ಭಾಗ್ಯಾ ತನಗಾದ ಅವಮಾನವನ್ನು ನೆನೆಸಿಕೊಳ್ಳುತ್ತಾ ಆ ಹೋಟೆಲ್ನಿಂದ ಹೊರಗಡೆ ಬಂದಿದ್ದಾಳೆ.ಭಾಗ್ಯಾ ಬಸ್ನಲ್ಲಿ ಪ್ರಾಯಾಣ ಮಾಡುತ್ತಿರುವಾಗ ಅವಳ ಹಿಂದೆ ಓಡಿ ಹೋಗಿ ಅವಳನ್ನು ವಾಪಸ್ ಕರೆದುಕೊಂಡು ಬಂದಿದ್ದಾರೆ. ಇತ್ತ ಹೋಟೆಲ್ನಲ್ಲಿ ಅವಳು ಮಾಡಿರುವ ಅಡುಗೆ ತಿಂದವರು ಅವಳನ್ನು ನೋಡಲೇ ಬೇಕು ಎಂದು ತುಂಬಾ ಹೊತ್ತಿನಿಂದ ಕಾಯುತ್ತಾ ಇದ್ದಾರೆ. ಕೊನೆಗೂ ಭಾಗ್ಯಾ ಅಲ್ಲಿಗೆ ಬಂದಿದ್ದಾಳೆ.
ಅವಳಿಗೆ ತಾನು ಅನುಭವಿಸಿದ ಅವಮಾನ ಎಲ್ಲಾ ಬಸ್ನಲ್ಲಿ ನೆನಪಾಗುತ್ತಾ ಇರುತ್ತದೆ. ನಿನ್ನನ್ನು ಪೊಲೀಸರಿಗೆ ಹಿಡಿದು ಕೊಡುತ್ತೇವೆ ಎಂದು ಹೇಳಿರೋದೆಲ್ಲಾ ನೆನಪಾಗಿ ಬೇಸರ ಮಾಡಿಕೊಳ್ಳುತ್ತಾ ಇರುತ್ತಾಳೆ. ಅದನ್ನು ನೆನೆಸಿಕೊಂಡು ಅಳು ಬರುತ್ತದೆ. ಆದರೂ ತುಂಬಾ ಯೋಚನೆ ಮಾಡುತ್ತಾ ಸಮಾಧಾನ ಮಾಡಿಕೊಳ್ಳುತ್ತಾ ಇರುತ್ತಾಳೆ.
ಈ ಹಿಂದೆ ಯಾರು ಅವಳಿಗೆ ಅವಮಾನ ಮಾಡಿ ಕಳಿಸಿದ್ದರೋ ಅವರೇ ಈಗ ಅವಳ ಹಿಂದೆ ಓಡಿ ಬರುವ ಸಂದರ್ಭ ಎದುರಾಗಿದೆ. ಬದುಕು ಯಾವಾಗ ಯಾವ ರೀತಿ ಬದಲಾಗುತ್ತದೆ ಎಂದು ಊಹಿಸಲೂ ಸಾಧ್ಯವಿಲ್ಲ ಎನ್ನುವುದು ಇದಕ್ಕೇ ಎಂದೇ ಹೇಳಬಹುದು. ನಂತರ ಹಿತಾ ಕೂಡ ಅವರ ಹಿಂದಿಂದೆ ಓಡಿ ಬರುತ್ತಾಳೆ.ಇದನ್ನೂ ಓದಿ:ಟಾಲಿವುಡ್ ಟು ಬಾಲಿವುಡ್ ಹಾರಲು ಹೊರಟ ಸ್ಯಾಂಡಲ್ವುಡ್ ನಟಿ
ಇತ್ತ ಪೂಜಾ ಹಾಗೂ ಸುಂದ್ರಿ ಮಜಾ ತೆಗೆದುಕೊಳ್ಳುತ್ತಾ ಇರುತ್ತಾರೆ. ಶ್ರೇಷ್ಠಾ ಮನೆಗೆ ಬರುತ್ತಾಳೆ. ಬಂದ ತಕ್ಷಣ ಇವರು ಏನೋ ಪಾರ್ಟಿ ಮಾಡುತ್ತಾ ಇರುತ್ತಾರೆ. ಏನು ಇಬ್ಬರೂ ಇಷ್ಟೊಂದು ಖುಷಿಯಲ್ಲಿ ಇದ್ದೀರಾ ಎಂದು ಕೇಳುತ್ತಾಳೆ. ಆಗ ಇವರು ಏನೂ ಹೇಳೋದಿಲ್ಲಾ. ಯಾರು ನಿನ್ನ ಡ್ರಾಪ್ ಮಾಡಿದ್ದು ಎಂದು ಪ್ರಶ್ನೆ ಮಾಡ್ತಾರೆ.
