Sandalwood Leading OnlineMedia

Bhairathi Ranagal Review: ರಣಗಲ್ ತುಂಬಾ ಶಿವ ತಾಂಡವ!

`ಮಫ್ತಿ’ ಸಿನಿಮಾದಲ್ಲಿ ಸೆಕೆಂಡ್ ಹಾಫ್ ನಂತರ ಸ್ಕ್ರೀನ್ ಮೇಲೆ ಅಬ್ಬರಿಸಿದ  ಪಾತ್ರ ಭೈರತಿ ರಣಗಲ್. ಈ ಪಾತ್ರದಲ್ಲಿ ಶಿವರಾಜ್‌ಕುಮಾರ್ ಕಣ್ಣಲ್ಲೇ ವಿಲನ್‌ಗಳನ್ನು ಸುಲಿಗೆ ಮಾಡಿದ್ದರು. ಈಗ `ಭೈರತಿ ರಣಗಲ್’ ಮೂಲಕ ಆ ಪಾತ್ರಕ್ಕೆ ಒಂದು ನ್ಯಾಯ ಸಿಕ್ಕಿದೆ. `ಮಫ್ತಿ’ ನಂತರ ನರ್ತನ್ `ಭೈರತಿ ರಣಗಲ್’ನಲ್ಲಿ ರುದ್ರ ನರ್ತನ ಹೇಗಿದೆ? ಇಲ್ಲಿದೆ ಚಿತ್ತಾರ ಚಿತ್ರ ವಿಮರ್ಶೆ. `ಮಫ್ತಿ’ ಸಿನಿಮಾದಲ್ಲಿ ಪೊಲೀಸ್ ಅಧಿಕಾರಿ ಗಣ (ಶ್ರೀಮುರಳಿ), ಭೈರತಿ ರಣಗಲ್ (ಶಿವರಾಜ್‌ಕುಮಾರ್) ಸಾಮ್ರಾಜ್ಯಕ್ಕೆ ಲಗ್ಗೆಯಿಟ್ಟು, ಆತನನ್ನು ಸಾಕ್ಷಿ ಸಮೇತ ಅರೆಸ್ಟ್ ಮಾಡಿರುತ್ತಾನೆ. ಅಲ್ಲಿಗೆ ಸಿನಿಮಾ `ಶುಭಂ’! ಇಷ್ಟು ದೊಡ್ಡ ಸಾಮ್ರಾಜ್ಯಕ್ಕೆ ಭೈರತಿ ರಣಗಲ್ ದೊರೆಯಾಗಿದ್ದು ಹೇಗೆ? ಆತ ಗ್ಯಾಂಗ್‌ಸ್ಟರ್ ಆಗುವುದಕ್ಕೂ ಮುನ್ನ ಏನು ಮಾಡುತ್ತಿದ್ದ? ಆತನ ಹಿನ್ನೆಲೆ ಏನು ಎಂಬುದುದನ್ನು `ಭೈರತಿ ರಣಗಲ್’ ತೆರೆದಿಡುತ್ತದೆ. ಚಿತ್ರದಲ್ಲಿ ಡಿಟೈಲ್ ಆಗಿ ನಿರ್ದೇಶಕರು ಭೈರತಿ ರಣಗಲ್‌ನ ಜನ್ಮ ಜಲಾಡಿದ್ದಾರೆ!

READ MORE REVIEWS; Bagheera Review: ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ!

