ಭಾರತೀಯ ಚಿತ್ರರಂಗದ ದಿಕ್ಕು ಬದಲಿಸಿದ ಸಿನಿಮಾ ‘ಬಾಹುಬಲಿ’. ಒಂದು ಕಾಲ್ಪನಿಕ ಕಥೆಯನ್ನು ನಿರ್ದೇಶಕ ರಾಜಮೌಳಿ ಎರಡು ಭಾಗಗಳಾಗಿ ಪ್ರೇಕ್ಷಕರ ಮುಂದೆ ತಂದು ಸಕ್ಸಸ್ ಕಂಡಿದ್ದರು. ಪ್ರಭಾಸ್, ಋಆನಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ, ರಮ್ಯಾಕೃಷ್ಣ, ಸತ್ಯರಾಜ್, ತಮನ್ನಾ ಅದ್ಭುತವಾಗಿ ನಟಿಸಿ ಪ್ರೇಕ್ಷಕರ ಮನಗೆದ್ದರು. ನೂರಾರು ಕೋಟಿ ಕಲೆಕ್ಷನ್ ಮಾಡಿ ಬಾಕ್ಸಾಫೀಸ್ ಶೇಕ್ ಮಾಡಿತ್ತು. ಆದರೆ ಈ ಸಿನಿಮಾ ಮಾಡೋಕೆ ನಿರ್ಮಾಪಕರು ಬರೋಬ್ಬರಿ 400 ಕೋಟಿ ರೂ. ಸಾಲ ಮಾಡಿದ್ದರು.
ಜೂನ್.9ಕ್ಕೆ ರಾಜ್ಯಾದ್ಯಂತ ಚಿತ್ರಮಂದಿರಗಳಲ್ಲಿ ‘ಮತ್ತೆ ಮದುವೆ’!
“ಇಂಡಿಯಾ ಟುಡೇ ಕಾನ್ಕ್ಲೇವ್ ಸೌತ್ 2023” ಮಾಧ್ಯಮ ಸಂವಾದದಲ್ಲಿ ಮಾತನಾಡಿರುವ ನಟ ರಾಣಾ, ‘ಬಾಹುಬಲಿ’ ಚಿತ್ರಕ್ಕಾಗಿ ಸಾಲ ಮಾಡಿದ್ದ ಅಚ್ಚರಿ ಸಂಗತಿಯನ್ನು ಬಿಚ್ಚಿಟ್ಟಿದ್ದಾರೆ. ಸಂವಾದ ಕಾರ್ಯಕ್ರಮದಲ್ಲಿ ರಾಣಾ ಸಿನಿಮಾ ನಿರ್ಮಾಣಕ್ಕಾಗಿ ನಿರ್ಮಾಪಕರು ಮಾಡುವ ಸಾಲ ಹಾಗೂ ಅದಕ್ಕಾಗಿ ಕಟ್ಟುವ ಬಡ್ಡಿಯ ಬಗ್ಗೆ ಮಾತನಾಡಿದ್ದಾರೆ. “ಸಿನಿಮಾ ಮಾಡುವುದಕ್ಕೆ ನಿರ್ಮಾಪಕರು ಹೆಚ್ಚಿನ ಬಡ್ಡಿಗೆ ಸಾಲ ತರುತ್ತಾರೆ” ಎಂದು ಹೇಳಿದ್ದಾರೆ.
