Sandalwood Leading OnlineMedia

ನೆನಪಿನ ಶಕ್ತಿ ಕಳೆದುಕೊಂಡ ʻಸಿಂಹಾದ್ರಿ ಸಿಂಹʼ ವಿಷ್ಣುವರ್ಧನ್‌ ಅತ್ತಿಗೆ ಭಾನುಪ್ರಿಯಾ..!

ನಿಮಗೆಲ್ಲಾ ಭಾನುಪ್ರಿಯಾ ಚೆನ್ನಾಗಿ ನೆನಪಿರಬೇಕು ಅಲ್ವಾ. ಸಿಂಹಾದ್ರಿಯ ಸಿಂಹ ಸಿನಿಮಾದಲ್ಲಿ ದೊಡ್ಡ ವಿಷ್ಣುವರ್ಧನ್‌ ಅವರಿಗೆ ಹೆಂಡತಿಯಾಗಿ, ತಮ್ಮ ವಿಷ್ಣುವರ್ಧನ್‌ ಅವರಿಗೆ ಅತ್ತಿಗೆಯಾಗಿ, ಮೀನಾ ಅವರಿಗೆ ಸಖತ್ತಾಗಿ ಕ್ಲಾಸ್‌ ತೆಗೆದುಕೊಂಡವರು. ಆಗ ಟಾಪ್‌ ಹೀರೋಯಿನ್‌, ಆದ್ರೆ ಈಗ ನೆನಪಿನ ಶಕ್ತೊಯೇ ಇಲ್ಲದವರಾಗಿದ್ದಾರೆ.

ಕನ್ನಡ,   ತೆಲುಗು,ತಮಿಳು,ಹಿಂದಿ ಮತ್ತು ಮಲಯಾಳಂ ಭಾಷೆಗಳ 150 ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿರುವ ಈ ನಟಿ ಅಭಿನಯಕ್ಕೆ ಮಾತ್ರವಲ್ಲದೇ ನೃತ್ಯದಿಂದಲೂ ಮೋಡಿ ಮಾಡಿದವರು. ಪ್ರಸಿದ್ಧ ಕೂಚುಪುಡಿ ನೃತ್ಯಗಾರ್ತಿಯೂ ಆಗಿರುವ ಭಾನುಪ್ರಿಯಾ ಅವರ ನೃತ್ಯಕ್ಕೆ ಮನಸೋಲದವರೇ ಇಲ್ಲ. ಇದೀಗ 58 ವರ್ಷ ಪೂರೈಸಿರುವ ನಟಿ  ಇದೀಗ ಜೀವನದ ಬಹುದೊಡ್ಡ ದುರಂತ ಎದುರಿಸುತ್ತಿದ್ದಾರೆ. ಸಂಪೂರ್ಣ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿದ್ದಾರೆ. ಅಷ್ಟಕ್ಕೂ ನಟಿಯ ಬಾಳಲ್ಲಿ ದುರಂತಗಳ ಸರಮಾಲೆಯೇ ನಡೆದಿದೆ. ಕೆಲ ದಶಕಗಳವರೆಗೆ ಬಹುಭಾಷೆಗಳಲ್ಲಿ ಕಾಣಿಸಿಕೊಂಡಿದ್ದ ನಟಿ ಕೊನೆಗೊಂದು ದಿನ ಚಿತ್ರರಂಗದಿಂದ ದೂರವಾಗಿಬಿಟ್ಟರು.

 2018 ಭಾನುಪ್ರಿಯಾ ಅವರ ಜೀವನದಲ್ಲಿ ಬಹುದೊಡ್ಡ ಆಘಾತವಾಗಿ ಹೋಯಿತು. ಅವರ ಪತಿ ಆದರ್ಶ್​ ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದರು. ಪತಿಯ ಸಾವಿನ ಬಳಿಕ ನಟಿ ಭಾನುಪ್ರಿಯಾ ಖಿನ್ನತೆಗೆ ಜಾರಿಹೋದರು. ಇದೀಗ ಅದೇ ನೋವಿನಿಂದ ನೆನಪಿನ ಶಕ್ತಿಯನ್ನೇ ಕಳೆದುಕೊಂಡಿರುವ ನಟಿ, ಯಾರನ್ನೂ ಗುರುತಿಸುವ ಹಂತದಲ್ಲಿ ಇಲ್ಲ. ಈ ಹಿಂದೆ ನೀಡಿದ್ದ ಸಂದರ್ಶನದಲ್ಲಿ ನಟಿ, ಪತಿಯ ಅಗಲಿಕೆ ನಂತರ ನಾನು  ಸಿನಿಮಾಗಳಲ್ಲಿ ನಟಿಸುವುದು ಕಡಿಮೆ ಮಾಡಿದೆ. ಏಕೋ ಮನಸ್ಸಿಗೆ ನೆಮ್ಮದಿ ಇರಲಿಲ್ಲ. ಅವರ ಸಾವಿನ ಶಾಕ್​ನಿಂದ ನಾನು ಹೊರಬರುವುದು ಕಷ್ಟವೇ ಆಗಿಹೋಯಿತು.  ಆರೋಗ್ಯ ಸಮಸ್ಯೆ ತಲೆದೋರಿತು. ಕ್ರಮೇಣ ಈಗ ನೆನಪಿನ ಶಕ್ತಿ ಕುಂದುತ್ತಾ ಬಂದಿದೆ ಎಂದು ನಟಿ ಹೇಳಿಕೊಂಡಿದ್ದರು.

Share this post:

Translate »