Left Ad
ಬಿಬಿಕೆ10: ಕಳೆದ ವಾರ ಬಚಾವ್ ಆಗಿದ್ದ ಸ್ನೇಹಿತ್ ಈ ವಾರ ಎಲಿಮಿನೇಟ್. - Chittara news
# Tags

ಬಿಬಿಕೆ10: ಕಳೆದ ವಾರ ಬಚಾವ್ ಆಗಿದ್ದ ಸ್ನೇಹಿತ್ ಈ ವಾರ ಎಲಿಮಿನೇಟ್.

ಬಿಗ್ ಬಾಸ್ ಕನ್ನಡ 10 ರಲ್ಲಿ ಈ ವಾರ ಮನೆಯಿಂದ ಸ್ನೇಹಿತ್ ಎಲಿಮಿನೇಟ್ ಆಗಿ ಹೊರಹೋಗಿದ್ದಾರೆ. ಕಳೆದ ವಾರ ಅವರು ಕಿಚ್ಚ ಸುದೀಪ್ ಕೃಪೆಯಿಂದ ಬಚಾವ್ ಆಗಿದ್ದಾರೆ.ಕಳೆದ ವಾರ ಕೂಡಾ ಸ್ನೇಹಿತ್ ಗೆ ಕಡಿಮೆ ವೋಟ್ ಬಂದಿತ್ತು. ಹಾಗಿದ್ದರೂ ಕಿಚ್ಚ ಸುದೀಪ್ ತಮ್ಮ ವಿಶೇಷಾಧಿಕಾರ ಬಳಸಿ ಉಳಿಸಿಕೊಂಡಿದ್ದರು. ಆದರೆ ಈ ವಾರ ಮತ್ತೆ ಸ್ನೇಹಿತ್ ಗೆ ಕಡಿಮೆ ವೋಟ್ ಬಂದಿದ್ದು ಎಲಿಮಿನೇಟ್ ಮಾಡಲಾಗಿದೆ.

ಇದನ್ನೂ ಓದಿ  ಬಿಬಿಕೆ10: ಕಳೆದ ವಾರ ಬಚಾವ್ ಆಗಿದ್ದ ಸ್ನೇಹಿತ್ ಈ ವಾರ ಎಲಿಮಿನೇಟ್.

ಸ್ನೇಹಿತ್ ಈ ವಾರ ಮನೆಯ ಕ್ಯಾಪ್ಟನ್ ಆಗಿದ್ದರು. ಆದರೆ ಅವರ ನಾಯಕತ್ವದ ಬಗ್ಗೆ ಸಾಕಷ್ಟು ಟೀಕೆ ಕೇಳಿಬಂದಿತ್ತು. ಕಿಚ್ಚ ಸುದೀಪ್ ಕೂಡಾ ಅವರ ನಾಯಕತ್ವದ ಬಗ್ಗೆ ಪ್ರಶ್ನೆ ಮಾಡಿದ್ದರು. ವೀಕ್ಷಕರೂ ಕಳೆದ ವಾರದಿಂದಲೇ ಸ್ನೇಹಿತ್ ಮನೆಯಿಂದ ಹೊರಹೋಗಬೇಕು ಎಂದು ಕಾಮೆಂಟ್ ಮಾಡುತ್ತಿದ್ದರು. ಇತ್ತೀಚೆಗೆ ಸ್ನೇಹಿತ್ ಗುಂಪು ಕಟ್ಟಿಕೊಂಡೇ ಆಡುತ್ತಿದ್ದಾರೆ ಎಂಬ ಆರೋಪಗಳೂ ಕೇಳಿಬಂದಿದ್ದವು. ಹೀಗಾಗಿಯೇ ಅವರಿಗೆ ಹಿನ್ನಡೆಯಾಯಿತು ಎನ್ನುವುದು ವೀಕ್ಷಕರ ಅಭಿಪ್ರಾಯ.

Spread the love
Translate »
Right Ad