Sandalwood Leading OnlineMedia

ಸದ್ದು ಮಾಡುತ್ತಿದೆ `ಕಾಂತಾರ’ ಸಾಹಿತಿಯ ` ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ’ದ `ಪುಗ್ಸಟ್ಟೆ’ ಹಾಡು

 

Pugshatte Pugshatte Lyrical | Rajesh Dhruva | Shashank Sheshagiri | Pramod Maravante | ARC

ಕನ್ನಡದಲ್ಲಿ ಈಗಾಗಲೇ ತರಹವೇವಾರಿ ಶೀರ್ಷಿಕೆ ಇರುವ ಚಿತ್ರಗಳು ಬಂದಿವೆ. ಆ ಸಾಲಿಗೆ ಈಗ   ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ ಸಿನಿಮಾ ಕೂಡ ಸೇರಿದೆ. ಈಗಾಗಲೇ ಸಿನಿಮಾ  ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ. ಬಿಡುಗಡೆಗೂ ಮುನ್ನ ಚಿತ್ರದ ಹಾಡುಗಳು ಅದ್ಧೂರಿಯಾಗಿ ರಿಲೀಸ್ ಆಗಿವೆ. ಆಡಿಯೋ ರಿಲೀಸ್ ವೇಳೆ  ಅತಿಥಿಯಾಗಿ ಚಿನ್ನಾರಿ ಮುತ್ತ  ವಿಜಯ್ ರಾಘವೇಂದ್ರ ರವರು ಹಾಗೂ ಕರ್ನಾಟಕ ಚಲನಚಿತ್ರ ಅಕಾಡೆಮಿ ನೂತನ ಅಧ್ಯಕ್ಷರು ಹಾಗೂ ಕನ್ನಡ ಚಲನಚಿತ್ರದ ಹಿರಿಯ ಛಾಯಾಗ್ರಾಹಕ  ಅಶೋಕ್ ಕಶ್ಯಪ್ ಆಗಮಿಸಿ ಹಾಡು ರಿಲೀಸ್  ಮಾಡಿ ತಂಡಕ್ಕೆ ಶುಭ ಕೋರಿದರು. ಹಿರಿಯ ಛಾಯಾಗ್ರಾಹ ಅಶೋಕ್ ಕಶ್ಯಪ್ ಮಾತನಾಡಿ, ” ಮಲೆನಾಡಿನ ಸೌಂದರ್ಯಕ್ಕೆ ತಾನು ಬೆರಗಾಗಿ, ಅಲ್ಲೇ ಹಲವು ವರ್ಷಗಳ ಕಾಲ ಅಲ್ಲೇ ಇದ್ದು ಅಲ್ಲಿಯ ಭಾಷೆ – ಸಂಸ್ಕೃತಿಯ ಬಗ್ಗೆ ಮಾರು ಹೋಗಿದ್ದೆ, ಈಗ ಈ ಸಿನೆಮಾ ಮತ್ತೆ ತನ್ನನ್ನು ಅಲ್ಲಿಗೆ ಕರೆದುಕೊಂಡು ಹೋಗಿದೆ, ಒಬ್ಬ ಫೋಟೋಗ್ರಾಫರ್ ಜೀವನದ ಬಗ್ಗೆ ಇದುವರೆಗೆ ಬರದ  ಕಥೆ ಇಲ್ಲಿದೆ. ಒಂದೊಂದು ಫ್ರೇಮ್ ಕೂಡ ಅದ್ಭುತವಾಗಿ ಮೂಡಿ ಬಂದಿದೆ, ಚಿತ್ರಕ್ಕೆ ಗೆಲುವು ಸಿಗಲಿ ಎಂದು ಶುಭ ಹಾರೈಸಿದರು.

