Sandalwood Leading OnlineMedia

ಕರುಳಿನ ಸಮಸ್ಯೆಯಿಂದ ನಟ ವಿನೋದ್ ರಾಜ್ ಆಸ್ಪತ್ರೆಗೆ ದಾಖಲು..!

ಕನ್ನಡ ಚಿತ್ರರಂಗದ ಹಿರಿಯ ನಟಿ ದಿವಂಗತ ಲೀಲಾವತಿ ಪುತ್ರ, ನಟ ವಿನೋದ್ ರಾಜ್ ಆಸ್ಪತ್ರೆಗೆ ದಾಖಲಾಗಿದ್ದಾರೆ. ಕರುಳಿನ ಸಮಸ್ಯೆಯಿಂದ ಇವರು ನೆಲಮಂಗಲದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಮೂಲಗಳ ಪ್ರಕಾರ 11 ವರ್ಷಗಳ ಹಿಂದೆ ಹಾರ್ಟ್ ಆಪರೇಷನ್ಗೆ ಒಳಗಾಗಿ ಸ್ಟಂಟ್ ಹಾಕಿಸಿಕೊಂಡಿದ್ದರು. ಇದೀಗ ಅದೇ ಸ್ಟಂಟ್ನಿಂದ ಕರುಳಿನ ಸಮಸ್ಯೆ ಎದುರಾಗಿದೆ ಎನ್ನಲಾಗಿದೆ. ಸದ್ಯ ಆಪರೇಷನ್ಗೆ ಒಳಗಾಗಿದ್ದಾರೆ ವಿನೋದರಾಜ್. ಇನ್ನು ಎರಡು ದಿನಗಳ ಕಾಲ ಆಸ್ಪತ್ರೆಯಲ್ಲಿ ವಿಶ್ರಾಂತಿ ಪಡೆಯಲಿದ್ದಾರೆ ಎಂದು ಮೂಲಗಳು ತಿಳಿಸಿವೆ.ಇದನ್ನೂ ಓದಿ:ಕಲರ್ಸ್ನ ಕಲರ್‌ಫುಲ್ ಶೋ `ರಾಜ ರಾಣಿ -ರೀಲೋಡೆಡ್’   ಇಂದಿನಿoದ ಆರಂಭ      

Vinod raj - ವಿಜಯವಾಣಿ

 

59 ವರ್ಷದ ವಿನೋದ್ ರಾಜ್ ಹಲವು ವರ್ಷಗಳಿಂದ ನೆಲಮಂಗಲದಲ್ಲಿರುವ ತಮ್ಮ ತೋಟದ ಮನೆಯಲ್ಲಿ ವಾಸಿಸುತ್ತಿದ್ದರು. ಸಿನಿಮಾ ಕ್ಷೇತ್ರಕ್ಕೆ ಗುಡ್ ಬೈ ಹೇಳಿ ತಮ್ಮ ತೋಟ ಹಾಗೂ ಜನರ ಸೇವೆಯಲ್ಲಿ ತೊಡಗಿಸಿಕೊಂಡಿದ್ದರು. ಕೆಲವು ತಿಂಗಳ ಹಿಂದೆ ತಾಯಿ ಹಿರಿಯ ನಟಿ ಲೀಲಾವತಿ ಅಗಲಿದರು. ಆ ನೋವಿನಲ್ಲಿದ್ದ ವಿನೋರಾಜ್ ತಾಯಿಯ ಸಮಾಧಿಯನ್ನು ನಿರ್ಮಾಣ ಮಾಡುತ್ತಿದ್ದರು. ಇದೀಗ ಹೆಂಡತಿ ಮಗನ ಜತೆ ನೆಲಮಂಗಲದಲ್ಲಿ ವಾಸವಿದ್ದಾರೆ.ಇದನ್ನೂ ಓದಿ:ಪತ್ರಕರ್ತನಿಗಾಗಿ ಮ್ಯಾಂಗಿಫೆರಾ ಮೂಸಾ ನ್ಯೂಡಲ್ಸ್‌ ತಯಾರಿಸಲು ಹೊರಟ ಭಾಗ್ಯಾ ಯಶಸ್ವಿಯಾಗ್ತಾಳಾ?

ವಿನೋದ್ ರಾಜ್

ಇತ್ತೀಚೆಗೆ ವಿನೋದ್ ರಾಜ್ ಸಮಾಜಮುಖಿ ಕೆಲಸಗಳನ್ನು ಮಾಡಿ ಸುದ್ದಿಯಾಗಿದ್ದರು. ಸ್ಯಾಂಡಲ್ವುಡ್ ನಟ ವಿನೋದ್ ರಾಜ್ ಅವರು ಬೆಂಗಳೂರು ನಗರದ ನೆಲಮಂಗಲದ ಕರೆಕಲ್ ಕ್ರಾಸ್ನಿಂದ ಸೋಲದೇವನಹಳ್ಳಿವರೆಗೂ ರಸ್ತೆ ಗುಂಡಿಗಳನ್ನು ಮುಚ್ಚುವ ಕೆಲಸ ಮಾಡಿದ್ದರು ಸರ್ಕಾರದ ಯಾವುದೇ ಅನುದಾನಕ್ಕೆ ಕಾಯದೇ ವಿನೋದ್ ರಾಜ್ ತಾವೇ ಸ್ವತಃ ನಿಂತು ತಮ್ಮ ಸ್ವಂತ ಖರ್ಚಿನಲ್ಲಿ ರಸ್ತೆ ರಿಪೇರಿ ಕೆಲಸ ಮಾಡಿಸಿದ್ದರು.ಇದನ್ನೂ ಓದಿ:ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿವೆ ನಟಿ ಕಂಗನಾ ವಿಡಿಯೋಸ್​

ನೆಲಮಂಗಲದ ಕರೆಕಲ್ ಕ್ರಾಸ್ನಿಂದ ಸೋಲದೇವನಹಳ್ಳಿವರೆಗೂ ಗುಂಡಿ ಬಿದ್ದ ರಸ್ತೆ ಹಾಗೂ ಕೆಟ್ಟು ಹೋದ ರಸ್ತೆಗಳನ್ನು ಸರಿ ಪಡಿಸಿದ್ದರು. ಈ ಮೂಲಕ ಮಳೆಗಾಲ ಆರಂಭವಾಗುವ ಮೊದಲೇ ವಿನೋದ್ ರಾಜ್ ರಸ್ತೆಯನ್ನು ರಿಪೇರಿ ಮಾಡಿಸಿದ್ದರು.

Share this post:

Related Posts

To Subscribe to our News Letter.

Translate »