‘ಬಸರಿಕಟ್ಟೆ’.
ಚಿಕ್ಕಮಗಳೂರು ಸಮೀಪ ಇರುವ ಒಂದು ಊರು ಬಸರಿ ಕಟ್ಟೆ. ಈ ಕಥೆಯಲ್ಲಿ ಸಸ್ಪೆನ್ಸ್, ಹಾರರ್, ಥ್ರಿಲ್ಲರ್ ಫ್ಯಾಮಿಲಿ ಎಲ್ಲವೂ ಮಿಶ್ರಣಗೊಂಡಿದೆ ಎನ್ನುತ್ತಾರೆ ನಿರ್ದೇಶಕ ವೈಭವ್.ಎಂ. ಈ ಕಥೆ ಅವರಿಗೆ ತಮ್ಮ ಕಿರುಚಿತ್ರದ ಶೂಟಿಂಗ್‌ಗೆ ಹೋಗಿದ್ದಾಗ ಹುಟ್ಟಿದ ಎಳೆ. ಅದೂ ಬಸರಿಕಟ್ಟೆ ಎಂಬ ಊರಿನಲ್ಲೆ. ಆ ಕಥೆಗೆ ಅದೇ ಊರು ಸೂಕ್ತ ಎನಿಸಿ ಚಿತ್ರವನ್ನು ಅಲ್ಲಿಯೇ ಶೂಟಿಂಗ್ ಮಾಡಿ ಚಿತ್ರಕ್ಕೂ ‘ಬಸರಿಕಟ್ಟೆ’ ಎಂದು ಹೆಸರಿಟ್ಟಿದ್ದಾರೆ. ಚಿತ್ರದ ಕಥೆಯ ಎಳೆಯನ್ನೆ ಹೇಳದೆ ಬರಿ ಜಾನರ್ ಹೇಳಿದ್ದಾರೆ. ಚಿತ್ರದ ಮೇಲೆ ಭಾರಿ ನಂಬಿಕೆ ಇಟ್ಟುಕೊಂಡಿರುವ ನಿರ್ದೇಶಕರು ಚಿತ್ರದ ಕಥೆಯ ಯಾವ ಎಳೆಯನ್ನು ಬಿಟ್ಟುಕೊಡಲಾಗುವುದಿಲ್ಲ ಚಿತ್ರವನ್ನು ಚಿತ್ರ ಮಂದಿರದಲ್ಲಿ ನೋಡಿದಾಗಲೇ ಆ ಕಥೆ ರಿವೀಲ್ ಆಗಬೇಕು ಎಂದಿದ್ದಾರೆ. ಇನ್ನು ಈ ಚಿತ್ರದ ಕಥೆ ಮಾಡಲು ಒಂದು ವರ್ಷಗಳ ಕಾಲ ಅಧ್ಯಯನ ಮಾಡಿದ್ದಾರೆ. ಸಂಶೋಧನೆ ನಡೆಸಿ ಚಿತ್ರದಲ್ಲಿ ಬರುವ ಪ್ರತೀ ಪಾತ್ರವನ್ನು ಡಿಸೈನ್ ಮಾಡಿದ್ದಾರೆ. ಸಿನಿಮಾದ ಕಥೆ ಚಿತ್ರಕಥೆ ಮತ್ತು ಸಂಭಾಷಣೆಯನ್ನು ವೈಭವ್‌ರವರೆ ಬರೆದಿದ್ದಾರೆ. ಚಿತ್ರದ ತಾರಾಗಣದಲ್ಲಿ ರಾಹುಲ್ ಮಾಧವ್, ಅನನ್ಯ ಕಶ್ಯಪ್, ಕೆ.ಎಸ್. ಶ್ರಿಧರ್, ಕಿರಣ್ ನಾಯಕ್, ಗೀತಾ ಸುರತ್ಕಲ್, ಅಮಾನುಲ್ಲಾ, ಅಶ್ವಿನ್ ಹಾಸನ್, ಬಾಲ ರಾಜವಾಡಿ ಇವರು ಮುಖ್ಯ ಭೂಮಿಕೆಯಲ್ಲಿದ್ದಾರೆ. ಸಂಗೀತ ನಿರ್ದೇಶಕರಾಗಿ ಮಣಿಕಾಂತ್ ಕದ್ರಿ, ಛಾಯಾಗ್ರಾಹಕರಾಗಿ ಅಶ್ವಿನ್ ಕೆನೆಡಿ, ಮತ್ತು ಸಂಕಲನಕಾರರಾಗಿ ಉಮೇಶ್ ಬಿ.ಯವರು ಈ ಚಿತ್ರಕ್ಕಾಗಿ ಕಾರ್ಯ ನಿರ್ವಹಿಸಿದ್ದಾರೆ. ಚಿತ್ರವನ್ನು ಉಡುಪಿ, ಮಂಗಳೂರು, ಚಿಕ್ಕ ಮಗಳೂರು, ಹೆಬ್ರಿ ಕಾರ್ಕಳ ಇನ್ನು ಮುಂತಾದ ಕಡೆಗಳಲ್ಲಿ ಚಿತ್ರೀಕರಣ ಮಾಡಿದ್ದಾರೆ.
