Sandalwood Leading OnlineMedia

ಬಿಬಿಕೆ10: ಬಿಗ್ ಬಾಸ್ ನಲ್ಲಿ ತಾರತಮ್ಯ ನಡೀತಿದೆ ಎಂದು ಗಂಭೀರ ಆರೋಪ ಮಾಡಿದ ಸಂಗೀತಾ

ಬೆಂಗಳೂರು: ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಮತ್ತೆ ಮನೆಯಲ್ಲಿ ಸ್ಪರ್ಧಿಗಳ ನಡುವೆ ಮಾತಿನ ಚಕಮಕಿ ಜೋರಾಗುತ್ತಿದೆ. ಕಳೆದ ವಾರ ತಣ್ಣಗಿದ್ದ ಸದಸ್ಯರು ಈ ವಾರ ಎಂದಿನ ವರಸೆ ತೋರಿಸಿದ್ದಾರೆ.ಮನೆಯಲ್ಲಿ ಮಹಿಳೆ ಮತ್ತು ಪುರುಷ ಸ್ಪರ್ಧಿಗಳ ನಡುವೆ ತಾರತಮ್ಯ ನಡೆಯುತ್ತಿದೆ ಎಂಬ ಗಂಭೀರ ಆರೋಪವನ್ನು ಸಂಗೀತಾ ಹೊರಿಸಿದ್ದಾರೆ. ಇದೇ ವಿಚಾರಕ್ಕೆ ವಿನಯ್ ಮತ್ತು ಸಂಗೀತಾ ನಡುವೆ ಮಾತಿನ ಚಕಮಕಿಯೇ ನಡೆದಿದೆ.
ಮಹಿಳಾ ಸ್ಪರ್ಧಿಗಳಿಗೆ ಹೆಚ್ಚಿನ ಅವಕಾಶ ಸಿಗುತ್ತಿಲ್ಲ. ತಾರತಮ್ಯ ಮಾಡಲಾಗುತ್ತಿದೆ. ಇದೇ ಕಾರಣಕ್ಕೆ ಇದುವರೆಗೆ ಬಿಗ್ ಬಾಸ್ ನಲ್ಲಿ ಒಬ್ಬರು ಮಾತ್ರ ಮಹಿಳಾ ಸ್ಪರ್ಧಿ ವಿನ್ ಆಗಿದ್ದಾರೆ ಎಂದು ಸಂಗೀತಾ ಆರೋಪಿಸಿದ್ದಾರೆ. ನೀರಿನಲ್ಲಿ ಮುಳುಗುವ ಟಾಸ್ಕ್ ಬಂದಾಗ ವಿನಯ್, ‘ನಾನು, ಮೈಕಲ್, ಕಾರ್ತಿಕ್, ತುಕಾಲಿ ಹೋಗ್ತೀವಿ’ ಎಂದು ಹೇಳಿದರು. ಇದು ಸಂಗೀತಾ ಅಸಮಾಧಾನಕ್ಕೆ ಕಾರಣವಾಯಿತು.

ಇದಕ್ಕೆ ಕೆರಳಿದ ವಿನಯ್, ಮೊದಲು ಮಹಿಳೆ, ಪುರುಷರು ಎಂದು ತಾರತಮ್ಯ ಮಾಡುವುದನ್ನು ಬಿಡಿ. ಅದು ಈ ಮನೆಯಲ್ಲಿ ನಿಮ್ಮಿಂದ ಮಾತ್ರ ಬರುತ್ತಿದೆ ಎಂದು ವಿನಯ್ ಕೂಗಾಡಿದರು. ಇದಕ್ಕೆ ಸಂಗೀತಾ ಕೂಡಾ ತಿರುಗೇಟು ಕೊಟ್ಟಿದ್ದು, ನಿಮಗೆ ಅವಕಾಶ ಸಿಗುತ್ತಿದೆ ಎಂದು ಬೇರೆ ವಿಚಾರವನ್ನೆಲ್ಲಾ ಇಲ್ಲಿ ತರಬೇಡಿ ಎಂದಿದ್ದಾರೆ. ಈ ಎಪಿಸೋಡ್ ಇಂದು ಪ್ರಸಾರವಾಗಲಿದೆ.

Share this post:

Related Posts

To Subscribe to our News Letter.

Translate »