಂದರ ತಾಣ ನೊಡಿದರೂ, ಎಷ್ಟೇ ರೊಮಾಂಚಿತಳಾದರೂ, ಎಷ್ಟೇ ಪುಳಕಿತಳಾದರೂ, ಅದು ಬಹಳ ಹೊತ್ತು ಭಾವನಾ ಮನಸಲ್ಲಿ ಆ ಪುಳಕ. ಆ ರೊಮಾಂಚನ ಉಳಿಯುವುದಿಲ್ಲಾ. ಈ ಸೌಂದರ್ಯವನ್ನು ನೋಡಿಕೊಂಡು ಹೋಗಬೇಕು ಕಣ್ತುಂಬಿಸಿಕೊಂಡು ಹೊರಡಬೇಕು ಆದರೇ ಜೊತೇಲೇ ಕರೆದೊಯ್ಯಲು ಸಾದ್ಯವಿಲ್ಲವಲ್ಲಾ ಅನ್ನೊದು ಭಾವನಾ ಭಾವನೆ. ಎಲ್ಲೇ ಇದ್ದರೂ ಭಾವನಾಗೆ ಬೆಂಗಳೂರೆ ಇಷ್ಟ. ಬೆಂಗಳೂರಿನ ಮನೆಯೇ ಇಷ್ಟ. ಎಲ್ಲೇ ಇದ್ದರೂ ಕೆಲಸ ಮುಗಿದೊಡನೆ ಮನೆಗೆ ಗುಡು ಗುಡು ಎಂದು ಓಡಿ ಬರುವವರು ಭಾವನ.
ರಾಜ್ ಎಂಬ ಅಚ್ಚರಿ!
`ಜೀವ ಕಳೆವ ಅಮೃತಕೆ ಒಲವೆಂದು ಹೆಸರಿಡಬಹುದೆ? ಪ್ರಾಣ ಉಳಿಸೊ ಖಾಯಿಲೆಗೆ ಪ್ರೀತಿಯೆಂದೆನ್ನಬಹುದೆ? ಈ ಸಾಲುಗಳು ಭಾವನಾಗೆ ಅಚ್ಚುಮೆಚ್ಚು. ಭಾವನಾಗೆ ರಾಜ್ ಕುಮಾರ್ ಇಷ್ಟ, ಅವರ ಹಳೇಯ ಸಿನೆಮಾಗಳು ಇಷ್ಟ, ಅದರಲ್ಲೂ ಪೌರಾಣಿಕ ಸಿನೆಮಾ ಅಂದ್ರೇ ಮೇಲೆ ಏಳದೇ ಕೂತಲ್ಲೇ ನೊಡುತ್ತಾರೆ. ಹುಲಿ ಹಾಲಿನ ಮೇವು, ಮಯೂರ ಬಬ್ರುವಾಹನ ಸಿನೆಮಾಗಳು ಯಾವಾಗ ನೊಡಲು ಸಿಕ್ಕರು ನೊಡುತ್ತಾ ಕುಳಿತುಬಿಡುತ್ತಾರೆ. ಇಂದಿಗೂ ರಾಜ್ ಅವರ ನಟನೆಯ ಬಗ್ಗೆ ಅಗಾಧವಾದ ಅಚ್ಚರಿಯಿದೆ. ಹಿಂದಿಯ ಅಮಿತಾಬ್ ಬಚ್ಚನ್ ಭಾವನ ತುಂಬಾ ಇಷ್ಟ ಪಡುವ ಮತ್ತೊಬ್ಬ ಕಲಾವಿದ. ಈ ಕಲಾವಿದರ ಬಗ್ಗೆ ಭಾವನಾಳಿಗೆ ಇರುವ ನೊಟವೇ ಬೇರೆ, ಅವರÀ ಪಾಲಿಗೆ ಇವರು ಎಂದಿಗೂ ಎವರ್‌ಗ್ರೀನ್ ಹೀರೊಗಳೇ.
ಶ್ವಾನ ಪ್ರೇಮದ ಹಿಂದೆ..
