ಬೆನಕ ಗೋಲ್ಡ್ ರಾಜ್ಯದ 2 ಮತ್ತು 3 ನೇ ನಗರಗಳಲ್ಲಿ ಶಾಖೆಗಳನ್ನು ತೆರೆದು ಗ್ರಾಹಕರಿಗೆ ಉತ್ತಮ ಸೇವೆ ಒದಗಿಸುವ ಉದ್ದೇಶದಿಂದ ಬೆನಕ ಗೋಲ್ಡ್ ಕಂಪನಿ, ಹೊಸದಾಗಿ ‘ಬೆನಕ ಗೋಲ್ಡ್ ಅಭಿಯಾನ ಲಾಂಛನ ‘ಹೊರತಂದಿದೆ.
“ಮೆಹಬೂಬ” ಹಾಡಿಗೆ ಮೆಚ್ಚುಗೆಯ ಮಹಾಪೂರ.
ಇತ್ತೀಚಿಗೆ, ಬಸವನಗುಡಿಯ ಗಣಪತಿ ದೇವಸ್ಥಾನದ ಆವರಣದಲ್ಲಿ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಬಿಜೆಪಿ ಮುಖಂಡ ರವೀಂದ್ರ ಲಾಂಛನವನ್ನು ಅನಾವರಣ ಮಾಡಿದರು. ಎಂ.ಡಿ. ಎಸ್. ಭರತ್ ಕುಮಾರ್ ಮಾತನಾಡಿ, “2020ರಲ್ಲಿ ನೆಟ್ಟಕಲ್ಲಪ್ಪ ವೃತ್ತದಲ್ಲಿ ಮೊದಲ ಬಾರಿ ಬೆನಕ ಗೋಲ್ಡ್ ಶಾಖೆ ತೆರೆಯಲಾಗಿತ್ತು. ತೆಲಂಗಾಣ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕರ್ನಾಟಕದಲ್ಲಿ ಇದೀಗ 16 ಶಾಖೆಗಳಿವೆ. 10 ಸಾವಿರ ಗ್ರಾಹಕರಿಗೆ ಚಿನ್ನ ಅಡಮಾನ ಸೇವೆ ನೀಡಿದ್ದೇವೆ. ಬೆನಕ ಗೋಲ್ಡ್ ಅಭಿಯಾನ ಲಾಂಛನ ಯೋಜನೆಯಡಿ 2 ಮತ್ತು 3 ನೇ ಹಂತದ ನಗರಗಳಲ್ಲಿ ಹೊಸ ಶಾಖೆಗಳನ್ನು ತೆರೆಯುವ ಉದ್ದೇಶ ಹೊಂದಿದ್ದೇವೆ. `ನಾವು ಭಾರತಕ್ಕಾಗಿ ಕೆಲಸ ಮಾಡುತ್ತೇವೆ’ ‘ಅಡಿ ಬರಹದಡಿ ನಿರುದ್ಯೋಗಿಗಳಿಗೆ ಉದ್ಯೋಗ ನೀಡುವುದು, ಸಣ್ಣ ಕೈಗಾರಿಕೆಗಳ ಜತೆ ಸಹಯೋಗ, ರಾಜ್ಯದ ಪ್ರತಿ ಮೂಲೆಯಲ್ಲೂ ಶಾಖೆ ಹಾಗೂ ಜನರಿಗೆ ಅರಿವು ಮೂಡಿಸುವುದು ಸೇರಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದೇವೆ” ಎಂದು ಭರತ್ ಕುಮಾರ್ ವಿವರಿಸಿದರು
ಕಣ್ಮನ ಸೆಳೆಯುತ್ತಿದೆ “ಕಾಂತಾರ”ದ ಟ್ರೇಲರ್.
‘ಬೆನಕ ಗೋಲ್ಡ್ ಅಭಿಯಾನ’ ಲಾಂಛನ ಅನಾವರಣ ಕಾರ್ಯಕ್ರಮದಲ್ಲಿ ಕಂಪನಿ ಎಂ.ಡಿ. ಭರತ್ ಕುಮಾರ್, ಬಿಜೆಪಿ ಮುಖಂಡರಾದ ರವೀಂದ್ರ, ರಾಮಾಂಜಿ, ಕಟ್ಟೆ ಸತ್ಯನಾರಾಯಣ, ಸಂಖ್ಯಾಶಾಸ್ತ್ರಜ್ಞ ಆರ್ಯವರ್ಧನ್ ಮತ್ತಿತರರಿದ್ದರು.