“ಯಾವ ಮೋಹನ ಮುರಳಿ ಕರೆಯಿತು” ಕನ್ನಡದಲ್ಲಿ ಬರುತ್ತಿದೆ ಮತ್ತೊಂದು ಶ್ವಾನದ ಪ್ರೀತಿ ಕಥೆ
“ನಾಲ್ಕೈದು ವರ್ಷಗಳ ಹಿಂದೆ ದೊಡ್ಡ ಮೊತ್ತದಲ್ಲಿ ಹಣ ಬೇಕೆಂದರೆ ಎರಡೇ ಮಾರ್ಗ ಇದ್ದಿದ್ದು. ಒಂದು ಆಸ್ತಿಯನ್ನು ಅಡ ಇಟ್ಟು ಸಾಲ ತರಬೇಕು ಅಥವಾ ಹೆಚ್ಚು ಬಡ್ಡಿಗೆ ಸಾಲ ತೆಗೆದುಕೊಳ್ಳಬೇಕಿತ್ತು. ಬಾಹುಬಲಿ ಚಿತ್ರಕ್ಕಾಗಿ ನಾವು ಸುಮಾರು ರೂ. 400 ಕೋಟಿ ಸಾಲ ತೆಗೆದುಕೊಂಡಿದ್ದೆವು. ಇದಕ್ಕಾಗಿ 24 ರಿಂದ 28 ಪರ್ಸೆಂಟ್ ಬಡ್ಡಿ ಪಾವತಿಸಬೇಕಾಯಿತು. ವಾಸ್ತವವಾಗಿ ಇದು ತುಂಬಾ ಹೆಚ್ಚು. ಆ ಸಮಯದಲ್ಲಿ ನಿರ್ಮಾಪಕರು ತುಂಬಾ ತೊಂದರೆ ಅನುಭವಿಸಿದರು.” “ಬಾಹುಬಲಿ ಸಿನಿಮಾ ವರ್ಕ್ ಔಟ್ ಆಯಿತು ಹಾಗಾಗಿ ಆ ಹಣವನ್ನು ಮರಳಿ ಕೊಡಲು ಸಾಧ್ಯವಾಯಿತು. ಒಂದು ವೇಳೆ ಸೋತಿದ್ದರೆ ಏನು ಕಥೆ ಅಂತ ಊಹಿಸಿಕೊಳ್ಳುವುದಕ್ಕೆ ಭಯವಾಗುತ್ತಿತ್ತು. ಆ ಸಮಯದಲ್ಲಿ ನಮಗೆ ಇದ್ದಿದ್ದು ಒಂದೇ ಒಂದು ನಂಬಿಕೆ ಅದು ರಾಜಮೌಳಿ. ಆತನ ಮೇಲಿನ ನಂಬಿಕೆಯೊಂದಿಗೆ ನಾವೆಲ್ಲರೂ ಮುಂದಡಿ ಇಟ್ಟಿದ್ದೆವು. ಸದ್ಯ ರಾಣಾ ಹೇಳಿಕೆಯ ವಿಡಿಯೋ ಫುಲ್ ವೈರಲ್ ಆಗ್ತಿದೆ.
*ಟ್ರೇಲರ್ ಮೂಲಕವೇ ಕಿಕ್ ಕೊಟ್ಟ ‘ಬೆಂಗಳೂರು ಬಾಯ್ಸ್’…ಮಿಸ್ ಮಾಡದೇ ನೋಡಿ 4 ಐಕಾನಿಕ್ಸ್ ಕ್ಯಾರೆಕ್ಟರ್ ಝಲಕ್*