ಭಾವನಾಗೆ ತುಂಬಾ ಬೇಜಾರಾದಾಗ ‘ಲಯನ್ ಕಿಂಗ್’ ಅನ್ನೊ ಕಾರ್ಟೂನ್ ಸಿನೆಮಾ ನೊಡ್ತಾರೆ. ಮನಸ್ಸಿಗೆ ತುಂಬಾ ನೋವಾಯಿತು, ಯಾರೊ ಏನೊ ಅಂದರು ಅಂದಾಗ ಆ ವಿಷಯವನ್ನಾ ಮತ್ತೊಬ್ಬರ ಜೊತೆ ಮಾತಾಡಿ ಹಂಚಿಕೊಳ್ಳುವುದಿಲ್ಲಾ ಬದಲಿಗೆ ತನ್ನ ಮುದ್ದಿನ ನಾಯಿಯೊಂದಿಗೆ ಸ್ವಲ್ಪ ಸಮಯ ಆಟ ಆಡಿಕೊಂಡು ಕಾಲ ಕಳೆದು ಬಿಡುತ್ತಾರೆ. `ಪ್ರಾಣಿಗಳ ಬಳಿ ನಮ್ಮ ಕಷ್ಟ-ಸುಖ ಮಾತಾಡದೆ ಇದ್ದರೂ ಅವರೊಟ್ಟಿಗೆ ಒಂದಷ್ಟೊತ್ತು ಇದ್ದು ಬಿಟ್ಟರೆ ಅವುಗಳು ನಮ್ಮ ಮೂಡ್ ಅರ್ಥ ಮಾಡಿಕೊಂಡು ನಮ್ಮ ಭಾವನೆಗಳಿಗೆ ಸರಿಯಾಗಿ ಸ್ಪಂದಿಸುತ್ತವೆ’ ಅನ್ನೋದು ಭಾವನಾ ಭಾವನೆ.
ಭಾವನೆಗಳ ಲೋಕದಲ್ಲಿ ಭಾವನಾ
ಭಾವನಾ ತುಂಬಾ ಭಾವನಾತ್ಮಕ ಹುಡುಗಿ ತನ್ನ ಚಿಕ್ಕ ಚಿಕ್ಕ ಖುಷಿಗಳನ್ನೆ ದೊಡ್ಡ ದೊಡ್ಡ ಸಂಭ್ರಮವೆAದು ಭಾವಿಸುತ್ತಾರೆ. ಯಾರಾದರೂ ಹೊಸದಾಗಿ ಪರಿಚಯವಾದ್ರೇನೆ ತುಂಬಾ ಖುಷಿಪಡುತ್ತಾಳೆ ಇವರು. ಬದುಕಿಗೊಬ್ಬ ಹೊಸ ಬಂಧು ಸಿಕ್ಕಿದ ಅಂತಾ. ಇನ್ನೂ ಯಾರೊ ಶೂಟಿಂಗ್ ಸ್ಪಾಟ್‌ನಲ್ಲಿ ಗೊತ್ತಿರದ ಊರಿನಲ್ಲಿ, ನೊಡಿರದ ಜಾಗದಲ್ಲಿ, ಪರಿಚಯವೇ ಇರದ ಜನರು ಊಟಕ್ಕೆ ಕರೆದು ಊಟ ಹಾಕಿ ಉಪಚಾರ ಮಾಡಿ ಕಳಿಸ್ತಾರಲ್ಲಾ ಇದ್ಯಾವ ಜನ್ಮದ ಪುಣ್ಯ ಎಂದು ನೆನೆಯುತ್ತಾರೆ. `ಸಂಬಂಧವೇ ಇರದ ಜನರು ನಮ್ಮನ್ನು ಇಷ್ಟೊಂದು ಪ್ರೀತಿಸುತ್ತಾರಲ್ಲಾ ನಾವೇನು ಮಾಡಿದ್ದೇವೆ ಇವರಿಗೆ’ ಅಂತಹ ಸಾವಿರಾರು ಕ್ಷಣಗಳ, ಹಲವಾರು ಜನಗಳ ಜೊತೆಗೆ ಕಳೆದ ಮಧುರ ಕ್ಷಣಗಳ ನೆನಪಿದೆ ಭಾವನಾಳ ಅಂತರಂಗದಲ್ಲಿ. ಇದಕಿಂತ ದೊಡ್ಡ ಖುಷಿಯಿಲ್ಲಾ ಅನ್ನೋದು ಅವರ ಭಾವನೆ.
ಪ್ರತಿಭೆಗೆ ಎಲ್ಲಿದೆ ಎಲ್ಲೆ..!
