Sandalwood Leading OnlineMedia

ಬಿಗ್ ಬಾಸ್ ಕನ್ನಡ ಸೀಸನ್ 10 ರಲ್ಲಿ ಈ ವಾರ ಸವಾಲಿಗೆ ಸವಾಲು ಎನ್ನುವಂತಹ ಟಾಸ್ಕ್ ಒಂದು ನಡೆಯುತ್ತಿದೆ.

ಈ ವಾರ ಟಾಸ್ಕ್ ಆಡಿಸಲೆಂದೇ ಬ್ರಹ್ಮಾಂಡ ಗುರೂಜಿ ಮನೆಯೊಳಗೆ ಬಂದಿದ್ದಾರೆ. ಸ್ಪರ್ಧಿಗಳನ್ನು ಎರಡು ತಂಡಗಳಾಗಿ ಮಾಡಲಾಗಿದೆ. ಒಂದು ಕಾಲದಲ್ಲಿ ಸ್ನೇಹಿತರಾಗಿದ್ದ ಸಂಗೀತಾ ಮತ್ತು ಕಾರ್ತಿಕ್ ಈಗ ಬೇರೆ ಬೇರೆ ತಂಡಗಳಲ್ಲಿದ್ದು, ಪರಸ್ಪರ ಕತ್ತಿಮಸೆಯುತ್ತಿದ್ದಾರೆ.
ಇದೀಗ ಸಂಗೀತಾ ಟಾಸ್ಕ್ ನಿಯಮದಂತೆ ಎದುರಾಳಿ ತಂಡದ ಕಾರ್ತಿಕ್ ಮತ್ತು ತುಕಾಲಿ ಸಂತೋಷ್ ಗೆ ತಲೆಬೋಳಿಸುವ ಟಾಸ್ಕ್ ನೀಡಿದ್ದಾರೆ. ಅದರಂತೆ ಕಾರ್ತಿಕ್ ತಂಡಕ್ಕಾಗಿ ಏನು ಮಾಡಲೂ ಸೈ ಎಂದು ತಲೆ ಕೂದಲಿಗೆ ಕತ್ತರಿ ಹಾಕಿದ್ದಾರೆ. ಸಂತೋಷ್ ಗೆ ವಿನಾಯ್ತಿ ಕೊಡಿ ಎಂದು ಅವರ ತಂಡದವರು ಮನವಿ ಮಾಡಿದಾಗ ಇಬ್ಬರ ನಡುವೆ ಕಿತ್ತಾಟವಾಗಿದೆ. ಕೊನೆಗೆ ಸಂತೋಷ್ ತಲೆ ಬೋಳಿಸಿಕೊಂಡರಾ ಎಂದು ಇಂದಿನ ಎಪಿಸೋಡ್ ನಲ್ಲಿ ತಿಳಿಯಲಿದೆ.

Share this post:

Translate »