 

 `Vijayanand’ Movie Review : A story worth telling, a movie worth watching

ವಿಜಯ ರಾಘವೇಂದ್ರ ಮಾತನಾಡಿ, “ಊರು ಕಥೆಯ ಬೇರು, ಒಂದು ಊರಿನಲ್ಲಿ ಹಲವು ತರಹದ ಕಥೆ ಇರೋದು ಸಹಜ. ಅದು ಹೃದಯದಿಂದ ಹುಟ್ಟೋ ಕಥೆಯಾಗಿ ಹೊರಬರುತ್ತೆ, ಅಂತಹ ಕಥೆಗಳು ಸೋತಿರೋ ಉದಾರಹಣೆ ತುಂಬಾ ಕಡಿಮೆ, ಇಂತಹ ಸಿನಿಮಾವನ್ನು ಜನರು ಇಷ್ಟ ಪಡುತ್ತಾರೆ, ಈಗಿನ ಸಿನೆಮಾ ನೋಡೋ ಮಂದಿ ಇದನ್ನೇ ಎದುರು ನೋಡುತ್ತಿದ್ದಾರೆ, ಈ ತಂಡದ ಜೊತೆ ನಾನು ಕೆಲಸ ಮಾಡಲು ಎದುರು ನೋಡುತ್ತಿದ್ದೇನೆ, ನಾನೊಬ್ಬ ಕಲಾವಿದನಾಗಿ ಈ ಸಿನೆಮಾ ನೋಡಿ ಅಂತ ಹೇಳಲ್ಲ ಒಬ್ಬ ಪ್ರೇಕ್ಷಕನಾಗಿ ಈ ಸಿನಿಮಾ ನಾನು ನೋಡ್ತೀನಿ ನೀವು ನೋಡಿ ” ಎಂದರು.ನಿರ್ಮಾಪಕ ವೆಂಕಟೇಶ್ವರ ರಾವ್, ಬಳ್ಳಾರಿ ಮೊದಲ ಸಲ ಸೃಜನ ಪ್ರೊಡಕ್ಷನ್ ಅಡಿ ಸಿನಿಮಾ ನಿರ್ಮಿಸಿದ್ದಾರೆ. ಅವರು, “ಹಲವಾರು ಜನ ಸಿನಿಮಾ ಮಾಡಲು ಹೊರಟಾಗ  ಬೇಡ ಎಂದು ತಲೆಕೆಡಿಸಲು ಪ್ರಯತ್ನ ಪಟ್ಟರು., ಆದರೆ ಈ ಸಿನೆಮಾ ಎಲ್ಲರ ಮನಸ್ಸನ್ನು ಗೆಲ್ಲೋದರಲ್ಲಿ ಯಾವುದೇ ಸಂಶಯ ಇಲ್ಲ,ಈ ಸಿನಿಮಾ ಮಾಡಿದಕ್ಕೆ ನನಗೆ ತೃಪ್ತಿ ಇದೆ ಎಂದು ತಿಳಿಸಿದರು.

 

 

 ಸೆಟ್ಟೇರಿತು ವಿಕ್ರಮ್ ರವಿಚಂದ್ರನ್ ಎರಡನೇ ಸಿನಿಮಾ – ಗ್ಯಾಂಗ್ ಸ್ಟಾರ್ ಅವತಾರ ತಾಳಲಿದ್ದಾರೆ ಕ್ರೇಜಿ ಸ್ಟಾರ್ ಪುತ್ರ

 

