ತಾಂಡವ್ ಹಾಗೂ ಶ್ರೇಷ್ಠಾ ತುಂಬಾ ಖುಷಿಯಲ್ಲಿದ್ದಾರೆ. ಅವರು ಖುಷಿಯಾಗಿರೋಕೆ ಕಾರಣ ಭಾಗ್ಯಾ ಕಷ್ಟದಲ್ಲಿರೋದು. ತಾಂಡವ್ ಪಾನಿಪುರಿ ತಿನ್ನುತ್ತಾ ಇರುತ್ತಾನೆ. ಆಗ ಪಕ್ಕದಲ್ಲಿ ಕುಳಿತುಕೊಂಡು ಅವಳು ಯೋಚನೆ ಮಾಡುತ್ತಾ ಇರುತ್ತಾಳೆ. ನಿನಗಾಗಿ ನಾನು ಎಲ್ಲಾನೂ ಬಿಟ್ಟಿದಿನಿ. ಸ್ವಂತ ಅಪ್ಪಾ, ಅಮ್ಮನ್ನ ಕೂಡ ದೂರ ಮಾಡ್ಕೊಂಡಿದಿನಿ. ಅಂತದ್ರಲ್ಲಿ ಈ ಭಾಗ್ಯಾ ಯಾವ ಲೆಕ್ಕಾ ಎಂದು ಹೇಳುತ್ತಾಳೆ.
ಇದನ್ನೂ ಓದಿ ; ಮದುವೆಯ ಗೌನ್ಗೆ ಹೊಸ ರೂಪ ಕೊಟ್ಟ ಸೌತ್ ಸ್ಯಾಮ್; ಫ್ಯಾನ್ಸ್ ಫುಲ್ ಶಾಕ್..
ಆದರೆ ಅದು ತಾಂಡವ್ಗೆ ಗೊತ್ತಾಗೋದಿಲ್ಲಾ. ಯಾಕಂದ್ರೆ ಅವಳು ಮನಸಿನಲ್ಲಿ ಮಾತಾಡಿಕೊಳ್ಳುತ್ತಾ ಇರುತ್ತಾಳೆ. ಭಾಗ್ಯಾಳನ್ನು ಮಾತ್ರ ಅಲ್ಲಾ. ನೀನು ನನಗೆ ಸಿಗೋದಿಲ್ಲ ಅಂತ ಹೇಳಿದ್ರೂ ನಾನು ನಿನ್ನನ್ನೂ ಬಿಡೋದಿಲ್ಲಾ ಎಂದು ಅಷ್ಟು ಕಠಿಣ ನಿರ್ಧಾರವನ್ನು ತಾನು ಮನಸಿನಲ್ಲಿ ಮಾಡಿದ್ದೇನೆ ಎನ್ನುವುದನ್ನು ಅವಳೊಳಗೆ ಹೇಳಿಕೊಳ್ಳುತ್ತಾ ಇರುತ್ತಾಳೆ. ನಂತರ ತಾಂಡವ್ ಅವಳನ್ನು ನೋಡುತ್ತಾನೆ.
ತಾಂಡವ್ ಕೇಳ್ತಾನೆ ಯಾಕೆ ಶ್ರೇಷ್ಠಾ ಪಾನಿಪೂರಿ ಪಾರ್ಟಿಕೊಡ್ಸು ಅಂತ ಕೇಳ್ದೆ ಈಗ ನೋಡಿದ್ರೆ ನೀನು ಪಾನಿಪೂರಿನೇ ತಿಂತಾ ಇಲ್ವಾಲ್ಲಾ? ಎಷ್ಟು ಬೇಕೋ ಅಷ್ಟು ತಿನ್ನು ಇಂದು ನೀನ್ ಕೇಳಿದಷ್ಟು ಕೊಡಸ್ತೀನಿ ಎಂದು ಅವನು ಹೇಳುತ್ತಾನೆ. ನಂತರ ಇತ್ತ ಮನೆಯಲ್ಲಿ ಕುಸುಮಾ ಹಾಗೂ ಧರ್ಮಾ ಬಂದು ಡೈನಿಂಗ್ ಟೇಬಲ್ ಹತ್ತಿರ ಕುಳಿತು ಮಾತಾಡುತ್ತಾರೆ. ಹಣ ಸಿಗದೇ ಇರುವುದರ ಬಗ್ಗೆ ಅವರು ಮಾತಾಡುತ್ತಾ ಇರುತ್ತಾರೆ.
