ಬಿಗ್ ಬಾಸ್ ಕನ್ನಡ ಸೀಸನ್ 11 ಶುರುವಾಗಿದೆ. ಬಿಗ್ ಬಾಸ್ ಮನೆಯೊಳಗೆ 17 ಮಂದಿ ಹೋಗಿದ್ದಾರೆ. ಪ್ರತಿವಷದಂತೆ ಈ ವಷವೂ ಹಲವು ಕ್ಷೇತ್ರಗಳಿಂದ ಸ್ಪರ್ಧಿಗಳು ಬಂದಿದ್ದಾರೆ. ಈ ಬಾರಿ ನರಕ ಹಾಗೂ ಸ್ವರ್ಗ ಎಂಬ ಕಾನ್ಸೆಪ್ಟ್ ಮೇಲೆ ಬಿಗ್ ಬಾಸ್ ನಡೆಯುತ್ತಿದೆ. ಅದರಂತೆ ಜನರ ಆಯ್ಕೆ, ಬಿಗ್ ಬಾಸ್ ಸ್ಪರ್ಧಿಗಳ ಆಯ್ಕೆಯಂತೆ ಒಂದಷ್ಟು ಜನ ನರಕಕ್ಕೆ ಹೋದರೆ, ಇನ್ನಷ್ಟು ಜನ ಸ್ವರ್ಗಕ್ಕೆ ಹೋಗಿದ್ದಾರೆ. ಅದರಲ್ಲಿ ಹತ್ತು ಜನ ಸ್ವರ್ಗದಲ್ಲಿದ್ದಾರೆ, ಏಳು ಜನ ನರಕದಲ್ಲಿದ್ದಾರೆ. ಮನೆಯಲ್ಲಿ ಈಗಷ್ಟೇ ಒಂದು ದಿನ ಕಳೆದಿರುವ ಮಂದಿಗೆ ಯಾರು ಹೇಗೆ, ಆಟ ಎಲ್ಲವನ್ನು ಅರ್ಥ ಮಾಡಿಕೊಳ್ಳಲು ಒಂದು ವಾರವಾದರೂ ಬೇಕಾಗುತ್ತದೆ. ಆದರೆ ಮೊದಲ ದಿನವೇ ಗಲಾಟೆಗಳು ಶುರುವಾಗಿವೆ.
ಈ ಬಾರಿಯ ನರಕ ಹಾಗೂ ಸ್ವರ್ಗದ ಕಾನ್ಸೆಪ್ಟ್‌ನಲ್ಲಿ ಬಿಗ್ ಬಾಸ್ ನಡೆಯುತ್ತಿರುವ ಕಾರಣ, ನರಕದಲ್ಲಿರುವವರಿಗೆ ಹೈಫೈ ಫೆಸಿಲಿಟಿ ಯಾವುದು ಸಿಗುವುದಿಲ್ಲ. ಒಂದು ಹನಿ ನೀರು ಬೇಕಾದರೂ ಸ್ವರ್ಗದಲ್ಲಿರುವವರನ್ನೇ ಕೇಳಬೇಕು. ಇದೇ ಅವರಿಗೆ ಸಿಗುವ ಶಿಕ್ಷೆ. ಇದೇ ವಿಚಾರಕ್ಕೆ ಈಗ ಮನೆ ಮಂದಿಯಲ್ಲಿ ಜಗಳ ಶುರುವಾಗಿದೆ.
ನರಕದಲ್ಲಿರುವಂತ ಗೋಲ್ಡ್ ಸುರೇಶ್‌ಗೆ ಬಿಸಿ ನೀರು ಬೇಕಾಗಿದೆ. ಆದರೆ ಸ್ವರ್ಗದಲ್ಲಿರುವವರು ಅದನ್ನು ಕೊಡುತ್ತಿಲ್ಲ. ಇದೇ ವಿಚಾರಕಜಕ್ಕೆ ಚರ್ಚೆಯಾಗಿದೆ. ಲಾಯರ್ ಜಗದೀಶ್ ನರಕದಲ್ಲಿರುವವರ ಪರವೇ ಮಾತನಾಡಿ, ಅವನೊಳ್ಳೆ ಬಿಗ್ ಬಾಸ್ ಥರ ಆಡುತ್ತಾನೆ ಎಂದು ಹೋಗಿದ್ದಾರೆ. ನರಕದಲ್ಲಿದ್ದ ಗೋಲ್ಡ್ ಸುರೇಶ್ ಬಳಿ ಬಂದ ಉಗ್ರಂ ಮಂಜು ಮಾತನಾಡಿದ್ದಾರೆ. ನಿಮಗೆ ಬಿಸಿ ನೀರು ಬೇಕು ಅಂದ್ರೆ ಬಿಗ್ ಬಾಸ್ ಬಳಿ ಕೇಳಿ. ಅವರಿಂದ ಉತ್ತರ ಬಂದಿಲ್ವಾ ಸ್ವಲ್ಪ ಸಮಯ ಕಾಯುವ ತಾಳ್ಮೆ ತಂದುಕೊಳ್ಳಿ. 120 ದಿನ ಇರ್ತೀವಿ ಅಂತ ಬಂದು ಒಂದೇ ದಿನಕ್ಕೆ ಈ ರೀತಿ ಆಡುತ್ತಿದ್ದೀರಲ್ಲ ಎಂದೇ ವಾದ-ಪ್ರತಿವಾದಕ್ಕೆ ಇಳಿದಿದ್ದಾರೆ.