`ಮಪ್ತಿ’ಯಲ್ಲಿ ಶಿವಣ್ಣ ಇಂಟರ್‌ವಲ್‌ನಲ್ಲಿ ಬಂದು ಕಾಡಿದರೆ, ಭೈರತಿಯಲ್ಲಿ ಆರಂಭದಿAದ ಕೊನೆಯವರೆÀಗೂ ತಮ್ಮ ಕಣ್ಣೋಟದಿಂದಲೇ ರಣಗಲ್ ಪಾತ್ರವನ್ನು ಅನುಭವಿಸಿ ಅಭಿನಯಿಸಿದ್ದಾರೆ. ಫಸ್ಟ್ ಹಾಫ್‌ನಲ್ಲಿ ಲಾಯರ್ ಆಗಿದ್ದ ಭೈರತಿ, ಲಾಯರ್ ಗಿರಿಯಿಂದ ನೋ ಯೂಸ್ ಎಂಬುದನ್ನು ಕಂಡುಕೊAಡು ಸೆಕೆಂಡ್ ಆಫ್‌ನಲ್ಲಿ ವಿಲನ್‌ಗಳನ್ನು ಆಫ್ ಮರ್ಡರ್ ಫುಲ್ ಮರ್ಡರ್ ಮಾಡುವ ಗ್ಯಾಂಗ್‌ಸ್ಟರ್ ಆಗುತ್ತಾನೆ. ಇನ್ನು, ರುಕ್ಮಿಣಿ ವಸಂತ್‌ಗೆ ಸಿನಿಮಾದಲ್ಲಿ ಎಷ್ಟು ಸ್ಕಿçÃನ್‌ಸ್ಪೇಸ್ ಇದೆ ಎಂಬುದನ್ನು ನರ್ತನ್ ಟ್ರೆöÊಲರ್‌ನಲ್ಲಿ ಕ್ಲೂ ಕೊಟ್ಟಿದ್ದರು. ಅದು ನಿಜವಾಗಿದೆ! ಕಲಾವಿದರ ದಂಡೇ ಇದ್ದರೂ ಭೈರತಿ ರಣಗಲ್‌ಗೆ ಇಡೀ ಚಿತ್ರವನ್ನು ಹೊತ್ತು ಕೊಂಡೊಯ್ಯುವ ಜವಾಬ್ದಾರಿ ನೀಡಲಾಗಿದೆ. ಮುಖ್ಯ ಖಳನಾಗಿ ನಟಿಸಿರುವ ರಾಹುಲ್ ಬೋಸ್ ಮತ್ತು ಖಳನ ಬಂಟನ ಪಾತ್ರ ಮಾಡಿರುವ ಶಬೀರ್ ಕಲ್ಲರಕಲ್ (ಡ್ಯಾನ್ಸಿಂಗ್ ರೋಸ್) ಇವರಿಬ್ಬರ ನಟನೆ ಅದ್ಭುತವಾಗಿದೆ, ಆದರೆ ಕನ್ನಡದಲ್ಲಿ ಇವರಿಬ್ಬರನ್ನೂ ಮೀರಿಸುವ ಕಲಾವಿದರು ಇದ್ದಾರೆ ಅನ್ನೋದನ್ನು ಇಲ್ಲಿನ ನಿರ್ದೇಶಕರಿಗೆ ಅರಿವಾದರೆ ಒಳಿತು. ಎಂದಿನAತೆ  ನಟ ಗೋಪಾಲಕೃಷ್ಣ ದೇಶಪಾಂಡೆ ತಮ್ಮ ಶೈಲಿಯನ್ನು ಮುಂದುವರಿಸಿದ್ದಾರೆ.

READ MORE REVIEWS;  Ibbani Tabbida Ileyali review: ಬೆಳ್ಳಿತೆರೆಯಲ್ಲಿ ಬೆಳ್ಳಿಯಪ್ಪ `ಮ್ಯಾಜಿಕ್’

