ಬೆಂಗಳೂರು ಮೂಲದ ಖ್ಯಾತ ರ್ಯಾಪರ್ ಹಾಗೂ ಸಂಗೀತ ನಿರ್ದೇಶಕ ಬ್ರೋಧ. ವಿ ಮತ್ತೊಂದು ಕಿಕ್ ಕೊಡೋ ಹಾಡಿನೊಂದಿಗೆ ಹೊಸ ವರ್ಷವನ್ನು ಆರಂಭಿಸಿದ್ದಾರೆ. ಬ್ರೋಧ. ವಿ ಹೊಸ ರ್ಯಾಪ್ ಸಾಂಗ್ ‘ಬಸ್ತಿ ಬೌನ್ಸ್’ ಬಿಡುಗಡೆಯಾಗಿ ಅಭಿಮಾನಿಗಳಿಂದ ಸಖತ್ ರೆಸ್ಪಾನ್ಸ್ ಗಿಟ್ಟಿಸಿಕೊಂಡಿದೆ.
‘ಬಸ್ತಿ ಬೌನ್ಸ್’ ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾಗಿ ಸೂಪರ್ ಡೂಪರ್ ಹಿಟ್ ಆದ ‘ವೈಂಕೋ’ ಹಾಡಿನ ಸೀಕ್ವಲ್ ಆಗಿದೆ. ‘ವೈಂಕೋ’ ಸಾಂಗ್ ಬ್ರೋಧ. ವಿ ಸೂಪರ್ ಡೂಪರ್ ಹಿಟ್ ಸಾಂಗ್ ಗಳಲ್ಲೊಂದಾಗಿದ್ದು, ಈ ಹಾಡನ್ನು ‘ಫ್ಯಾಮಿಲಿ ಮೆನ್’ ಸೀರಿಸ್ ನಲ್ಲಿ ಬಳಸಿಕೊಳ್ಳಲಾಗಿತ್ತು. ಅಭಿಮಾನಿಗಳ ಬಹು ಬೇಡಿಕೆ ಹಾಗೂ ಬಹು ನಿರೀಕ್ಷೆಯ ಮೇರೆಗೆ ಬ್ರೋಧ. ವಿ ನಾಲ್ಕು ವರ್ಷದ ನಂತರ ಮತ್ತೊಮ್ಮೆ ‘ವೈಂಕೋ’ ಮ್ಯಾಜಿಕ್ ಕ್ರಿಯೇಟ್ ಮಾಡಲು ಅದರ ಸೀಕ್ವೆಲ್ ‘ಬಸ್ತಿ ಬೌನ್ಸ್’ ಬಿಡುಗಡೆ ಮಾಡಿದ್ದಾರೆ. ಸಾಂಗ್ ಬಿಡುಗಡೆಯಾಗುತ್ತಿದ್ದಂತೆ ಏಳು ಲಕ್ಷಕ್ಕೂ ಅಧಿಕ ವೀವ್ಸ್ ಕಂಡಿದ್ದು, ರ್ಯಾಪ್ ಪ್ರಿಯರಿಗೆ ಕಿಕ್ ನೀಡುತ್ತಿದೆ.
‘ಸೋಲ್ ಆಫ್ ಹೊಂದಿಸಿ ಬರೆಯಿರಿ’ ಸಾಂಗ್ ರಿಲೀಸ್ – ಫೆಬ್ರವರಿ 10ಕ್ಕೆ ‘ಹೊಂದಿಸಿ ಬರೆಯಿರಿ’ ಸಿನಿಮಾ ತೆರೆಗೆ
‘ವೈಂಕೋ’ ಹಾಡಿನ ನಂತರ ಮತ್ತೊಮ್ಮೆ ಅಭಿಮಾನಿಗಳು ನನ್ನ ಹಾಗೂ ಜೋರ್ಡ್ಇಂಡಿಯನ್ ಕಾಂಬಿನೇಶನ್ ಹಾಡಿಗಾಗಿ ಅಪಾರ ಬೇಡಿಕೆ ಇಟ್ಟಿದ್ದರು. ಹಳೆಯದನ್ನು ರಿಪೀಟ್ ಮಾಡದೇ, ಬೋರ್ ಹೊಡಿಸದೇ ಹೊಸತನ್ನು ಕ್ರಿಯೇಟ್ ಮಾಡಲು ಬಯಸಿದ್ದೇವು. ಇದಕ್ಕಾಗಿ ಒಂದು ಕಾನ್ಸೆಪ್ಟ್ ರೆಡಿ ಮಾಡಿ ಜೋರ್ಡ್ಇಂಡಿಯನ್ ಜೊತೆ ಸೇರಿ ಕ್ರಿಯಾತ್ಮಕವಾಗಿ ಕಟ್ಟಿಕೊಟ್ಟಿದ್ದೇವೆ. ಬಸ್ತಿ ಬೌನ್ಸ್ ಮೂಲಕ ಮತ್ತೊಮ್ಮೆ ವೈಂಕೋ ಮ್ಯಾಜಿಕ್ ಮರು ಸೃಷ್ಟಿಸಿದ್ದೇವಾ ಎಂದು ತಿಳಿಯಲು ಕಾತುರರಾಗಿದ್ದೇವೆ. ಇದೊಂದು ಫನ್ ಸಾಂಗ್ ಆಗಿದ್ದು ಕೇಳುಗರನ್ನು ಡಾನ್ಸ್ ಮಾಡುವಂತೆ ಪ್ರೇರೇಪಿಸುತ್ತದೆ ಎಂದು ಹಾಡಿನ ಬಗ್ಗೆ ರ್ಯಾಪರ್ ಬ್ರೋಧ. ವಿ ಮಾಹಿತಿ ಹಂಚಿಕೊಂಡಿದ್ದಾರೆ.
ಬ್ರೋಧ. ವಿ ಎಂದೇ ಖ್ಯಾತಿ ಗಳಿಸಿರುವ ವಿಘ್ನೇಶ್ ಶಿವಾನಂದ್ ಭಾರತದ ಪ್ರಮುಖ ರ್ಯಾಪ್ ಸಿಂಗರ್ ಗಳಲ್ಲಿ ಒಬ್ಬರಾಗಿದ್ದಾರೆ. ರ್ಯಾಪ್ ಗೆ ಶಾಸ್ತ್ರೀಯ ಸಂಗೀತ ಹಾಗೂ ಜಾನಪದ ಟಚ್ ನೀಡುವ ಕಲೆಯನ್ನು ಕರಗತ ಮಾಡಿಕೊಂಡಿರುವ ಬ್ರೋಧ. ವಿ ತಮ್ಮ ವಿಶಿಷ್ಟ ಶೈಲಿಯ ರ್ಯಾಪ್ ಸಾಂಗ್ ಮೂಲಕ ಅಪಾರ ಅಭಿಮಾನಿಗಳನ್ನು ಸಂಪಾದಿಸಿಕೊಂಡಿದ್ದಾರೆ.
https://youtu.be/MwKP0BeZ_no