ಅನುಮಾನಾನೇ ಬೇಡ ನಿನ್ನ ಅಕ್ಕನ ಗಂಡನೇ ನನ್ನ ಡ್ರಾಪ್ ಮಾಡಿದ್ದು ಎಂದು ಹೇಳುತ್ತಾ ಫ್ರೆಶ್ ಆಗಲು ಒಳಗಡೆ ಹೋಗುತ್ತಾಳೆ. ಅದಾದ ನಂತರ ಅಲ್ಲಿ ತನ್ನ ಬಂಗಾರ ಇಲ್ಲಾ ಅಂತ ಅವಳಿಗೆ ಗೊತ್ತಾದ್ರೆ ಅವಳ ರಿಯಾಕ್ಷನ್ ಹೇಗಿರುತ್ತದೆ ಎಂದು ನೋಡೋಣ ಎಂದು ಇಬ್ಬರೂ ಮಾತಾಡಿಕೊಳ್ಳುತ್ತಾರೆ.
ಮಾತಾಡಿಕೊಂಡು ಮೆಲ್ಲಗೆ ಅವಳ ರೂಮ್ಗೆ ಹೋಗುತ್ತಾರೆ. ಅವಳು ಲಾಕ್ ಓಪನ್ ಮಾಡುತ್ತಾಳೆ. ಅಷ್ಟರಲ್ಲಿ ಕಾಲ್ ಬರುತ್ತದೆ. ಕಾಲ್ ರಿಸೀವ್ ಮಾಡಲು ಹೋಗುತ್ತಾಳೆ. ಆಗ ಇವರು ಅಲ್ಲಿಂದ ವಾಪಸ್ ಬರುತ್ತಾರೆ. ಒಟ್ಟಿನಲ್ಲಿ ಒಡವೆ ಕದ್ದಿರೋದು ಅವಳಿಗೆ ಗೊತ್ತಾಗಿಲ್ಲ.ಇದನ್ನೂ ಓದಿ:ಅರ್ಚನಾ ಜೋಯಿಸ್ ಗೆ ಇಂಪ್ರೆಸ್ ಮಾಡುವುದು ರಿಯಾಲಿಟಿಗೆ ಹತ್ತಿರವಿರುವ ಕಥೆಗಳು..!
ಕುಸುಮಾ ಮನೆಯಲ್ಲಿ ಸುನಂದಾ ಇದ್ದಾಗ ಅವಳಿಗೆ ಕಾಲ್ ಬರುತ್ತದೆ. ಕಾಲ್ ಬಂದಾಗ ಆ ಕಡೆಯಿಂದ ಯಾರೋ ಮಾತಾಡ್ತಾರೆ. ಆದರೆ ಯಾರು ಅನ್ನೋದು ಇವಳಿಗೆ ಅರ್ಥ ಆಗೋದಿಲ್ಲಾ. ಹಾಗಾಗಿ ಅವಳು ಮಾತನ್ನು ಕೇಳಿಸಿಕೊಳ್ಳುತ್ತಾಳೆ.
ಅವರು ಹೇಳುತ್ತಾರೆ ನಿಮಗೆ 2 ಲಕ್ಷ ಲಾಟರಿ ಹೊಡೆದಿದೆ ಎಂದು. ಅದನ್ನು ಕೇಳಿ ಖುಷಿ ಆಗುತ್ತದೆ.ಆದರೆ ಆ ಕಡೆಯಿಂದ ಮಾತಾಡ್ತಾ ಇರೋದು ಬೇರೆ ಯಾರೂ ಅಲ್ಲಾ ಅದು ಸುಂದ್ರಿ. ಅವಳ ಹತ್ತಿರ ನೀನು ಹೀಗೆ ಮಾತಾಡ್ಬೇಕು ಅಂತ ಪೂಜಾ ಹೇಳಿಕೊಟ್ಟಿರುತ್ತಾಳೆ. ಅವಳು ಹಾಗೇ ಮಾತಾಡ್ತಾಳೆ. ಆದರೆ ಸಂಪೂರ್ಣ ನಂಬಿಕೆ ಬರೋದಿಲ್ಲಾ. ಬದಲಾಗಿ ಅನುಮಾನ ಬರುತ್ತದೆ. ನನಗೆ ಇದು ಹೇಗೆ ಸಾಧ್ಯ ಎಂದು ಕೇಳುತ್ತಾಳೆ.