Sandalwood Leading OnlineMedia

`ಬಜಾರ್’ ಹುಡುಗನ ಫಿಟ್ನೆಸ್‌ಗುಟ್ಟು..ಎಲ್ಲಿಯೇ ಹೋದರೂ ವರ್ಕೌಟ್ ಮಾತ್ರ ನಿಲ್ಲಿಸಲ್ಲಧನ್ವೀರ್

ಇತ್ತಿಚಿನ ದಿನಗಳಲ್ಲಿ ಫಿಟ್ನೆಸ್‌ಎಂಬುದುಎಲ್ಲರಜೀವನಕ್ಕೂ ಬಹಳ ಹತ್ತಿರದ ಸಬ್ಜೆಕ್ಟ್ಆಗಿದೆ. ಎಲ್ಲರೂ ಫಿಟ್ನೆಸ್ ಬಗ್ಗೆ ಹೆಚ್ಚು ಗಮನ ಕೊಡುತ್ತಾರೆ. ಅದರಲ್ಲೂ ಸೆಲೆಬ್ರೆಟಿಗಳಂತೂ ವರ್ಕೌಟ್ ನಿಲ್ಲಿಸುವ ಮಾತೇಇಲ್ಲ. ಇಂದಿನ ನಮ್ಮ ಫಿಟ್ನೆಸ್‌ಕಾಲಂನಲ್ಲಿಧನ್ವಿರ್ ಫಿಟ್ನೆಸ್‌ಗುಟ್ಟಿನ ಬಗ್ಗೆ ತಿಲೀಸಲಾಗುತ್ತಿದೆ. ಧನ್ವೀರ್ ಬಜಾರ್ ಸಿನಿಮಾ ಮೂಲಕ ಇಂಡಸ್ಟಿಗೆ ಪದಾರ್ಪಣೆ ಮಾಡಿ, ಬಜಾರ್ ಹುಡುಗಎಂದೇಖ್ಯಾತಿ ಗಳಿಸಿದವರು.

 

ಆಕ್ಷನ್ ಸಿನಿಮಾಗಳೆಂದರೆ ಇಷ್ಟಪಡುವಧನ್ವೀರ್, ಯಾವುದೇರೀತಿಯರಿಸ್ಕ್ಇದ್ದರು ಆ ಫೈಟ್ ಮಾಡುವುದಕ್ಕೆ ಮುಂದೆಇರುತ್ತಾರೆ. ಈ ಆಕ್ಷನ್‌ದೃಶ್ಯಆಗಲ್ಲಎಂದರೆ, ಯಾಕಾಗಲ್ಲ…ಒಮ್ಮೆಟ್ರೆ ಮಾಡೋಣಾಎಂದೇ ಮುನ್ನುಗ್ಗುತ್ತಾರೆ. ಒಂದು ದಿನವೂ ವರ್ಕೌಟ್ ಸ್ಟಾಪ್ ಮಾಡದಧನ್ವೀರ್‌ತಮ್ಮ ಫಿಟ್ನೆಸ್‌ಗುಟ್ಟನ್ನು `ಚಿತ್ತಾರ’ದೊಂದಿಗೆ ಹಂಚಿಕೊಂಡಿದ್ದಾರೆ. 

ಇದನ್ನೂ ಓದಿ:ಬಿಲ್ಲು ಬಾಣ ಹಿಡಿದು ‘ರಾಮಾಯಣ’ ಚಿತ್ರಕ್ಕೆ ರೆಡಿ ಆದ ರಣಬೀರ್ ಕಪೂರ್; ನಡೆದಿದೆ ಭರ್ಜರಿ ಸಿದ್ಧತೆ

`ಫಿಟ್ನೆಸ್‌ಎಂಬುದುಈಗಂತು ಬಹಳ ಮುಖ್ಯವಾಗುತ್ತೆ. ಯಾಕಂದ್ರೆಆರೋಗ್ಯ ಕಾಪಾಡಿಕೊಳ್ಳುವುದಕ್ಕೂ ವರ್ಕೌಟ್ ಬಹಳ ಮುಖ್ಯ. ಈಗಿನ ಫುಡ್‌ಗಳ ಜೊತೆಗೆಒಂದಷ್ಟುದೇಹದಂಡನೆ ಮಾಡಿದಾಗ ಮಾತ್ರ ಮನುಷ್ಯಆರೋಗ್ಯವಾಗಿರಲು ಸಾಧ್ಯವಾಗುತ್ತದೆ.ಜೊತೆಗೆಒಂದಷ್ಟು ವರ್ಷಗಳ ಕಾಲ ಬದುಕುಳಿಯಲು ಸಾಧ್ಯವಾಗುತ್ತದೆ. ಕೊಲೆಸ್ಟಾಲ್ ಜಾಸ್ತಿಯಾದಾಗ ಒಂದಷ್ಟು ಕಾಯಿಲೆಗಳು ನಮ್ಮನ್ನುಕಾಡುತ್ತವೆ.