ಭಾವನ ಸಿನೆಮಾ ರಂಗದಲ್ಲಿ ಸದಾ ಚಟುವಟಿಕೆಯ ಹುಡುಗಿ. ಅವರು ಕನ್ನಡದಲ್ಲಿ, ತಮಿಳಿನಲ್ಲಿ, ಬಾಲಿವುಡ್ ಚಿತ್ರಗಳಲ್ಲಿ ನಟಿಸಿ, ಎಲ್ಲಾ ಭಾಷೆಗಳಲ್ಲೂ ಸೈ ಅನ್ನಿಸಿಕೊಂಡರಷ್ಟೇ ಅಲ್ಲದೆ ಸಾಕಷ್ಟು ಪ್ರತಿಷ್ಠಿತ ಪ್ರಶಸ್ತಿಗಳಿಗೂ ಭಾಜನರಾದರು. ಓ.ಟಿ.ಟಿ ಪ್ಲಾಟ್ ಫಾರ್ಮನಲ್ಲಿ ಈಗ ಬ್ಯುಸಿ ಇರುವ ಭಾವಾನರಿಗೆ ಅವಳಿರನ್ನೂ ಮಾಡದೇ ಉಳಿದ ಎಷ್ಟೋ ಪಾತ್ರಗಳಿಗೆ ಜೀವ ತುಂಬುವ ಹಂಬಲದಲ್ಲಿದ್ದು, ಪೌರಾಣಿಕ ಪಾತ್ರಗಳಲ್ಲಿ ಅಭಿನಯಿಸುವ ಕನಸಿದೆ. ಗಾಳಿಪಟ ಚಿತ್ರದ ಪಾವನಿ, ಹೊಂದಿಸಿ ಬರೆಯಿರಿಯ ಭೂಮಿಕ ಇವರಿಗೆ ಖುಷಿ ಕೊಟ್ಟ ಪಾತ್ರಗಳು. ಇನ್ನು, ಎರಡು ಚಿತ್ರಗಳು ಬಿಡುಗಡೆಗೆ ಸಿದ್ಧವಾಗಿದ್ದು, ಕನ್ನಡ ಮತ್ತು ಬಾಲಿವುಡ್‌ನ ಎರಡು ಚಿತ್ರಗಳ ಶೂಟಿಂಗ್ ನಡೆಯುತ್ತಿವೆ, ಇನ್ನೊಂದೆರಡು ಚಿತ್ರಗಳು ಮಾತುಕತೆಯ ಹಂತದಲ್ಲಿದೆ.
ಭಾವನೆಗೆ ಭಾಷೆಯೇ ಮೂಲ
ಭಾವನಾರನ್ನು ತಮಿಳು ಚಿತ್ರರಂಗ ಕರೆದಾಗ ಅವರಿಗೆ ತಮಿಳಿನ ಗಂಧ-ಗಾಳಿಯೂ ಗೊತ್ತಿರಲಿಲ್ಲಾ, `ಭಾಷೆ ಅರಿಯದೆ ಭಾವನೇ ಮೂಡಿಸುವುದು ನನ್ನ ಕೆಲಸಕ್ಕೆ ಕೊಡುವ ಗೌರವವಲ್ಲಾ’ ಎಂದು ತಿಳಿದು ೪೦ ದಿನದಲ್ಲಿ ತಮಿಳು ಕಲಿಯಿರಿ ಪುಸ್ತಕ ತೆಗೆದುಕೊಂಡು ಆ ೪೦ ದಿನದಲ್ಲಿ ಸಾಕಷ್ಟು ತಮಿಳು ಕಲಿತುಕೊಂಡು, ತಮಿಳಿನ ಸ್ಲ್ಯಾಂಗ್ ಬಗ್ಗೆ ತಿಳಿದುಕೊಂಡಿದ್ದಾರೆ. ಮದುರೈನಲ್ಲಿನ ತಮಿಳು ಭಾಷೆ, ಮದ್ರಾಸ್ ನ ತಮಿಳು ಭಾಷೆ, ಹೀಗೆ ಅಲ್ಲಿಯ ಪ್ರಾಂತೀಯ ತಮಿಳನ್ನು ತಿಳಿದುಕೊಂಡು ನಿರ್ದೆಶಕರ ಮುಂದೆ ನಿಂತಿದ್ದರು. ಭಾವನಾರವರ ಈ ಕಮಿಟ್ಮೆಂಟ್ ನೊಡಿಯೇ ಅಲ್ಲಿನ ನಿರ್ದೆಶಕರು ಖುಷಿಯಾಗಿದ್ದರು. ಭಾವನಾರವರು ಮೊದಲು ತಮಿಳಿನಲ್ಲಿ ಅಭಿನಯಿಸಿದ್ದೆ ತಮಿಳಿನ ಖ್ಯಾತ ಕಥೆಗಾರ ಕ್ರೇಜಿ ಮೊಹನ್‌ರವರು ಮಾಡಿದ್ದ ಕತೆಗೆ. ಚಿತ್ರದ ಹೆಸರು ‘ಕೋಲ ಕೋಲಯಾ ಮುಂದಿರಿಕಾ’, ಇದೊಂದು ಹಾಸ್ಯ ಪ್ರಧಾನ ಚಿತ್ರವಾಗಿದ್ದು, ಇದರ ನಿರ್ದೆಶಕಿ ಮಧುಮಿತಾ. ಮಹಿಳಾ ನಿರ್ದೆಶಕಿ. ಜಯರಾಮ್, ಕಾರ್ತಿಕ್ ಕುಮಾರ್ ಮುಖ್ಯಭೂಮಿಕೆಯಲ್ಲಿದ್ದರು.