ಇನ್ನೂ ಒದಿ ಮಾಸ್ ಲುಕ್‌ನಲ್ಲಿ ಎಂಟ್ರಿ ಕೊಟ್ಟ ಪ್ರವೀಣ್ ತೇಜ್: ‘ಜಿಗರ್’ ಟೀಸರ್ ಔಟ್
ನಿರ್ಮಾಪಕರನ್ನು ಉಳಿಸುವ ನಿರ್ದೇಶಕನಾಗಬೇಕು.
ನಾನು ಸಿನಿಮಾ ಮೊದಲು ಕಂಟೆAಟ್‌ಗೆ ಮೊದಲ ಆದ್ಯತೆ ಕೊಡುತ್ತೇನೆ. ಆ ಕಂಟೆAಟ್‌ಗೆ ತಕ್ಕಂತೆ ನಟ ನಟಿಯರನ್ನು ಆಯ್ದುಕೊಳ್ಳುತ್ತೇನೆ ಯಾವ ಪಾತ್ರಕ್ಕೆ ಯಾವ ನಟ ಬೇಕೋ ಅದೇ ತರಹದ ನಟನನ್ನೆ ಹುಡುಕಿ ಕೆಲಸ ತೆಗೆಯುತ್ತೇನೆ. ನಾನೇ ಬರಹಗಾರನಾಗಿರುವುದರಿಂದ ಚಿತ್ರಕಥೆಯನ್ನು ಬರವಣಿಗೆಯ ಹಂತದಲ್ಲೇ ಟ್ರಿಮ್ ಮಾಡಿಕೊಳ್ಳುತ್ತೇನೆ. ಕಂಪ್ಲೀಟ್ ಎಡಿಟಿಂಗ್ ಸ್ಕಿçಪ್ಟ್ ಜೊತೆ ಶೂಟಿಂಗ್‌ಗೆ ಹೋಗುತ್ತೇನೆ. ನಾನು ಹೆಚ್ಚು ಶಾಟ್ಸ್ಗಳನ್ನು ತೆಗೆದುಕೊಳ್ಳುತ್ತೇನೆ ಆದರೇ ಹೆಚ್ಚು ಸೀನ್‌ಗಳನ್ನು ಮಾಡಲು ಹೋಗುವುದಿಲ್ಲ. ಹೆಚ್ಚಾಗಿ ನಾನು ಸಿನಿಮಾಗೆ ಕಂಟೆAಟ್‌ಗಳನ್ನು ಜನರಲ್ಲಿ ಹುಡುಕುತ್ತೇನೆ ಅದಕ್ಕಾಗಿ ನಾನು ಹೆಚ್ಚು ಜನರ ಮದ್ಯೆ ಬೆರೆಯುತ್ತೇನೆ. ಜನರಿಗೆ ಏನಿಷ್ಟ, ಯಾವ ತರಹದ ಕಥೆಗಳನ್ನು ಜನರು ನೋಡಲು ಬಯಸುತ್ತಾರೆ ಅನ್ನುವುದನ್ನು ತಿಳಿದುಕೊಂಡು, ಯಾವಾಗಲೂ ಅದರ ಮೇಲೆ ಅವಲೋಕಿಸುತ್ತೇನೆ. ಯಾವುದಾದರು ಕಥೆಯ ಎಳೆ ನನ್ನ ಮೈಂಡ್‌ನಲ್ಲಿ ಲಾಕ್ ಆಯಿತು ಅಂದಮೇಲೆ ನಾನು ನನ್ನ ಕಲ್ಪನೆಯಲ್ಲೆ ಆ ಕಥೆಯನ್ನು ಸಂಪೂರ್ಣ ಚಿತ್ರವನ್ನಾಗಿ ನೋಡಿ ಅದು ನನಗೆ ಇಷ್ಟವಾದರೆ ಆಮೇಲೆ ನಾನು ಪೇಪರ್ ಮೇಲೆ ಕಥೆ ಬರೆಯೋದಕ್ಕೆ ಶುರು ಮಾಡ್ತೀನಿ. ನಾನು ಕಥೆ ಮಾಡುವುದಕ್ಕೆ ಅಂತಾನೆ ಪ್ರೊಡ್ಯೂಸರ್ ದುಡ್ಡು ಖರ್ಚು ಮಾಡಿಸೋ ಜಾಯಮಾನದವನಲ್ಲ. ಬರೆಯಲು ನನಗೆ ಪ್ರಶಾಂತವಾದ ಜಾಗ ಬೇಕು ಅಷ್ಟೆ, ಅದು ಎಲ್ಲಿದ್ದರೇನು? ಹಾಗೆಯೇ ನಾನು ಶೂಟಿಂಗ್‌ನಲ್ಲೂ ಎರಡೂವರೆ ಗಂಟೆ ಸಿನಿಮಾವನ್ನು ಐದಾರು ಗಂಟೆ ಚಿತ್ರಿಸುವುದಿಲ್ಲ. ಎಲ್ಲಿ ಪ್ರೊಡ್ಯೂಸರ್ ದುಡ್ಡು ಉಳಿಸಬಹುದೋ ಸಾಧ್ಯವಾದಷ್ಟು ನಾನು ಅಲ್ಲೆಲ್ಲಾ ಅವರ ಹಣ ಉಳಿಸಲು ಪ್ರಾಮಾಣಿಕವಾದ ಪ್ರಯತ್ನ ಮಾಡುತ್ತೇನೆ. ನಾನು ಎಡಿಟಿಂಗ್ ಸ್ಕಿçಪ್ಟ್ ಇಲ್ಲದೆ ಸಿನಿಮಾ ಶೂಟಿಂಗ್‌ಗೆ ಹೋಗುವುದಿಲ್ಲ ನಾನು ಉಳಿಸಿದ ಪ್ರೊಡ್ಯೂಸರ್ ದುಡ್ಡು ಅದು ನನ್ನಂತಹ ಇನ್ನೊಬ್ಬ ಸ್ಟçಗ್ಲಿಂಗ್ ಡೈರೆಕ್ಟರ್ ಕನಸಿಗೆ ಬಂಡವಾಳವಾಗಲಿ ಎನ್ನುವುದು ನನ್ನ ಆಶಯ, ಇದು ನನ್ನ ವರ್ಕಿಂಗ್ ಸ್ಟೆöÊಲ್.
– ವೈಭವ್, ಎಂ. ನಿರ್ದೇಶಕ
ಇನ್ನೂ ಒದಿ ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅವರಿಂದ ಅನಾವರಣವಾಯಿತು “ಉಸಿರೇ ಉಸಿರೇ” ಚಿತ್ರದ ಟ್ರೇಲರ್ .
ನಾನು ಮತ್ತು ವೈಭವ್.ಎಂ ಇಬ್ಬರೂ ಸ್ನೇಹಿತರು. ಭೀಮ ಸೇನ ನಳಮಹಾರಾಜ ಸಿನಿಮಾದಲ್ಲಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡುವಾಗ ಪರಿಚಯವಾಗಿ ಇಬ್ಬರಿಗೂ ಗೆಳೆತನ ಬೆಳೆಯಿತು. ಇಬ್ಬರಿಗೂ ಗೆಳೆತನದಲ್ಲಿ ಒಳ್ಳೆಯ ಹೊಂದಾಣಿಕೆ ಇದ್ದದ್ದರಿಂದ, ಇಬ್ಬರೂ ಸೇರಿ ಒಂದು ಸಿನಿಮಾ ಮಾಡಬೇಕೆಂದು ನಿರ್ದರಿಸಿದೆವು. ಆಗ ಹುಟ್ಟಿಕೊಂಡಿತು ಈ ‘ಬಸರಿಕಟ್ಟೆ’. ಈ ಚಿತ್ರದ ಒನ್ ಲೈನ್ ಹೇಳಿದಾಗ ಇದನ್ನು ಸಿನಿಮಾ ಮಾಡುವುದು ತುಂಬಾ ಕಷ್ಟ ಎನಿಸಿತ್ತು, ಮತ್ತೆ ನಮ್ಮ ನಿರ್ದೇಶಕರಾದ ವೈಭವ್.ಎಂ ರವರು ಆ ಕಥೆ ಮೇಲೆ ರಿಸರ್ಚ್ ಮಾಡಿ ಡೆವಲಪ್ ಮಾಡಿದ್ದು ನೋಡಿ ಗಾಬರಿಯಾಗಿ, ಈ ಕಥೆಗೆ ನಾನೆ ಬಂಡವಾಳ ಹಾಕುತ್ತೇನೆ ಎಂದು ನಿರ್ಧರಿಸಿದೆ. ಕಥೆಯಲ್ಲಿನ ಪ್ರತೀ ನಿಮಿಷವೂ ಸಿನಿಮಾವನ್ನು ನೋಡಿಸಿಕೊಳ್ಳುವಂತೆ ಪೋಣಿಕೆಯಾಗಿತ್ತು. ‘ಬಸರಿಕಟ್ಟೆ’ ಸಿನಿಮಾ ಪ್ರೇಕ್ಷಕರ ಸಿನಿಮಾವಾಗಿ ಗೆಲ್ಲುತ್ತದೆ.
– ಪ್ರಶಾಂತ್. ನಿರ್ಮಾಪಕರು
ಇನ್ನೂ ಒದಿ ಮಾತಿನಮನೆಯಲ್ಲಿ “chef ಚಿದಂಬರ”