ಸೆಂಚುರಿ ಸ್ಟಾರ್ ಶಿವರಾಜ್‌ಕುಮಾರ್ ನಟನೆಯ ‘ಭೈರತಿ ರಣಗಲ್’ ಸಿನಿಮಾ ಬ್ಲಾಕ್‌ಬಸ್ಟರ್ ಹಿಟ್ ಆಗಿದೆ. ನವೆಂಬರ್ 15ಕ್ಕೆ ಸಿನಿಮಾ ತೆರೆಗೆ ಬಂದಿತ್ತು. ನರ್ತನ್ ನಿರ್ದೇಶನದ ಸಿನಿಮಾ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಮತ್ತೊಮ್ಮೆ ರಣಗಲ್ ಅವತಾರದಲ್ಲಿ ಶಿವಣ್ಣನ ಆರ್ಭಟ ನೋಡಿ ಅಭಿಮಾನಿಗಳು ಫಿದಾ ಆಗಿದ್ದಾರೆ.
‘ಭೈರತಿ ರಣಗಲ್’ ಚಿತ್ರ ತೆರೆಕಂಡು 40 ದಿನಕ್ಕೆ ಓಟಿಟಿ ಕಡೆ ಮುಖ ಮಾಡಿದೆ. ಈಗಾಗಲೇ ಸಿನಿಮಾ ಓಟಿಟಿ ರಿಲೀಸ್ ಡೇಟ್ ಘೋಷಣೆ ಆಗಿದೆ. ನರ್ತನ್ ನಿರ್ದೇಶನದ ‘ಮಫ್ತಿ’ ಸಿನಿಮಾ 7 ವರ್ಷಗಳ ಹಿಂದೆ ಹಿಟ್ ಆಗಿತ್ತು. ಅದರ ಪ್ರೀಕ್ವೆಲ್ ಅಂದರೆ ಆ ಕಥೆಯ ಹಿಂದಿನ ಕಥೆ ಹೊಸ ಚಿತ್ರದಲ್ಲಿ ಅನಾವರಣ ಆಗಿದೆ. ರಣಗಲ್ ಯಾರು? ಆತ ಮಾಫಿಯಾ ಡಾನ್ ಆಗಿದ್ದು ಯಾಕೆ? ಎನ್ನುವ ಪ್ರಶ್ನೆಗಳಿಗೆಲ್ಲಾ ಉತ್ತರ ಸಿಕ್ಕಿದೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ ಸ್ವೇಚ್ಛಾ ; ಪ್ರೀತಿ-ಬಾಂಧವ್ಯದ ಕಥೆಗಳ ಸಂಗಮ
ಮಫ್ತಿ’ ಚಿತ್ರದಲ್ಲಿ ಶಿವಣ್ಣನ ಜೊತೆ ಶ್ರೀಮುರಳಿ ಕೂಡ ಅಬ್ಬರಿಸಿದ್ದರು. ಅಲ್ಲಿ ಗಣ ಆಗಿ ರೋರಿಂಗ್ ಸ್ಟಾರ್ ಲೀಡ್ ರೋಲ್‌ನಲ್ಲಿ ಅಬ್ಬರಿಸಿದ್ದರು. ಆದರೆ ‘ಭೈರತಿ ರಣಗಲ್’ ಚಿತ್ರದ ತುಂಬಾ ಶಿವಣ್ಣ ಆವರಿಸಿಕೊಂಡಿದ್ದಾರೆ. ವಕೀಲನಾಗಿ ಮಾಫಿಯಾ ಡಾನ್ ಆಗಿ ಎರಡು ಶೇಡ್‌ಗಳಲ್ಲಿ ಸೆಂಚುರಿ ಸ್ಟಾರ್ ಮಿಂಚಿದ್ದಾರೆ. ಕಣ್ಣಲ್ಲೇ ನಟಿಸೋ ಶಿವಣ್ಣನನ್ನು ನೋಡುವುದು ಚೆಂದ. ಇಂದು(ಡಿಸೆಂಬರ್ 24) ಮಧ್ಯರಾತ್ರಿಯಿಂದಲೇ ‘ಭೈರತಿ ರಣಗಲ್’ ಸಿನಿಮಾ ಅಮೇಜಾನ್ ಪ್ರೈಂ ವೀಡಿಯೋದಲ್ಲಿ ಸ್ಟ್ರೀಮಿಂಗ್ ಆಗಲಿದೆ. ಕ್ರಿಸ್‌ಮಸ್ ಹಬ್ಬದ ಸಂಭ್ರಮದಲ್ಲಿ ಸಿನಿಮಾ ಓಟಿಟಿ ವೀಕ್ಷಣೆಗೆ ಲಭ್ಯವಾಗುತ್ತಿದೆ. ಈಗಾಗಲೇ ಸಿನಿಮಾ ನೋಡಿರುವವರು, ನೋಡದೇ ಇರುವವರು ಸ್ಮಾಲ್ ಸ್ಕ್ರೀನ್‌ನಲ್ಲಿ ಮತ್ತೊಮ್ಮೆ ರಣಗಲ್ ಆರ್ಭಟ ಕಣ್ತುಂಬಿಕೊಳ್ಳಬಹುದು.