“ಮೂರು ನಾಲ್ಕು ವರ್ಷಗಳ ಹಿಂದೆ ಸಿನಿಮಾಗಳಿಗೆ ಹಣ ಎಲ್ಲಿಂದ ಬರುತ್ತಿತ್ತು? ಆ ಸಿನಿಮಾ ನಿರ್ಮಾಣ ಮಾಡುವವರು ತಮ್ಮ ಮನೆಯನ್ನೋ, ಆಸ್ತಿಯನ್ನೋ ಬ್ಯಾಂಕಿನಲ್ಲಿ ಅಡ ಇಟ್ಟು ಹಣ ತರುತ್ತಿದ್ದರು. ಆ ನಂತರ ಬಿಡಿಸಿಕೊಳ್ಳುತ್ತಿದ್ದರು. ನಾವು ಕೂಡ 24 ರಿಂದ 28% ಬಡ್ಡಿ ಕಟ್ಟಿದ್ದೇವೆ. ಬಾಹುಬಲಿ ರೀತಿಯ ಚಿತ್ರಕ್ಕೂ ಸಹ 300 ಕೋಟಿ ರೂ. ಇಂದ 400 ಕೋಟಿ ರೂಪಾಯಿಯನ್ನು ಆ ಬಡ್ಡಿ ದರಕ್ಕೆ ತಂದಿದ್ದರು” ಎಂದು ರಾಣಾ ಬಹಿರಂಗಪಡಿಸಿದ್ದಾರೆ. ‘ಬಾಹುಬಲಿ’ ಪಾರ್ಟ್- 1 ರಿಲೀಸ್ ಆದ ನಂತರ ನಿರ್ಮಾಪಕರು 24% ಬಡ್ಡಿ ದರಕ್ಕೆ 5 ವರ್ಷಗಳ ಮಟ್ಟಿಗೆ ರೂ.180 ಕೋಟಿ ಸಾಲ ತೆಗೆದುಕೊಂಡರು. ಇದಕ್ಕಿಂತ ಎರಡರಷ್ಟು ಖರ್ಚು ಮಾಡಿದ್ದೆವು. ನಾವು ಸಿನಿಮಾ ಮಾಡಲು ಮಾಡಿದ ಸಾಲ, ಬಿದ್ದ ಕಷ್ಟ ಅಷ್ಟಿಷ್ಟಲ್ಲ. ಇನ್ನು ಆ ನಂತರ ಬಾಹುಬಲಿ ಪಾರ್ಟ್- 2 ಕೂಡ ಮಾಡಿದೆವು. ಒಂದು ವೇಳೆ ಆ ಸಿನಿಮಾ ಗೆಲ್ಲದೇ ಹೋಗಿದ್ದರೆ ಏನಾಗುತ್ತಿತ್ತೋ ಗೊತ್ತಿಲ್ಲ” ಎಂದು ರಾಣಾ ತಿಳಿಸಿದ್ದಾರೆ. ಈ ಹಿಂದೆ ರಾಜಮೌಳಿ ಕೂಡ ‘ಬಾಹುಬಲಿ’ ಚಿತ್ರಕ್ಕೆ ಎದುರಾಗಿದ್ದ ಆರ್ಥಿಕ ಕಷ್ಟಗಳ ಬಗ್ಗೆ ಮಾತನಾಡಿದ್ದರು. “ಒಂದು ವೇಳೆ ಆ ಸಿನಿಮಾ ಗೆಲ್ಲದೇ ಹೋಗಿದ್ದರೆ ನಮ್ಮನ್ನು ನಂಬಿ ಜೊತೆಗೆ ನಿಂತ ನಿರ್ಮಾಪಕರು ಮತ್ತೆ ಎಂದು ಚೇತರಿಸಿಕೊಳ್ಳಲು ಸಾಧ್ಯವಾಗದಂತಹ ಸ್ಥಿತಿ ತಲುಪುತ್ತಿದ್ದರು” ಎಂದಿದ್ದರು. ಒಟ್ನಲ್ಲಿ ಇಡೀ ತಂಡ ಶ್ರಮಕ್ಕೆ ಕಷ್ಟಕ್ಕೆ ಒಳ್ಳೆ ಪ್ರತಿಫಲ ಸಿಕ್ತು. ಈ ಸಿನಿಮಾ ಇಂತಹ ಮತ್ತಷ್ಟು ಬಹುಕೋಟಿ ವೆಚ್ಚದ ಪ್ಯಾನ್ ಇಂಡಿಯಾ ಸಿನಿಮಾಗಳ ನಿರ್ಮಾಣಕ್ಕೆ ಪ್ರೇರಣೆ ಆಯಿತು.