ಸಿನಿಮಾ ಅನ್ನೋ ಮನೋರಂಜನೆ ಜೊತೆ ಜೊತೆಗೆ ಸಂದೇಶವನ್ನು ಸಾರುವ ಮಾಧ್ಯಮದಲ್ಲಿ ಸಂಭಾಷಣೆಕಾರನ ಪಾತ್ರ ಬಹು ಮುಖ್ಯವಾದದ್ದು. ಆತ ಬರೆಯುವ ಒಂದೊ0ದು ಸಂಭಾಷಣೆಯೂ ಚಿತ್ರದ ಪಾತ್ರಗಳು ಪ್ರೇಕ್ಷಕನಿಗೆ ಹತ್ತಿರವಾಗುವಂತೆ ಮಾಡಬಲ್ಲುದು. ಕೆಲವೊಂದು ಸಂಭಾಷಣೆಗಳು ನೋಡುಗನ ಮನದಲ್ಲಿ ಶಾಶ್ವತವಾಗಿ ಉಳಿದುಕೊಳ್ಳಬಲ್ಲುದು, ಚಿತ್ರ ಸಂಭಾಷಣೆಗೆ ಆ ಶಕ್ತಿ ಇದೆ. ಕನ್ನಡ ಚಿತ್ರ ರಸಿಕರ ಗಮನ ಸೆಳೆದ `ಹೊಂದಿಸಿ ಬರೆಯಿರಿ’ ಚಿತ್ರಕ್ಕೆ ಪ್ರಶಾಂತ್ ರಾಜಪ್ಪ ಅವರು ತಮ್ಮ ಸಂಭಾಷಣೆಯ ಮೂಲಕ ವಿಶೇಷ ಮಾನ್ಯತೆಯನ್ನು ತಂದುಕೊಟ್ಟಿದ್ದರು. ಈ ಚಿತ್ರದ ಸಂಭಾಷಣೆಗಾಗಿ ಪ್ರಶಾಂತ್ ರಾಜಪ್ಪ ಅವರಿಗೆ BEST DIALOGUE WRITER-2024 ಪ್ರಶಸ್ತಿ ನೀಡಿ ಗೌರವಿಸಲಾಗಿದೆ.
ಪ್ರಶಸ್ತಿ ಸ್ವೀಕರಿಸಿದ ಬಳಿಕ ಮಾತನಾಡಿದ ಪ್ರಶಾಂತ್ ರಾಜಪ್ಪ, `ಚಿತ್ತಾರಕ್ಕೆ ಧನ್ಯವಾದ ತಿಳಿಸುತ್ತೇನೆ. ನಮ್ಮ ಕೆಲಸವನ್ನು ಗುರುತಿಸಿ ಅವಾರ್ಡ್ ನೀಡಿದ್ದಕ್ಕೆ. ಈ ಅವಾರ್ಡ್ ಪಡೆದುಕೊಂಡಿದ್ದು ತುಂಬಾ ಖುಷಿ ಆಯ್ತು. ಹಾಗೇ ಸಿನಿಮಾದಲ್ಲಿನ ನಾನು ಬರೆದ ಸಂಭಾಷಣೆಯನ್ನು ಮೆಚ್ಚಿ ವೋಟ್ ಮಾಡಿದ ಪ್ರತಿಯೊಬ್ಬರಿಗೂ ತುಂಬು ಹೃದಯದ ಧನ್ಯವಾದಗಳು’ ಎಂದಿದ್ದಾರೆ.