ಜೀ-5 ಸಂಸ್ಥೆಗೆ ‘ಭೈರತಿ ರಣಗಲ್’ ಓಟಿಟಿ ರೈಟ್ಸ್ ಮಾರಾಟವಾಗಿದೆ ಎಂದು ಗುಲ್ಲಾಗಿತ್ತು. ಆದರೆ ಸ್ಯಾಟಲೈಟ್ ರೈಟ್ಸ್ ಮಾತ್ರ ಜೀಗೆ ಧಕ್ಕಿಸಿಕೊಂಡಿದ್ದು ಓಟಿಟಿ ರೈಟ್ಸ್ ಪ್ರೈ ವೀಡಿಯೋ ಪಾಲಾಗಿದೆ. ಚಿತ್ರದಲ್ಲಿ ಶಿವಣ್ಣ ಜೊತೆ ರುಕ್ಮಿಣಿ ವಸಂತ್ ನಾಯಕಿಯಾಗಿ ನಟಿಸಿದ್ದಾರೆ. ಇನ್ನುಳಿದಂತೆ ಛಾಯಾಸಿಂಗ್, ರಾಹುಲ್ ಬೋಸ್, ಅವಿನಾಶ್ ಸೇರಿ ಅನುಭವಿ ಕಲಾವಿದರು ನಟಿಸಿದ್ದಾರೆ. ‘ಮಫ್ತಿ’ ಚಿತ್ರದ ಕಥೆಯನ್ನು ಕೂಡ ಮುಂದುವರೆಸುವುದಾಗಿ ಶಿವಣ್ಣ ಹೇಳಿದ್ದಾರೆ.
ತಮ್ಮದೇ ಬ್ಯಾನರ್ ಅಡಿಯಲ್ಲಿ ಶಿವಣ್ಣ ‘ಭೈರತಿ ರಣಗಲ್’ ಸಿನಿಮಾ ನಿರ್ಮಿಸಿದ್ದರು. ಸಿನಿಮಾ 20 ಕೋಟಿ ರೂ.ಗೂ ಅಧಿಕ ಕಲೆಕ್ಷನ್ ಮಾಡಿರುವ ಅಂದಾಜಿದೆ. ಆದರೆ ಚಿತ್ರತಂಡ ಈ ಬಗ್ಗೆ ಯಾವುದೇ ಮಾಹಿತಿ ನೀಡಿಲ್ಲ. ರಾಜ್ಯದ ಕೆಲವು ಚಿತ್ರಮಂದಿರಗಳಲ್ಲಿ ಸಿನಿಮಾ ಇನ್ನು ಪ್ರದರ್ಶನವಾಗುತ್ತಿದೆ. 50 ದಿನ ಪೂರೈಸುವ ಮುನ್ನ ಸಿನಿಮಾ ಓಟಿಟಿಗೆ ಬರ್ತಿದೆ.