Sandalwood Leading OnlineMedia

ಮಕ್ಕಳೇನಾದರೂ ಗಂಡನ ಬುದ್ದಿಯನ್ನೇ ಕಲಿತರೇ ಪರಿಣಾಮ ನೆಟ್ಟಗಿರಲ್ಲ : ತಾಂಡವ್ಗೆ ಭಾಗ್ಯಾ ಎಚ್ಚರಿಕೆ

ಭಾಗ್ಯ ಈಗ ಬದಲಾಗಿದ್ದಾಳೆ. ಅಳುಮುಂಜಿಯಲ್ಲ ಈಕೆ. ಭಾಗ್ಯ ಕೊನೆಗೂ ಗಂಡ ತಾಂಡವ್ ಎದುರು ನಿಂತು ಮಾತನಾಡುವಷ್ಟು ಗಟ್ಟಿಗಿತ್ತಿಯಾಗಿದ್ದಾಳೆ. ಗಂಡನೇ ಸರ್ವಸ್ವ, ಆತ ಏನು ಮಾಡಿದರೂ ತಾಳ್ಮೆಯಿಂದ ಇರಬೇಕು. ಪತಿಯೇ ಪರದೈವ ಎಂದೆಲ್ಲಾ ಎಂದುಕೊಂಡು ಇಲ್ಲಿಯವರೆಗೆ ಸಹನಾಮೂರ್ತಿಯಂತಿದ್ದ ಭಾಗ್ಯ ಪತಿಗೇ ದುರುಗುಟ್ಟು ನೋಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾಳೆ. ಮನೆ ನನ್ನದು, ಮನೆಬಿಟ್ಟು ಹೋಗು, ಡಿವೋರ್ಸ್ ಕೊಡುವೆ ಎಂದೆಲ್ಲಾ ಹೇಳಿ ಪೌರುಷ ಮೆರೆಯುತ್ತಿದ್ದ ತಾಂಡವ್, ಪತ್ನಿಯ ಈ ರೂಪಕ್ಕೆ ಸುಸ್ತು ಹೊಡೆದಿದ್ದಾನೆ.

Bhagyalakshmi: ಭಾಗ್ಯಾ ಗುಡುಗಿದರೆ ತಾಂಡವ್ ಉಸಿರೇ ಬರಲ್ಲ: ಆದ್ರೂ ಡಿವೋರ್ಸ್ ಬೇಕಂತೆ!  | colors kannada serial Bhagyalakshmi Written Update on April 18th episode  - Kannada Filmibeat

ಇದನ್ನೂ ಓದಿ :ಅಬಾರ್ಷನ್ ಆದ ಮೇಲೆ ಡಿಪ್ರೆಶ್ ಹೋಗಿದ್ದೆ : ಪ್ರೇಮಾ ನೋವಿನ ಮಾತುಗಳು

ಪತ್ನಿಯನ್ನು ನೀವು ಕಟ್ಟಿಹಾಕ್ಬೋದು. ಆದರೆ ತಾಯಿಯನ್ನು ಕಟ್ಟಿ ಹಾಕೋಕೆ ಆಗಲ್ಲ ಎಂದು ಡೈಲಾಗ್ ಮೇಲೆ ಡೈಲಾಗ್ ಹೊಡೆದಿದ್ದಾಳೆ ಭಾಗ್ಯ. ಕೊನೆಯ ಪಕ್ಷ ಮಕ್ಕಳ ಎದುರಾದರೂ ಒಳ್ಳೆಯ ತಂದೆ ಎನ್ನಿಸಿಕೊಳ್ಳಿ. ನಾಳೆ ನಿಮ್ಮನ್ನೇ ಅವರು ಫಾಲೋ ಮಾಡಿ, ಕೆಟ್ಟ ನಡತೆ ಕಲಿತರೆ ಅದಕ್ಕೆ ಯಾರೂ ಜವಾಬ್ದಾರರಲ್ಲ. ನಾನು ಸುಮ್ಮನೇ ಇರೋಳಲ್ಲ ಎಂದು ಗಂಡನಿಗೆ ಧಮ್ಕಿ ಹಾಕಿದ್ದಾಳೆ. ಇದನ್ನು ಕೇಳಿ ತಾಂಡವ್ಗೆ ಶಾಕ್ ಆಗಿದೆ. ಭಾಗ್ಯಲಕ್ಷ್ಮಿ ಸೀರಿಯಲ್ ಅಭಿಮಾನಿಗಳಿಗೆ ಹಬ್ಬವೋ ಹಬ್ಬ. ಇಷ್ಟು ದಿನ ನಿನ್ನ ಅಳುಮುಂಜಿ ಮುಖ ನೋಡಿ ಸಾಕಾಗಿತ್ತು. ನಿನ್ನಂಥ ಹೆಣ್ಣಿದ್ದರೆ ಎಲ್ಲವೂ ಸಾಧ್ಯ.

Bhagyalakshmi TV Show: Watch All Seasons, Full Episodes & Videos Online In  HD Quality On JioCinema

ಇದನ್ನೂ ಓದಿ :ಜಯಂತ್ ನ ಕಾಡುತ್ತಿದೆ ಆತ್ಮ ಸಾಕ್ಷಿ : ಹೆಂಡತಿಯನ್ನು ಬಂಧನದಿಂದ ಸ್ವತಂತ್ರವಾಗಿ ಬಿಡುತ್ತಾನಾ..?

