ಕನ್ನಡ ಕಿರುತೆರೆಯ ದೊಡ್ಡ ಶೋ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ವೇದಿಕೆಗೆ ಕಿಚ್ಚ ಸುದೀಪ್ ಮಾಸ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಇಂದು ಸಂಜೆ 6 ಗಂಟೆಯಿಂದ ಬಿಗ್ಬಾಸ್ ಗ್ರ್ಯಾಂಡ್ ಫಿನಾಲೆ ಆರಂಭವಾಗುತ್ತಿದ್ದು, ಫೈನಲಿಸ್ಟ್ ಆಗಿ ಹೊರ ಹೊಮ್ಮಿರುವ 6 ಸ್ಪರ್ಧಿಗಳ ಎದೆಯಲ್ಲಿ ಢವಢವಂತೂ ಶುರುವಾಗಿದೆ.‘ಬಿಗ್ ಬಾಸ್ ಕನ್ನಡ ಸೀಸನ್ 11’ರ ಫಿನಾಲೆ ವೇದಿಕೆಗೆ ಸುದೀಪ್ ಗ್ರ್ಯಾಂಡ್ ಆಗಿ ಎಂಟ್ರಿ ಕೊಟ್ಟಿದ್ದಾರೆ. ಫಿನಾಲೆಯಲ್ಲಿರುವ ಸ್ಪರ್ಧಿಗಳ ಕುಟುಂಬದವರನ್ನು ಮಾತನಾಡಿಸುವ ಕೆಲಸವನ್ನು ಸುದೀಪ್ ಮಾಡಿದ್ದಾರೆ.
ಮನೆಯಲ್ಲಿ ಉಳಿದ ಆರು ಸ್ಪರ್ಧಿಗಳಲ್ಲಿ ವಿನ್ನರ್ ಪಟ್ಟ ಯಾರಿಗೆ ಅಂತ ಪ್ರೇಕ್ಷಕರೆಲ್ಲಾ ಎದುರು ನೋಡುತ್ತಿದ್ದಾರೆ. ಅಲ್ಲದೇ ಕಿಚ್ಚ ಸುದೀಪ್ ಅವರು ನಡೆಸಿಕೊಳ್ಳುವ ಲಾಸ್ಟ್ ಸೀಸನ್ ಕೂಡ ಇದಾಗಿದ್ದು, ಹೀಗಾಗಿ ಕಿಚ್ಚನನ್ನು ಕೊನೆಯ ಬಾರಿ ಬಿಗ್ಬಾಸ್ ವೇದಿಕೆ ಮೇಲೆ ಕಣ್ತುಂಬಿಕೊಳ್ಳಲು ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ವೇದಿಕೆಯ ಮುಂಬಾಗ ಸೀಸನ್ 11ರ ಅಷ್ಟೂ ಸ್ಪರ್ಧಿಗಳು ಭಾಗಿಯಾಗಿದ್ದಾರೆ. ಅಲ್ಲದೇ ಬಿಗ್ಬಾಸ್ ಫೈನಲಿಸ್ಟ್ ಸ್ಥಾನದಲ್ಲಿರೋ 6 ಸ್ಪರ್ಧಿಗಳ ಕುಟುಂಬಸ್ಥರು ಬಂದಿದ್ದಾರೆ.
ಹನುಮಂತೂ ಫಿನಾಲೆ ವೀಕ್ಗೆ ಬಂದು ಕುಳಿತುಕೊಂಡಿದ್ದೀರಾ ನಿಮ್ಮ ಹುಡುಗಿಗೆ ಎಷ್ಟು ಖುಷಿ ಆಗಿರಬೇಕು ಎಂದಿದ್ದಾರೆ. ಆಗ ಹನುಮಂತ ಹುಡುಗಿ ಎಂಬ ಪದ ಹೇಳುತ್ತಿದ್ದಂತೆ ನಾಚಿ ನೀರಾಗಿದ್ದಾರೆ. ವೇದಿಕೆ ಮೇಲೆ ಹನುಮಂತನ ತಾಯಿಯ ಕಾಲೆಳೆದಿದ್ದಾರೆ. ‘ಒಪ್ಪಿಗೆ ಇದೆಯೇನಮ್ಮ’ ಎಂದು ಸುದೀಪ್ ಕೇಳಿದರು. ಇದಕ್ಕೆ ಇಲ್ಲ ಎಂಬ ಉತ್ತರ ಅವರ ತಾಯಿ ಇಂದ ಬಂತು. ‘ಈಗ ಹನುಮಂತ ಹುಡಗಿನ ನೋಡಿದಾರೆ, ಮುಂದೆ ಅವರು ಗಂಡನ್ನು ನೋಡ್ತಾರೆ’ ಎಂದರು ಸುದೀಪ್.