 

ಬಿಪಿ, ಶುಗರ್ ಈ ಎಲ್ಲದರಿಂದದೂರಇರಬೇಕಾಗುತ್ತದೆ. ಹೀಗಾಗಿ ಸೆಲೆಬ್ರೆಟಿಅಂತಾನೇಅಲ್ಲ, ನಾರ್ಮಲ್ ಆಗಿ ಎಲ್ಲರಿಗೂ ಫಿಟ್ನೆಸ್‌ಎಂಬುದು ಬಹಳ ಮುಖ್ಯ ಫೀಟ್ನೆಸ್‌ಕಡೆಗೆ ನಾವೂಇನ್ನು ಹೆಚ್ಚಿನ ಗಮನ ನೀಡಬೇಕಾಗುತ್ತದೆ.

ಇದನ್ನೂ ಓದಿ:Very Talented : ಚೈತ್ರ ಆಚಾರ್

ನಾವೆಲ್ಲಾಆಡಿಯನ್ಸ್ನಎಂಟರ್‌ಟೈನ್ ಮಾಡಬೆಕು ಹೀಗಾಗಿ ಫಿಟ್ನೆಸ್ ಮೆಂಟೈನ್ ಮಾಡಬೇಕಾಗುತ್ತದೆ. ಪ್ರತಿ ಸಿನಿಮಾಗೂ ಆ ಪಾತ್ರಕ್ಕೆಯಾವಥರಕಾಣಬೇಕುಅಂತಇರುತ್ತದೋ ಆ ರೀತಿಕಾಣುವಂತೆ ಬಾಡಿಟ್ರಾನ್ಸ್ಫಾರ್ಮೆಶನ್ ಮಾಡಿಕೊಳ್ಳುತ್ತಾ ಇರುತ್ತೀನಿ.ಈಗಿನ ಜನರೇಷನ್‌ಗೆ ಸಿಕ್ಸ್ ಪ್ಯಾಕ್, ೮ ಪ್ಯಾಕ್‌ಅನ್ನೋದುಟ್ರೆಂಡ್ ಆಗಿ ಬಿಟ್ಟಿದೆ. ಆದರೆ ಆ ರೀತಿಯ ಬಾಡಿ ಬಿಲ್ಡ್ ಮಾಡುವುದುಎಲ್ಲರಿಗೂಅವಶ್ಯಕತೆಇರುವುದಿಲ್ಲ.

 

ಇದನ್ನೂ ಓದಿ:ಸಾವರ್ಕರ್ ಚಿತ್ರದ ಬಾಕ್ಸ್ ಆಫೀಸ್ ಕಲೆಕ್ಷನ್ ದಿನ 1: ರಣದೀಪ್ ಹೂಡಾ ಅವರ ಚಲನಚಿತ್ರವು ಭಾರತದಲ್ಲಿ ₹ 1 ಕೋಟಿಗೂ ಹೆಚ್ಚು ಗಳಿಸಿತು

 

ಅದು ಪ್ರೊಫೆಷನಲ್ಸ್ ಮಾಡುವುದು. ನಾವೆಲ್ಲಾಆರೋಗ್ಯ ಕಾಪಾಡಿಕೊಳ್ಳುವುದಕ್ಕೆ ಏನು ಬೇಕೋ ಅದನ್ನೇ ಮಾಡಬೇಕಾಗುತ್ತದೆ. ನಾವೆಲ್ಲಾ ಹೇಗೆ ಮಾಡ್ತೀವಿ ಅಂದ್ರೆ ಸಿನಿಮಾ ನೋಡಿಕೊಂಡು, ಆ ಪಾತ್ರಕ್ಕೆತಕ್ಕನಾಗಿ ಬಾಡಿ ಬಿಲ್ಡ್ ಮಾಡಿಕೊಳ್ಳುತ್ತೀವಿ. ಬರೀ ವರ್ಕೌಟ್ ಮಾಡಿದ್ರೆ ಸಾಕಾಗುವುದಿಲ್ಲ, ಅದಕ್ಕೆತಕ್ಕನಾಗಿ ಫುಡ್‌ಕೂಡ ಮೆಂಟೈನ್ ಮಾಡಬೇಕಾಗುತ್ತದೆ. ನನ್ನ ವರ್ಕೌಟ್‌ಕಂಪ್ಲೀಟ್ ಸಿನಿಮಾಗೆ ಬೇಕಾದರೀತಿಯೇಇರುತ್ತದೆ. ಒಂದು ಸಿನಿಮಾಗೆದಪ್ಪ ಆಗಬೇಕು ಎಂದರೆಅದಕ್ಕೆಊಟದರೀತಿ ಬೇರೆಇರುತ್ತದೆ. ಸಣ್ಣ ಆಗಬೇಕು ಅಂದ್ರೆಅದಕ್ಕೆಊಟದ  ಬೇರೆಇರುತ್ತದೆ. ಕೈವ ಸಿನಿಮಾ ಮಾಡುವಾಗ ನಾನು ಕಂಪ್ಲೀಟ್ ನಾನ್ ವೆಜ್ ಬಿಟ್ಟಿದ್ದೆ. ಆರು ತಿಂಗಳುಗಳ ಕಾಲ ತಿಂದಿರಲಿಲ್ಲ.