ನೀನು ನಿನ್ನಂಥ ಮನಸ್ಥಿತಿ ಇರುವ ಎಲ್ಲಾ ಮಹಿಳೆಯರಿಗೆ ಸ್ಫೂರ್ತಿ. ಪತಿ ದೌರ್ಜನ್ಯ ಎಸಗಿದಾಗ, ಸಹಿಸಿಕೊಳ್ಳದೇ ಎದುರು ಮಾತನಾಡುವ ಶಕ್ತಿ ಪ್ರತಿ ಹೆಣ್ಣಿಗೂ ಬರಬೇಕು ಎನ್ನುತ್ತಿದ್ದಾರೆ ಅಭಿಮಾನಿಗಳು. ಇದೇ ವೇಳೆ ಇದು ಸಾಧ್ಯವಾಗುವುದು ಕುಸುಮಾನಂಥ ಅತ್ತೆಯಿದ್ದರೆ ಮಾತ್ರ ಎಂದೂ ಸೇರಿಸುತ್ತಿದ್ದಾರೆ.

Watch Bhagyalakshmi Season 1 Episode 185 : Bhagya Says NO To Tandav! -  Watch Full Episode Online(HD) On JioCinema

 

ಇದನ್ನೂ ಓದಿ :ಮತದಾನ ಮಾಡುವ ಮೂಲಕ ಹಕ್ಕು ಚಲಾಯಿಸಿದ ಸೆಲೆಬ್ರಿಟಿಗಳು..

ಅಷ್ಟಕ್ಕೂ ಆಗಿದ್ದೇನೆಂದರೆ, ಮಕ್ಕಳೆದುರೇ ತಾಂಡವ್ ಭಾಗ್ಯಳಿಗೆ ಡಿವೋರ್ಸ್ ಕೊಡುವ ವಿಷಯ ಹೇಳಿದ್ದಾನೆ. ಇನ್ನು ಮುಚ್ಚಿಟ್ಟು ಪ್ರಯೋಜನವಿಲ್ಲ. ಇದಾಗಲೇ ಅವಳಿಗೆ ಡಿವೋರ್ಸ್ ನೋಟಿಸ್ ಕೊಟ್ಟಿದ್ದೆ. ಮಕ್ಕಳಿಗಾಗಿ ಸುಮ್ಮನೇ ಇದ್ದೆ. ಆದರೆ ಇದೀಗ ಮಕ್ಕಳೇ ಅಮ್ಮನ ಪರವಾಗಿ ನಿಂತಿದ್ದಾರೆ. ಹಾಗಿದ್ದ ಮೇಲೆ ಸತ್ಯ ಹೇಳದೇ ವಿಧಿಯಿಲ್ಲ ಎಂದಿರುವ ತಾಂಡವ್, ಭಾಗ್ಯಳಿಗೆ ಡಿವೋರ್ಸ್ ಕೊಡುತ್ತಿದ್ದೇನೆ ಎಂದಿದ್ದಾನೆ. ಇಷ್ಟೇ ಅಲ್ಲದೇ ಈ ಕೂಡಲೇ ಭಾಗ್ಯ ಮನೆ ಬಿಟ್ಟು ಹೋಗಬೇಕು, ಮಕ್ಕಳು ನನ್ನ ಜೊತೆ ಇರುತ್ತಾರೆ ಎಂದು ಹೇಳಿದ್ದಾನೆ.

 

Bhagyalakshmi Kannada Serial,Bhagyalakshmi Serial: ಸೊಕ್ಕು ತೋರಿಸಲು ಹೋಗಿ  ತಾಂಡವ್ ಮುಚ್ಚಿಟ್ಟ ಸತ್ಯ ರಿವೀಲ್ ಆಯ್ತು; ಭಾಗ್ಯ ಏನ್ ಮಾಡ್ತಾಳೆ? - bhagyalakshmi  kannada serial written update 2024 april ...

ಇದನ್ನೂ ಓದಿ :ದಪ್ಪ ಆಗಿದ್ದೀನಿ ಅಂದ್ರೆ ಯಾರದ್ದೋ ಜೊತೆಗೆ ಮಜಾ ಮಾಡ್ತಿದ್ದೀನಿ ಅಂದಿದ್ರು : ಜನರ ಮಾತಿಗೆ ನೀತೂ ಕಣ್ಣೀರು

ಭಾಗ್ಯಳ ಬ್ಯಾಗ್ ತೆಗೆದು ಹೊರಕ್ಕೆ ಎಸೆದಿದ್ದಾನೆ. ಇದೀಗ ಮೌನ ಮುರಿದಿರುವ ಭಾಗ್ಯ, ಡಿವೋರ್ಸ್ ಪೇಪರ್ಗೆ ಸಹಿ ಹಾಕಲ್ಲ ಅಂದ್ರೆ ಏನು ಮಾಡ್ತೀರಿ ಕೇಳಿದ್ದಾಳೆ. ಕೋರ್ಟ್ಗೆ ಹೋಗ್ತೇನೆ ಎಂದಿದ್ದಾನೆ ತಾಂಡವ್. ನಾನೂ ಕೋರ್ಟ್ಗೆ ಹೋಗ್ತೇನೆ. ಏನು ಹೇಳಬೇಕೋ ಹೇಳ್ತೇನೆ. ಜಪ್ಪಯ್ಯ ಎಂದ್ರೂ ಈ ಮನೆ ಬಿಟ್ಟು ಹೋಗಲ್ಲ ಎಂದಿದ್ದಾಳೆ.

Share this post:

Related Posts

To Subscribe to our News Letter.

Translate »