ಅನಂತ್ ನಾಗ್ ಅವರ ಸಾಧನೆಗೆ ಇದೀಗ ಮತ್ತೊಂದು ಗೌರವ ಸಿಕ್ಕಿದೆ. ಸಿನಿಮಾ ಕ್ಷೇತ್ರಕ್ಕೆ ಸಲ್ಲಿಸಿದ ಸೇವೆಗಾಗಿ ಅನಂತ್ ನಾಗ್ ಅವರಿಗೆ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್ ನೀಡಲಿದೆ. ಉಪಕುಲಪತಿ ನಿರಂಜನ್ ವಾನಳ್ಳಿ ನೇತೃತ್ವದ ಬೆಂಗಳೂರು ಉತ್ತರ ವಿಶ್ವವಿದ್ಯಾಲಯವು ನಟ ಅನಂತ್ ನಾಗ್ ಅವರಿಗೆ ಗೌರವ ಡಾಕ್ಟರೇಟ್ (Honorary D.Litt) ನೀಡಿ ಗೌರವಿಸಲು ನಿರ್ಧರಿಸಿದೆ.
1973ರಲ್ಲಿ ತೆರೆಕಂಡ ‘ಸಂಕಲ್ಪ’ ಚಿತ್ರದ ಮೂಲಕ ಚಿತ್ರರಂಗಕ್ಕೆ ಅನಂತ್ ನಾಗ್ ಪದಾರ್ಪಣೆ ಮಾಡಿದರು. ‘ಹಂಸಗೀತೆ’, ‘ಬಯಲು ದಾರಿ’, ‘ನಾ ನಿನ್ನ ಬಿಡಲಾರೆ’, ‘ಚಂದನದ ಗೊಂಬೆ’, ‘ಮಿಂಚಿನ ಓಟ’, ‘ನಾರದ ವಿಜಯ’, ‘ಜನ್ಮ ಜನ್ಮದ ಅನುಬಂಧ’, ‘ಅನುಪಮ’, ‘ಬಾಡದ ಹೂ’, ‘ಮುಳ್ಳಿನ ಗುಲಾಬಿ’, ‘ಬೆಂಕಿಯ ಬಲೆ’, ‘ಕಾಮನ ಬಿಲ್ಲು’, ‘ಭಕ್ತ ಪ್ರಹ್ಲಾದ’, ‘ನೋಡಿ ಸ್ವಾಮಿ ನಾವಿರೋದು ಹೀಗೆ’, ‘ಆಕ್ಸಿಡೆಂಟ್’, ‘ಪರಮೇಶಿ ಪ್ರೇಮ ಪ್ರಸಂಗ’, ‘ಹುಲಿ ಹೆಬ್ಬುಲಿ’, ‘ಗೋಲ್‌ಮಾಲ್ ರಾಧಾಕೃಷ್ಣ’, ‘ಒಂದು ಸಿನಿಮಾ ಕಥೆ’, ‘ಜೀವನದಿ’, ‘ಉಪ್ಪಿ ದಾದಾ ಎಂಬಿಬಿಎಸ್’, ‘ಮುಂಗಾರು ಮಳೆ’, ‘ಈ ಬಂಧನ’, ‘ಪರಮಾತ್ಮ’, ‘ಗಜಕೇಸರಿ’, ‘ಪ್ಲಸ್’, ‘ಮುಗುಳು ನಗೆ’, ‘ಕೆಜಿಎಫ್: ಚಾಪ್ಟರ್ 1’, ಮುಂತಾದ 200ಕ್ಕೂ ಹೆಚ್ಚು ಅಧಿಕ ಸಿನಿಮಾಗಳಲ್ಲಿ ಅನಂತ್ ನಾಗ್ ಅಭಿನಯಿಸಿದ್ದಾರೆ.