Sandalwood Leading OnlineMedia

ಬಿಬಿಕೆ 10: ಏಕಾಏಕಿ 11 ಸಾವಿ ಫಾಲೋವರ್ ಗಳನ್ನು ಕಳೆದುಕೊಂಡ ಸಂಗೀತಾ

ಬಿಗ್ ಬಾಸ್ ಮನೆಗೆ ಹೋದರೆ ಜನಪ್ರಿಯತೆ ಹೆಚ್ಚಾಗುತ್ತದೆ ಎನ್ನಲಾಗುತ್ತದೆ. ಆದರೆ ನಟಿ ಸಂಗೀತಾ ಶೃಂಗೇರಿಗೆ ಎಲ್ಲವೂ ಉಲ್ಟಾ ಆಗಿದೆ.ಬಿಗ್ ಬಾಸ್ ಮನೆಗೆ ಹೋದ ಮೇಲೆ ಆರಂಭದಲ್ಲಿ ಸಂಗೀತಾಗೆ ಸಾಕಷ್ಟು ಜನ ವೀಕ್ಷಕರ ಬೆಂಬಲವಿತ್ತು. ಆದರೆ ಇತ್ತೀಚೆಗೆ ಕಾರ್ತಿಕ್ ಜೊತೆ ಕಿತ್ತಾಟ, ಟಾಸ್ಕ್ ವಿಚಾರದಲ್ಲಿ ಸಂಗೀತಾ ನಡೆದುಕೊಂಡ ರೀತಿ ವೀಕ್ಷಕರಿಗೆ ಇಷ್ಟವಾಗುತ್ತಿಲ್ಲ. ಇತ್ತೀಚೆಗಂತೂ ಪದೇ ಪದೇ ನಾನು ಬಿಗ್ ಬಾಸ್ ಮನೆ ಬಿಟ್ಟು ಹೋಗುತ್ತೇನೆ ಎನ್ನುತ್ತಿರುವುದು ವೀಕ್ಷಕರಿಗೆ ಅಸಮಾಧಾನ ತಂದಿದೆ.

ಇದನ್ನೂ ಓದಿ ಕಂಗುವಾ ಶೂಟಿಂಗ್ ವೇಳೆ ಗಾಯ: ಅಪ್ ಡೇಟ್ ಕೊಟ್ಟ ನಟ ಸೂರ್ಯ

ಈ ನಡುವೆ ಅವರು ಇನ್ ಸ್ಟಾಗ್ರಾಂನಲ್ಲಿ ಏಕಾಏಕಿ 11 ಸಾವಿರ ಫಾಲೋವರ್ ಗಳನ್ನು ಕಳೆದುಕೊಂಡಿದ್ದಾರೆ. ಮನೆಯಲ್ಲಿ ಸಂಗೀತಾ ನಡೆದುಕೊಳ್ಳುವ ರೀತಿಗೇ ಫಾಲೋವರ್ ಗಳೂ ನಷ್ಟವಾಗಿದ್ದಾರೆ ಎನ್ನಲಾಗುತ್ತಿದೆ. ಅದರಲ್ಲೂ ಕಾರ್ತಿಕ್ ಗೆ ತಲೆಬೋಳಿಸುವ ಟಾಸ್ಕ್ ಆದ ಮೇಲೆಯೇ ಈ ರೀತಿ ಆಗಿದೆ.ಮೊದಲು ಸಂಗೀತಾಗೆ 4.49 ಲಕ್ಷ ಹಿಂಬಾಲಕರಿದ್ದರು. ಇದೀಗ ಏಕಾಏಕಿ ಹಿಂಬಾಲಕರ ಸಂಖ್ಯೆ 4.38 ಲಕ್ಷಕ್ಕೆ ಇಳಿಕೆಯಾಗಿದೆ. ಸಂಗೀತಾ ಬಿಗ್ ಬಾಸ್ ಮನೆಯಲ್ಲಿ ನಡೆದುಕೊಳ್ಳುವ ರೀತಿಯೇ ಹಿಂಬಾಲಕರ ಸಂಖ್ಯೆ ಇಳಿಕೆಗೆ ಕಾರಣವಾಗುತ್ತಿದೆ.

Share this post:

Translate »