Sandalwood Leading OnlineMedia

ಯುವ ಪ್ರತಿಭೆಗಳ ಸಂಗಮ; ಶೀಘ್ರವೇ ’ಬೆಂಬಿಡದ ನಾವಿಕ’ ತೆರೆಗೆ!

ಹೊಸ ಯುವ ಪ್ರತಿಭೆಗಳೆ ಸೇರಿಕೊಂಡು ತಯಾರಿಸಿರುವ ’ಬೆಂಬಿಡದ ನಾವಿಕ’ ಸಿನಿಮಾ ಶೀಘ್ರವೇ ತೆರೆಗೆ ಬರಲು ಸಜ್ಜಾಗಿದೆ. ಚಿತ್ರಕ್ಕೆ ಅಂಬಲವಾಡಿ ಮಹಾಕಾಳಿ ಕಂಬೈನ್ಸ್ ಅಡಿಯಲ್ಲಿ ಜಿ.ಮಹೇಶ್ ಬಂಡವಾಳ ಹೂಡಿದ್ದು, ಸಿನಿಮಾದ ಕೆಲಸಗಳು ಬಹುತೇಕ ಮುಗಿದಿದೆ.

ಇದನ್ನೂ ಓದಿ  ಪೊಲೀಸರಿಂದ ತನಿಷಾ, ಪ್ರತಾಪ್ ವಿಚಾರಣೆ ! ಬಿಗ್ ಬಾಸ್ ಸೆಟ್ ನಲ್ಲಿ ಅಸಲಿಗೆ ನಡೆದದ್ದೇನು ?
ಈಗಾಗಲೇ ಎರಡು ಹಾಡುಗಳು ಬಿಡುಗಡೆಗೊಂಡಿದ್ದು, ನಿರ್ದೇಶಕ ಯೋಗರಾಜ್​ ಭಟ್ ಹಿನ್ನಲೆ ಧ್ವನಿ ನೀಡಿರುವ ಟೀಸರ್ ಬಿಡುಗಡೆ ಕಾರ್ಯಕ್ರಮ ರೇಣುಕಾಂಬ ಥಿಯೇಟರ್‌ದಲ್ಲಿ ನಡೆಯಿತು. ಅದರಲ್ಲೂ ಕಥೆಯು ಇನ್‌ಫ್ಲುಯೆನ್ಸರ್ ಕುರಿತಾಗಿ ಇರುವುದರಿಂದ ಮಾದ್ಯಮ ಮಿತ್ರರು ’ಪ್ರತಿ ಹೆಜ್ಜೆಗೂ’ ಗೀತೆಯನ್ನು ಅನಾವರಣಗೊಳಿಸಿದ್ದು, ಕಾರ್ಯಕ್ರಮಕ್ಕೆ ಮತ್ತಷ್ಟು ಮೆರುಗು ನೀಡಿತು.

ಇದನ್ನೂ ಓದಿ ಮೃಣಾಲ್ ಜೊತೆಗಿನ ಡೇಟಿಂಗ್ ಗುಟ್ಟು ರಟ್ಟು ಮಾಡಿದ ರ‍್ಯಾಪರ್..!

ಮಹತ್ವಕಾಂಕ್ಷಿಯುಳ್ಳ ಇನ್‌ಫ್ಲುಯೆನ್ಸರ್ ಯುವಕನಿಗೆ ಇಂಟರ್‌ನೆಟ್ ಮೂಲಕ ಬರುವ ಕಷ್ಟಗಳು ಮತ್ತೆ ಅದರಿಂದ ಹೇಗೆ ಆತನ ಜೀವನ ಬದಲಾಗುತ್ತದೆ. ಎಲ್ಲರಿಗೂ ಗುರಿ ಇರುವಂತೆ, ಈತನಿಗೂ ಒಂದಷ್ಟು ಚಾಲೆಂಜಸ್​ ಇರುತ್ತದೆ. ಪ್ರತಿಕ್ಷಣ ತುಂಬ ಮುಖ್ಯವಾಗಿರುತ್ತದೆ. ಅದು ನಮ್ಮನ್ನು ಯಾವ ರೀತಿಯಾದರೂ ಬದಲಾಯಿಸಬಹುದು ಎಂಬುದನ್ನು ಹೇಳಿದೆ.

ಇದನ್ನೂ ಓದಿ ತೆಲುಗು, ಬಾಲಿವುಡ್ ತಾರೆಯರ ದೀಪಾವಳಿ ಸಂಭ್ರಮ: ಫೋಟೋಗಳು

ನಾಗತ್ತಿಹಳ್ಳಿ ಚಂದ್ರಶೇಖರ್ ಒಡೆತನದ ’ಟೆಂಟ್‌ಹೌಸ್’ನಲ್ಲಿ ತರಬೇತಿ ಪಡೆದುಕೊಂಡಿರುವ ಶ್ರೀಯಾನ್ ಚಿತ್ರಕ್ಕೆ ನಾಯಕನಾಗಿದ್ದು, ಪ್ರಿಯದರ್ಶಿನಿ, ಐಶ್ವರ್ಯ ನಾಯಕಿಯಾಗಿರಾಗಿ ನಟಿಸಿದ್ದಾರೆ.

ಇದನ್ನೂ ಓದಿ  ದೀಪಾವಳಿಯಂದು ಸೌಂದರ್ಯದ ಮಿಂಚು ಹರಿಸಿದ ಮಿಲ್ಕಿ ಬ್ಯೂಟಿ ತಮನ್ನಾ ಭಾಟಿಯಾ

ಉಳಿದಂತೆ ದಿನೇಶ್‌ ಮಂಗಳೂರು, ಬಲರಾಜವಾಡಿ, ವಿಕ್ರಂ, ರಜತ್ ಮುಂತಾದವರ ತಾರಾಗಣವಿದೆ. ಸತೀಶ್‌ ರಾಜೇಂದ್ರನ್ ಅವರ ಛಾಯಾಗ್ರಹಣವಿದ್ದು, ಸಂಕಲನ ಸುನಿಲ್ ಮಾಡಿದ್ದಾರೆ. ಸಿನಿಮಾದ ಬಹುತೇಕ ಭಾಗಗಳನ್ನು ಮಂಗಳೂರು, ಉಡುಪಿ, ಕಾಪು, ಮೈಸೂರಿನ ಸುಂದರ ತಾಣಗಳಲ್ಲಿ ಚಿತ್ರೀಕರಿಸಲಾಗಿದೆ.

Share this post:

Translate »