ಈ ವೇಳೆ ಚಿತ್ರತಂಡ ಚಿತ್ರೀಕರಣದ ಅನುಭವ ಹಂಚಿಕೊಂಡಿತು. ನಿರ್ದೇಶಕ ರಾಜೇಶ್ ಧ್ರುವ ಮಾತನಾಡಿ, “23 ದಿನ ಮಳೆಯಲ್ಲೇ ಈ ಸಿನೆಮಾ ಚಿತ್ರೀಕರಣ ಮಾಡಲಾಗಿದ್ದು, ಕೇವಲ 5 ತಿಂಗಳಲ್ಲಿ ತೆರೆಗೆ ತರಲು ಸಜ್ಜು ಮಾಡಿದ್ದೇವೆ, ಯಾವುದೇ ಸಿನಿಮಾ ಇಟ್ಟುಕೊಂಡು ಹಳೆಯದಾದಷ್ಟು ಅದರ ಸಾರ ಹೊರಟು ಹೋಗುತ್ತೆ, ನನ್ನ ಊರಿನಲ್ಲಿ ಅನುಭವಕ್ಕೆ ಬಂದ ಹಲವು ಅನುಭವನ್ನು, ಭಾಷೆಯನ್ನು ಈ ಸಿನೆಮಾದಲ್ಲಿ ಬಳಸಿಕೊಂಡು ಎಲ್ಲ ಕಲಾವಿದರಿಗೆ 30 ದಿನಗಳ ಕಾಲ ಅಲ್ಲಿಯ ಭಾಷೆಯ ಅರಿವು ಮಾಡಿಸಿ ಪಾತ್ರಕ್ಕೆ ತಕ್ಕಂಗೆ ತಯಾರು ಮಾಡಲಾಗಿದ್ದು, ಎಲ್ಲ ಕಲಾವಿದರು ಹೊಸಬರೇ. ಆದರೆ ಎಲ್ಲಿಯೂ ಕೂಡ ನೋಡುಗರಿಗೆ ಅದರ ಅರಿವೇ ಆಗದಂತೆ ನೈಜವಾಗಿ ಅಭಿನಯ ಮಾಡಿಸಲಾಗಿದೆ ” ಎಂದರು. ಸಿನಿಮಾ ಕಲಾವಿದರು ಹಾಗೂ ತಂತ್ರಜ್ಞರು  ಈ ವೇಳೆ  ಅನುಭವನ್ನು ಹಂಚಿಕೊಂಡರು, ಈ ಸಿನೆಮಾ ಜನವರಿಯಲ್ಲಿ ಬಿಡುಗಡೆಯಾಗಲಿದೆ.

 

 

 ಸೀತಾ ಸರ್ಕಲ್ ಶ್ರೀ ಕೃಷ್ಣನ್ ಮನೆ’ ಸಿನಿಮಾ ಫಸ್ಟ್ ಲುಕ್ ರಿಲೀಸ್- ಪೋಸ್ಟ್ ಪ್ರೊಡಕ್ಷನ್ ಕೊನೆಯ ಹಂತದಲ್ಲಿ ಸಿನಿಮಾ

 

ಇತ್ತೀಚಿನ ದಿನಗಳಲ್ಲಿ ಕನ್ನಡ ಚಿತ್ರರಂಗ ಪ್ರಯೋಗತ್ಮಕ ಚಿತ್ರದ ಕಡೆ ಮುಖ ಮಾಡಿದೆ, ಅದರಲ್ಲಿ ಹಳ್ಳಿ ಸೊಗಡಿನ ಚಿತ್ರಗಳ ಸಂಖ್ಯೆ ಜಾಸ್ತಿ, ಆ ಸಾಲಿಗ “ಶ್ರೀ ಬಾಲಾಜಿ ಫೋಟೋ ಸ್ಟುಡಿಯೋ” ಚಿತ್ರ ಕೂಡ ಸೇರಿದೆ. ಇಡೀ ಚಿತ್ರ ಶಿರಸಿ, ಯಲ್ಲಾಪುರ, ಹೊನ್ನಾವರ ಸುತ್ತ ಮುತ್ತ ಚಿತ್ರೀಕರಣ ವಾಗಿದೆ. ಅಲ್ಲಿಯ ಸ್ಥಳೀಯ  ಪ್ರತಿಭೆಗಳು ಕಾಣಿಸಿಕೊಂಡಿವೆ. ಈ ಚಿತ್ರದ ವಿಶೇಷತೆ ಅಂದರೆ, ಬಳಸಿರುವ ಉತ್ತರ ಕನ್ನಡ ಭಾಷೆ.

Share this post:

Translate »