Left Ad
Bengaluru: ರಾಮೇಶ್ವರಂ ಕೆಫೆ ಕೇಸ್; ಬೆಂಗಳೂರಿನಲ್ಲಿ ಇಬ್ಬರನ್ನ ವಶಕ್ಕೆ ಪಡೆದ ಎನ್ಐಎ - Chittara news
# Tags

Bengaluru: ರಾಮೇಶ್ವರಂ ಕೆಫೆ ಕೇಸ್; ಬೆಂಗಳೂರಿನಲ್ಲಿ ಇಬ್ಬರನ್ನ ವಶಕ್ಕೆ ಪಡೆದ ಎನ್ಐಎ

ಬೆಂಗಳೂರು: ರಾಮೇಶ್ವರಂ ಕೆಫೆಯಲ್ಲಿ (Rameshwaram cafe) ಬಾಂಬ್ ಬ್ಲಾಸ್ಟ್ ಕೇಸ್ (Bomb Blast) ಸಂಬಂಧ ಸ್ಫೋಟಕ ಇಟ್ಟವನಿಗೆ ಎನ್‌ಐಎ (NIA) ತೀವ್ರ ಹುಡುಕಾಟ ನಡೆಸುತ್ತಿದೆ. ಶಂಕಿತನ ಸಂಪರ್ಕ ಹೊಂದಿದ್ದ ಅನುಮಾನದ ಮೇಲೆ ಕೆಲವರನ್ನು ವಶಕ್ಕೆ ಪಡೆದು ವಿಚಾರಣೆ ಮಾಡುತ್ತಿದೆ. ಬೆಂಗಳೂರು (Bengaluru) ಮೂಲದ ಇಬ್ಬರು ಅನುಮಾನಿತರನ್ನು ಎನ್‌ಐಎ ವಿಚಾರಣೆ ನಡೆಸಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಇದನ್ನೂ ಓದಿ:ರಾಜಕೀಯ ಎಂಟ್ರಿ ಬಗ್ಗೆ ಸುಳಿವು ನೀಡಿದ ಸುದೀಪ್‌

ಶಂಕಿತ ಬಾಂಬರ್ ಜೊತೆಗೆ ಸಂಪರ್ಕವನ್ನು ಹೊಂದಿದ್ದ ಶಂಕೆಯ ಮೇರೆಗೆ ಬೆಂಗಳೂರು ಮೂಲದ ಇಬ್ಬರು ಅನುಮಾನಿತರನ್ನ ಎನ್ ಐಎ ವಿಚಾರಣೆ ಮಾಡುತ್ತಿದೆ. ಶನಿವಾರ ಸಂಜೆ ಅನುಮಾನಿತರನ್ನು ಎನ್​​ಐಎ ವಶಕ್ಕೆ ಪಡೆದುಕೊಂಡಿದ್ದು, ಇಬ್ಬರಿಂದ ಬಾಂಬರ್ ಕುರಿತು ಎನ್​ಐಎ ಅಧಿಕಾರಿಳು ಮಾಹಿತಿ ಸಂಗ್ರಹ ಮಾಡ್ತಿದ್ದಾರೆ. ಅನುಮಾನಿತರನ್ನು ಕೇವಲ ವಿಚಾರಣೆ ನಡೆಸುತ್ತಿದ್ದು, ಬಂಧಿಸಿಲ್ಲ ಎಂದು ಎನ್ಐಎ ಮೂಲಗಳು ಮಾಹಿತಿ ನೀಡಿವೆ.

 

ಬಾಂಬ್ ಇಟ್ಟವನ ಗುರುತು ಪತ್ತೆ ಮಾಡಿದ್ದ ಎನ್​ಐಎ:

ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಇಟ್ಟಿದ್ದ ಪ್ರಕರಣದಲ್ಲಿ ತನಿಕೆ ಚುರುಕು ಗೊಳಿಸಿದ್ದ ಎನ್​​ಐಎ ಶಂಕಿತನ ಗುರುತು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿತ್ತು. ಅಲ್ಲದೇ ಆತನಿಗೆ ಬಾಂಬ್ ಹಿಡಲು ಸಹಾಯ ಮಾಡಿದ್ದ ಕೆಲ ಶಂಕಿತರನ್ನು ಅಧಿಕಾರಿಗಳ ತಂಡ ಗುರುತಿಸಿತ್ತು.

ತನಿಖೆ ವೇಳೆ ಶಂಕಿತ ಧರಿಸಿದ್ದ ಟೋಪಿಯೇ ಎನ್​ಐಎ ಅಧಿಕಾರಿಗಳಿಗೆ ಆರೋಪಿತನ ಬಗ್ಗೆ ಸುಳಿವು ನೀಡಿತ್ತು. ಶಂಕಿತನನ್ನು ಶಿವಮೊಗ್ಗ ಜಿಲ್ಲೆಯ ಮುಸಾವೀರ್ ಹುಸೇನ್ ಶಜೀದ್ ಎಂದು ಗುರುತಿಸಲಾಗಿದೆ. ಆದರೆ ಈತನೇ ಸ್ಫೋಟ ನಡೆಸಿದ್ದಾನಾ ಎಂದು ಇದುವರೆಗೂ ಅಧಿಕಾರಿಗಳು ಸ್ಪಷ್ಟಪಡಿಸಿಲ್ಲ.

 

ಇದನ್ನೂ ಓದಿ”ಪ್ರಕಾಶ್ ರಾಜ್ ಹುಟ್ಟುಹಬ್ಬ : ನೇರನುಡಿಯಿಂದ ಟೀಕೆಗೆ ಒಳಗಾಗುವ ನಟನ ಬಗ್ಗೆ ಇಲ್ಲಿದೆ ಮಾಹಿತಿ

ಇನ್ನು, ಶಂಕಿತ ಮುಸಾವೀರ್​ ತೀರ್ಥಹಳ್ಳಿ ತಾಲೂಕಿನವ ಆಗಿದ್ದು, 2020ರ ಅಲ್​ ಹಿಂದ್ ಮಾಡ್ಯೂಲ್​ ಪ್ರಕರಣದ ಆರೋಪಿಯಾಗಿದ್ದಾನೆ. ಅಂದಿನಿಂದಲೂ ಈತ ತಲೆಮರೆಸಿಕೊಂಡಿದ್ದಾನೆ. ಆದರೆ ಮುಸಾವೀರ್​ನನ್ನು ಹುಡುಕಿಕೊಡುವಂತೆ ಅವರ ತಾಯಿ ನ್ಯಾಯಾಲಯಕ್ಕೆ ಹೇಬಿಯಸ್ ಕಾರ್ಪಸ್​ ಅರ್ಜಿ ಕೂಡ ಸಲ್ಲಿಕೆ ಮಾಡಿದ್ದರು ಎಂಬ ಮಾಹಿತಿ ಲಭ್ಯವಾಗಿದೆ.

 

Spread the love
Translate »
Right Ad