Sandalwood Leading OnlineMedia

BBK10: ಬಿಗ್ ಬಾಸ್ ಮನೆಗೆ ಮರಳಿದ ಡ್ರೋಣ್ ಪ್ರತಾಪ್

ಬೆಂಗಳೂರು: ಅನಾರೋಗ್ಯದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದು ಡ್ರೋಣ್ ಪ್ರತಾಪ್ ಇದೀಗ ಬಿಗ್ ಬಾಸ್ ಮನೆಗೆ ಮರಳಿದ್ದಾರೆ.ಇತ್ತೀಚೆಗೆ ಬಿಗ್ ಬಾಸ್ ಮನೆಯಲ್ಲಿ ಡ್ರೋಣ್ ಪ್ರತಾಪ್ ಮಾತ್ರೆ ನುಂಗಿ ಆತ್ಮಹತ್ಯೆಗೆ ಯತ್ನಿಸಿದ್ದರು ಎಂದು ವದಂತಿಯಾಗಿತ್ತು. ಆದರೆ ಬಳಿಕ ಅವರನ್ನು ಫುಡ್ ಪಾಯ್ಸನ್ ಆಗಿರುವ ಕಾರಣಕ್ಕೆ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂಬ ಮಾಹಿತಿ ಬಂದಿತ್ತು.

ಕಳೆದ ಎರಡು ದಿನಗಳಿಂದ ಪ್ರತಾಪ್ ಮನೆಯಲ್ಲಿರಲಿಲ್ಲ. ಇದೀಗ ಡ್ರೋಣ್ ಪ್ರತಾಪ್ ಮನೆಗೆ ಮರಳಿದ್ದು, ಇತರ ಸದಸ್ಯರು ಅವರನ್ನು ಖುಷಿಯಿಂದ ಸ್ವಾಗತಿಸಿದ್ದಾರೆ.ಪ್ರತಾಪ್ ಮನೆಗೆ ಬರುತ್ತಿದ್ದಂತೇ ಸಂಗೀತಾ, ನಮ್ರತಾ ಸೇರಿದಂತೆ ಸ್ಪರ್ಧಿಗಳು ಬೆಚ್ಚನೆಯ ಅಪ್ಪುಗೆ ನೀಡಿ ಸ್ವಾಗತಿಸಿದ್ದಾರೆ. ಇತರ ಸದಸ್ಯರು ಅವರ ಆರೋಗ್ಯ ವಿಚಾರಿಸಿಕೊಂಡಿದ್ದಾರೆ. ಹಾಗಿದ್ದರೂ ಪ್ರತಾಪ್ ಸಪ್ಪೆ ಮುಖ ಹಾಕಿಕೊಂಡೇ ಇದ್ದಾರೆ. ಅವರಿಗೆ ನಿಜವಾಗಿ ಏನಾಗಿತ್ತು ಎಂಬುದನ್ನು ಅವರು ಇಂದಿನ ಸಂಚಿಕೆಯಲ್ಲಿ ಹೇಳುವ ಸಾ‍ಧ್ಯತೆಯಿದೆ.a

Share this post:

Related Posts

To Subscribe to our News Letter.

Translate »