ನಿರ್ದೇಶಕ ನರ್ತನ್ `ಮಫ್ತಿ’ ಬಾಕ್ಸ್ ಆಫೀಸ್‌ನಲ್ಲಿ ದೊಡ್ಡ ಹಿಟ್ ಆಗಿತ್ತು. `ಭೈರತಿ ರಣಗಲ್’ನಲ್ಲಿ ಕೂಡ `ಮಫ್ತಿ’ನೆರೆಳಿದೆ, ಆದರೆ ಹೊಸತನದ ಬೆಳಕಿದೆ. ಒಬ್ಬ ಸಾಮಾನ್ಯ ಲಾಯರ್ ಆಗಿದ್ದ ಭೈರತಿ ರಣಗಲ್ ಯಾಕೆ ಖಾಸಾಯಿಕಾನೆಯಲ್ಲಿ ಕೊಚ್ಚುವಂತೆ ಕೊಚ್ಚಲು ಶುರುಮಾಡಿದ? ಕಾನೂನು ಮೂಲಕವೇ ಜಯಕ್ಕೆ ಹಾತೊರೆಯುತ್ತಿದ್ದವನನ್ನು ಸಮಾಜವೇ ಅನ್ಯಾಯ ಮಾಡುವಂತೆ ಹೇಗೆ ಮಾಡುತ್ತದೆ? ಎಂಬುದಕ್ಕೆ ನಿರ್ದೇಶಕರು ತೆರೆಯ ಮೇಲೆ ಸಮರ್ಪಕ ಉತ್ತರ ನೀಡಿದ್ದಾರೆ. ಚಿತ್ರ ಶಿವಣ್ಣ  ಫ್ಯಾನ್ಸ್ಗೆ ಚಿತ್ರ ಹಬ್ಬವಾಗಲಿದೆ. ನಿರ್ದೇಶಕ ನರ್ತನ್ `ಮಫ್ತಿ’ಗಿಂತ ಇಲ್ಲಿ ಹೆಚ್ಚಿನ ಟ್ವಿಸ್ಟ್ಗಳನ್ನು ನೀಡಿ ಶಾಕ್ ನೀಡುತ್ತಾರೆ. ಒಂದಷ್ಟು ಲಾಜಿಕ್ ಇಲ್ಲದ್ದನ್ನು ರಣಗಲ್ ಮ್ಯಾಜಿಕ್ ಇದು ಎಂದು ಹೊಟ್ಟೆಗೆ ಹಾಕೋಬಹುದು. ಛಾಯಾಗ್ರಾಹಕ ನವೀನ್ ಕುಮಾರ್ ಮತ್ತು ಸಂಗೀತ ನಿರ್ದೇಶಕ ರವಿ ಬಸ್ರೂರು ರಣ ರಣ! `ಕಾವಲಿಗ’ ಮತ್ತು ಟೈಟಲ್ ಸಾಂಗ್ ಕಥೆ ಹೇಳುತ್ತದೆ. ಈ ಬಾರಿ ರವಿ ಬಸ್ರೂರು ಹಿನ್ನೆಲೆ ಸಂಗೀತಕ್ಕಿAತ, ಎಫೆಕ್ಟ್ಗಳನ್ನೇ ಸಂಗೀತವಾಗಿಸಿಕೊAಡದ್ದು ಹೊಸ ಪ್ರಯೋಗ. ಸಿನಿಮಾದ ಕ್ಲೆöÊಮ್ಯಾಕ್ಸ್ ಅನ್ನು `ಮಫ್ತಿ’ ಕಥೆಯೊಂದಿಗೆ ಕನೆಕ್ಟ್ ಮಾಡಿದ್ದು ಸಿನಿಮಾಕ್ಕೊಂದು ಚೌಕಟ್ಟು ನೀಡಿದೆ. ಒಟ್ಟಿನಲ್ಲಿ, ಆಕ್ಷನ್ ಇಷ್ಟ ಪಡುವವರಿಗೆ ಅದರಲ್ಲೂ ಶಿವರಾಜ್‌ಕುಮಾರ್ ಫ್ಯಾನ್ಸ್ಗೆ `ಭೈರತಿ ರಣಗಲ್’ ಸಾಕಷ್ಟು ಕಿಕ್ ನೀಡುತ್ತದೆ.

 

Share this post:

Related Posts

To Subscribe to our News Letter.

Translate »