ಬಹುತ್ ಅಚ್ಚಾ ಕಿಯಾ..!
ಬಾಲಿವುಡ್ ನಲ್ಲಿ ಭಾವನಾಗೆ ಇದ್ದ ಮೊದಲ ಶಾಟ್ ಸುನಿಲ್ ಶೆಟ್ಟಿ ಜೊತೆ. ನಮ್ಮ ಅಪ್ಪಟ ಕನ್ನಡದ ಹುಡುಗಿ ಭಾವನ ರಾವ್ ಮುಂಬೈಗೆ ಹೊಗಿ ಬಾಲಿವುಡ್‌ನ `ಧಾರಾವಿ ಬ್ಯಾಂಕ್’ನಲ್ಲಿ ಲಾಯರ್ ದೀಪ ಆಗಿ ಬದಲಾದಗಿ ಪಾತ್ರವಾದಳು ಭೂಗತ ಲೊಕದ ದೊರೆಯ ದ್ವೇಷಿಸುವ ಆತನ ಮಗಳಾಗಿ ಅದ್ಭುತ ಅಭಿನಯ ನೀಡಿದರು. ಡೈರೆಕ್ಟರ್ ಆಕ್ಷನ್ ಹೇಳಿದ್ದೆ ತಡ ಪಾತ್ರವೇ ಆದ ಭಾವನ ಒಂದೇ ಟೇಕ್‌ಗೆ ತನ್ನ ಸೀನ್ ಮುಗಿಸಿಬಿಟ್ಟಿದ್ದರು. ಆಸ್ಪತ್ರೆಯ ಬೆಡ್‌ನಲ್ಲಿ ಮಲಗಿ ಭಾವನಾರ ತಂದೆಯ ಪಾತ್ರ ಮಾಡುತಿದ್ದ ಭೂಗತ ಲೋಕದ ದೊರೆ ಸುನಿಲ್ ಶೆಟ್ಟಿ ಭಾವನಾರವರ ನಟನೆ ನೊಡಿ ಎದ್ದು ಕುಳಿತು `ಬಹುತ್ ಅಚ್ಚಾ ಕಿಯಾ’ ಎಂದು ಕೈ ತಟ್ಟಿದರಂತೆ. ಆಮೇಲೆ ಅಲ್ಲಿದ್ದವರೆಲ್ಲಾ ಕೈ ತಟ್ಟಿದರಂತೆ ಇದು ಭಾವನಾರವರ ಬಾಲಿವುಡ್ ಬದುಕಿನಲ್ಲಿ ಸಿಕ್ಕ ಮೊದಲ ದಿ ಬೆಸ್ಟ್ ಕಾಂಪ್ಲಿಮೆಂಟರಿಯಂತೆ. ಹಾಗಾಗೆ ಭಾವನ ರವರಿಗೆ ಇಂತಹ ಖುಷಿಗಳೇ ದೊಡ್ಡ ಸಂಭ್ರಮಗಳಿದ್ದಮತೆ. ಇನ್ನು, ಭಾವನಾ ಹೇಳದೆ ಉಳಿದ, ಮಾಡಲು ಬಾಕಿಯಿರುವ ಒಂದು ಕೆಲಸಕ್ಕೆ ಭಾವನಾರವರ ಮೆಚ್ಚಿನ ಕವಿ ಜಯಂತ್ ಕಾಯ್ಕಿಣಿಯವರಿಂದ ಸ್ಪೂರ್ತಿ ಸಿಕ್ಕಿದೆ. ಇನ್ನು ಬದುಕಿನಲ್ಲಿ ಅದೊಂದು `ಹೆಜ್ಜೆʼ ಇಡುವುದೊಂದು ಬಾಕಿ ಇದೆ. ಭಾವನಾರವರ ಬದುಕಿಗೂ ಮುಂಬರುವ ಚಿತ್ರಗಳಿಗೂ ಚಿತ್ತಾರದ ಶುಭಾಶಯಗಳು .