ಇದನ್ನೂ ಓದಿ : ಸೆಟ್ಟೇರಿತು ʻಸಿದ್ಲಿಂಗು-2ʼ : ಡಬ್ಬಲ್ ಮೀನಿಂಗ್ ನಿಂದ ದೂರ ದೂರ..!

ಬೆಳಗ್ಗೆ 4 ಗಂಟೆಗೆಎದ್ದುಎರಡು ಗಂಟೆಗಳ ಕಾಲ ವರ್ಕೌಟ್ ಮಾಡ್ತೀನಿ. ಅದಾದ ನಂತರ ಶೂಟಿಂಗ್ ಹೋಗ್ತೀನಿ. ಅಲ್ಲಿಂದ ಬಂದ ಮೇಲೂ ಒಂದು ಸ್ವಲ್ಪ ಹೊತ್ತು ವರ್ಕೌಟ್ ಮಾಡಿ, ಊಟ ಮಾಡಿ ಮಲಗಿಕೊಳ್ಳುತ್ತೀನಿ. ವರ್ಕೌಟ್‌ಜೊತೆಗೆಅದಕ್ಕೆ ಬೇಕಾದಡಯೆಟ್‌ಕೂಡ ಮಾಡ್ತೀನಿ. ಔಟ್‌ಡೋರ್ ಶೂಟ್ ಹೋದಾಗಲೂ ನಾನು ಜಿಮ್ ಫೆಸಿಲಿಟಿ ಇರುವಕಡೆಯಲ್ಲಿಯೇ ಉಳಿದುಕೊಳ್ಳುತ್ತೀನಿ. ಒಂದು ದಿನ ಬಿಟ್ಟರು ಸೋಮಾರಿತನ ಬಂದು ಬಿಡುತ್ತದೆ. ಹೀಗಾಗಿ ನಾನು ಯಾವತ್ತುಕೂಡವರ್ಕೌಟ್ ಮಾಡುವುದನ್ನು ಬಿಡಲ್ಲ’ ಎಂದಿದ್ದಾರೆ.

 

ಈಗಾಗಲೇ `ಹಯಗ್ರೀವ’ ಸಿನಿಮಾವನ್ನುಒಪ್ಪಿಕೊಂಡು ಶೂಟಿಂಗ್‌ನಲ್ಲಿ ಬ್ಯುಸಿಯಾಗಿರುವ ನಟಧನ್ವೀರ್ ಸಿನಿಮಾದ ಸ್ಪೆಷಾಲಿಟಿ ಬಗ್ಗೆಯೂ ಮಾತನಾಡಿದ್ದಾರೆ. `ಹಯಗ್ರೀವ’ ಸಿನಿಮಾದಕಥೆಯೇಒಂಥರ ಫ್ರೆಶ್ ಫೀಲ್‌ಕೊಡುತ್ತದೆ. ಟೈಟಲ್‌ಕೂಡ ಸಖತ್‌ಇಷ್ಟವಾಯಿತು. ಅಂದು ಪುರಾಣದಲ್ಲಿ ನಡೆದಂತಕಥೆಯನ್ನು ಇಂದಿನ ಪರಿಸ್ಥಿತಿಗೆ ತೋರಿಸುತ್ತಿದ್ದಾರೆ ಅಷ್ಟೇ.

ಇದನ್ನೂ ಓದಿ:ಪ್ರಕಾಶ್ ರಾಜ್ ಹುಟ್ಟುಹಬ್ಬ : ನೇರನುಡಿಯಿಂದ ಟೀಕೆಗೆ ಒಳಗಾಗುವ ನಟನ ಬಗ್ಗೆ ಇಲ್ಲಿದೆ ಮಾಹಿತಿ

ಹಯಗ್ರೀವಅವತಾರವನ್ನುಯಾಕೆ ತಾಳಿದ ಎಂಬುದು ಅಂದಿನ ಕಥೆಯಾದರೆ ಈ ಸಿನಿಮಾದಲ್ಲಿ ಹಯಗ್ರೀವ ಎಂಬ ಹೆಸರುಯಾಕೆ ಬಂತುಎಂಬುದು ಸಿನಿಮಾದಕುತೂಹಲವಾಗಿದೆ. ಕಂಪ್ಲೀಟ್ ಮಾಸ್ ಹೀರೋ. ಇದರಜೊತೆಗೆ ಬೇರೆ ಬೇರೆ ಸಿನಿಮಾದ ಕಥೆಗಳನ್ನು ಕೇಳುತ್ತಿದ್ದೀನಿ. ನಾನು ಏನಿದ್ದರು, ಮೊದಲುಒಪ್ಪಿಕೊಂಡಂತ ಸಿನಿಮಾವನ್ನು ಮುಗಿಸಿ, ಅದು ಮುಗಿಯುವ ಹಂತಕ್ಕೆ ಬಂದ ಮೇಲೆ ಇನ್ನೊಂದು ಸಿನಿಮಾವನ್ನು ಒಪ್ಪಿಕೊಳ್ಳುತ್ತೇನೆ’ ಎಂದಿದ್ದಾರೆ.

Share this post:

Related Posts

To Subscribe to our News Letter.

Translate »