ಇದನ್ನೂ ಓದಿ ಕಲ್ಕಿ 2898 AD ಚಿತ್ರದ ಬಿಡುಗಡೆ ದಿನಾಂಕ ಘೋಷಣೆ; ಜೂನ್ 27ರಂದು ಪ್ರಭಾಸ್ ಸಿನಿಮಾ ರಿಲೀಸ್
ನಂತರ ಧರ್ಮಾ ತುಂಬಾ ಬೇಸರ ಮಾಡಿಕೊಂಡು ಇರ್ತಾನೆ. ಈ ಸಮಯದಲ್ಲೇ ಹೀಗಾಗಬೇಕಿತ್ತಾ? ನನ್ನ ಪೆನ್ಶನ್ ಹಣ ಕೂಡ ಬರ್ತಾ ಇಲ್ಲಾ. ನಾವು ಅದನ್ನೇ ನಂಬಿಕೊಂಡು ಜೀವನ ಮಾಡ್ತಾ ಇದ್ವಿ. ಈತರ ಆಗುತ್ತೆ ಅಂತ ನಾನು ಅಂದುಕೊಂಡೇ ಇರಲಿಲ್ಲ ಎಂದು ಧರ್ಮಾ ಹೇಳುತ್ತಾನೆ. ಆಗ ಕುಸುಮಾ ಕೂಡ ಹೇಳ್ತಾಳೆ ನಾವು ಈ ಹಣಾನಾ ನಂಬಿಕೊಂಡು ಸೊಸೆನಾ, ಮೊಮ್ಮಕ್ಕಳನ್ನಾ ನೋಡಿಕೊಳ್ಳಬಹುದು ಅಂತ ಅಂದುಕೊಂಡಿದ್ದೆ.
ಆದರೆ ಈಗ ಶ್ರೇಷ್ಠಾನಾ ಸಾಲ ತೀರಿಸೋ ಬದಲು ನಮ್ಮ ನಿತ್ಯದ ಜೀವನಕ್ಕೂ ಹಣ ಸಾಕಾಗ್ತಾ ಇಲ್ಲಾ. ನಂತರ ಯಶೋಧಾ ಕಾಲ್ ಬರುತ್ತದೆ. ಆದರೆ ಕುಸುಮಾ ರಿಸೀವ್ ಮಾಡೋದಿಲ್ಲಾ. ಯಾಕೆ ಕಾಲ್ ರಿಸೀವ್ ಮಾಡಿಲ್ಲಾ. ಕಾಲ್ ರಿಸೀವ್ ಮಾಡು ಎಂದು ಧರ್ಮಾ ಹೇಳ್ತಾನೆ. ಆದ್ರೆ ಕುಸುಮಾ ನಾನ್ ಹೇಗೆ ಮಾತಾಡ್ಲಿ ಅಂತ ಕೇಳ್ತಾಳೆ.
ಇದನ್ನೂ ಓದಿ :ಮೆಕ್ಯಾನಿಕಲ್ ಲೈಫ್ ಬಗ್ಗೆ ಕೆಟ್ಟ ಡೈಲಾಗ್ ಹೊಡೆದ ಗಗನಾ; ರಮೇಶ್ ಸೇರಿ ಹಲವರ ವಿರುದ್ಧ ದೂರು!
ಈಗ ಶ್ರೇಷ್ಠಾ ಮದುವೆ ಹತ್ತಿರ ಬಂತು ನಾವು ತಗೊಂಡಿರೋ ಹಣಾನಾ ಇಷ್ಟರಲ್ಲೇ ವಾಪಸ್ ಕೊಡಲೇ ಬೇಕು ಬೇರೆ ದಾರಿನೇ ಇಲ್ಲಾ. ಅವರಿಗೂ ಈಗ ಹಣದ ಅವಶ್ಯಕತೆ ಇರುತ್ತದೆ ಎಂದು ಕುಸುಮಾ ಹೇಳುತ್ತಾಳೆ. ಅಷ್ಟರಲ್ಲಿ ಭಾಗ್ಯಾ ಮನೆಗೆ ಬರುತ್ತಾಳೆ. ಬಾಗಿಲ ಒಳಗಡೆ ಬಂದರೆ ಅವಳಿಗೆ ಅಳು ಬರುತ್ತದೆ. ತಾಂಡವ್ ಆಡಿದ ಮಾತುಗಳೇ ನೆನಪಾಗುತ್ತದೆ.
ಇನ್ನು ಮುಂದೆ ನೀನೇ ಈ ಮನೆನಾ ನೋಡಿಕೊ. ಮಕ್ಕಳೇ ನಿಮಗೆ ಏನ್ ಬೇಕಾದ್ರೂ ನೀವು ನಿಮ್ಮ ಅಮ್ಮನ ಹತ್ತಿರಾನೇ ಕೇಳಿ ಎಂದು ತಾಂಡವ್ ಹೇಳಿದ ಮಾತು ನೆನಪಾಗುತ್ತದೆ. ಅದನ್ನೆಲ್ಲಾ ನೆನೆಸಿಕೊಂಡು ಇವಳಿಗೆ ಅಳು ಬರುತ್ತದೆ. ಒಳಗಡೆ ಬರುತ್ತಾ ಇದ್ದಂತೆ ಕುಸುಮಾ ಪ್ರಶ್ನೆ ಮಾಡುತ್ತಾಳೆ.