`ಚಿತ್ತಾರ’ ಮಾಸ ಪತ್ರಿಕೆ ಮತ್ತು ಕನ್ನಡ ಚಿತ್ರರಂಗದ ನಡುವಿನ ಅವಿನಾಭಾವ ಸಂಬ0ಧ ಒಂದೂವರೆ ದಶಕದಿಂದಲೂ ಇದೆ. ‘ಚಿತ್ತಾರ’ದ ಇತಿಹಾಸದ ಪುಟಗಳನ್ನು ತಿರುವಿದರೆ ಇದಕ್ಕೆ ಸಾಕಷ್ಟು ಸಾಕ್ಷಿಗಳು ಸಿಕ್ಕಿ ಬಿಡುತ್ತವೆ. ಕನ್ನಡ ಚಿತ್ರೋದ್ಯಮದ ನಾಡಿಮಿಡಿತವನ್ನು ಗಮನಿಸುತ್ತಾ, ಅಲ್ಲಿನ ಬೆಳವಣಿಗೆಗಳನ್ನು ಓದುಗರಿಗೆ ದಾಟಿಸುತ್ತಾ, ತಪ್ಪುಗಳಾದಾಗ ಎಚ್ಚರಿಸುತ್ತಾ, ಸಿನಿಮಾವನ್ನು ಮನೋರಂಜನಾ ಕ್ಷೇತ್ರವಾಗಿಯೂ, ಉದ್ಯಮವಾಗಿಯೂ ನೋಡುವ ಗಾಂಭೀರ್ಯತೆಯನ್ನು ‘ಚಿತ್ತಾರ’ ಉಳಿಸಿಕೊಂಡಿದೆ. ಹೀಗಾಗಿಯೇ ಚಂದನವನವನ್ನು ಉತ್ತೇಜಿಸುವ ಮತ್ತು ಬೆಸೆಯುವ ಅದ್ಭುತ ವೇದಿಕೆಯೊಂದನ್ನು 2019 ‘ಚಿತ್ತಾರ ಸ್ಟಾರ್ ಅವಾರ್ಡ್ಸ್’ ಮೂಲಕ ಸೃಷ್ಟಿಸಿತು. ಮೊದಲ ಕಾರ್ಯಕ್ರಮದಲ್ಲೇ ವರ್ಣರಂಜಿತ, ಅದ್ದೂರಿ, ಅರ್ಥಗರ್ಭಿತ ಕಾರ್ಯಕ್ರಮವನ್ನು ಆಯೋಜಿಸಿದ್ದ ‘ಚಿತ್ತಾರ’ ಇದೀಗ ಐದನೇ ಆವೃತ್ತಿಗೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗಿದ್ದು, ನಟ ಸಮರ್ಜಿತ್ ಲಂಕೇಶ್ ಲಂಕೇಶ್ ಅವರು Best Debutant Actor-Male-2025′ ಪ್ರಶಸ್ತಿಗೆ ಭಾಜರಾಗಿದ್ದಾರೆ.
ಕನ್ನಡ ಸಾಹಿತ್ಯದ ಮೇರು ಪರ್ವತ, ವಿಮರ್ಶಕ, ಖ್ಯಾತ ಪತ್ರಕರ್ತ ಪಿ.ಲಂಕೇಶ್ ಅವರ ಮೊಮ್ಮಗ ಹಾಗೂ ಖ್ಯಾತ ನಿರ್ದೇಶಕ ಇಂದ್ರಜಿತ್ ಲಂಕೇಶ್ ಅವರ ಮಗ ಸಮರ್ಜಿತ್ ಲಂಕೇಶ್. ಬಾಲ್ಯದಿಂದಲೇ ನಟನೆಯ ಆಸಕ್ತಿ ಹೊಂದಿದ್ದ ಇವರು, ನಾಯಕ ನಟನಾಗಲು ಬೇಕಾಗಿದ್ದ ಎಲ್ಲಾ ರೀತಿಯ ತಯಾರಿಯನ್ನು ಮಾಡಿಕೊಂಡರು. ನಂತರ ತಮ್ಮ ತಂದೆ ನಿರ್ದೇಶನದ ಗೌರಿ ಚಿತ್ರದ ಮೂಲಕ ಕನ್ನಡ ಚಿತ್ರರಂಗದ ಯುವ ನಟರಾಗಿ ಹೆಜ್ಜೆ ಇಟ್ಟಿದ್ದಾರೆ. ಗೌರಿ ಚಿತ್ರದ ಇವರ ಅಭಿನಯಕ್ಕಾಗಿ ಚಿತ್ತಾರವು, ಚಿತ್ತಾರ Best Debutant Actor-Male-2025′ ಪ್ರಶಸ್ತಿ ನೀಡಿ ಗೌರವಿಸಿದೆ.