Sandalwood Leading OnlineMedia

Bagheera Review: ಸಾಮಾನ್ಯನೊಬ್ಬನ ಅಸಾಮಾನ್ಯ ಕಥೆ!

ದೀಪಾವಳಿ ಹಬ್ಬದ ಪ್ರಯುಕ್ತ ‘ಬಘೀರ’ ಸಿನಿಮಾ ಅದ್ದೂರಿಯಾಗಿ ತೆರೆಕಂಡಿದೆ. ನಟ ಶ್ರೀಮುರಳಿ ಅವರು ಈ ಸಿನಿಮಾದಲ್ಲಿ ಸೂಪರ್ ಹೀರೋ ಆಗಿ ಮಿಂಚಿದ್ದಾರೆ. ‘ಬಘೀರ’ ಮುರಳಿಯವರ ವೃತ್ತಿಜೀವನದ ಬೆಸ್ಟ್ ಸಿನಿಮಾವಾಗಿ ಮೂಡಿ ಬಂದಿದ್ದು, ವಿಮರ್ಶೆ ಇಲ್ಲಿದೆ. ಲವ್‌ಸ್ಟೋರಿ ಮತ್ತು ಆ್ಯಕ್ಷನ್ ಎರಡೂ ಬಗೆಯ ಸಿನಿಮಾ ಪ್ರೇಮಿಗಳಿಗೆ ಇಷ್ಟವಾಗುವ ಚಿತ್ರ ‘ಬಘೀರ’. ಮುರಳಿಯವರಿಗೆ ಅತ್ಯಂತ ಸೂಕ್ತವಾದ ಕಥೆ ‘ಬಘೀರ’ದ್ದು. ಪ್ರಶಾಂತ್ ನೀಲ್ ಅವರ ‘ಬಘೀರ’ ಕಥೆಯಲ್ಲಿ ಪ್ರಶಾಂತತೆ ಮತ್ತು ಅಶಾಂತತೆ ಎರಡೂ ಇದೆ. ಆ ಕಥೆಗೆ ನಿರ್ದೇಶಕ ಡಾ.ಸೂರಿ ಸೂಪರ್ ರೂಪ ನೀಡಿದ್ದಾರೆ.

READ MORE ; ಬಿಡುಗಡೆಗೂ ಮುನ್ನ ಓಟಿಟಿಯಲ್ಲೇ ಸದ್ದು ಮಾಡುತ್ತಿದೆ “ಮೂರು ಕಾಸಿನ ಕುದುರೆ”

ಕನ್ನಡದಲ್ಲಿ ಸೂಪರ್ ಹೀರೋ ರೀತಿಯ ಸಿನಿಮಾಗಳ ಸಂಖ್ಯೆ ಕಡಿಮೆ. ‘ಬಘೀರ’ ಸಿನಿಮಾದಲ್ಲಿ ಸೂಪರ್ ಹೀರೋ ಕಥೆ ಇದೆ. ‘ಬಘೀರ’ಕೆಲವು ಸಾಧನಗಳನ್ನು ಬಳಸಿಕೊಂಡು ಜನರನ್ನು ಕಾಪಾಡುವ ಸೂಪರ್ ಹೀರೋ. ಈತ ಜನರ ನಡುವೆ ಇರುವ ವ್ಯಕ್ತಿ. ಆತನಿಗೆ ಶಕ್ತಿಗಿಂತಲೂ ಜಾಸ್ತಿ ಇತಿ-ಮಿತಿಗಳು ಇರುತ್ತವೆ. ಅಂತಹ ಪಾತ್ರವನ್ನು ಇಟ್ಟುಕೊಂಡು ಸೂಪರ್ ಹೀರೋ ಕಥೆ ಹೆಣೆಯುವುದು ಸವಾಲಿನ ಕೆಲಸ. ಅದನ್ನು ಪ್ರಶಾಂತ್ ನೀಲ್ ಮಾಡಿದ್ದಾರೆ. ಶ್ರೀಮುರಳಿ ಅವರು ತಮ್ಮ ಮ್ಯಾನರಿಸಂ ಮೂಲಕ ಹೊಸದಾಗಿ ಜನರನ್ನು ರಂಜಿಸಲು ಪ್ರಯತ್ನಿಸಿದ್ದಾರೆ. ಅನಗತ್ಯವಾದ ಬಿಲ್ಡಪ್‌ಗಳಿಲ್ಲಿದೆ ನೇರವಾಗಿ ನಿರ್ದೇಶಕರು ಕಥೆ ಹೇಳಿದ್ದರಿಂದ ಚಿತ್ರ ಹೆಚ್ಚು ಆಪ್ತವಾಗುತ್ತದೆ. ಯಾವುದೇ ಉದ್ದುದ್ದ ಡೈಲಾಗ್‌ಗಳ ಬದಲು ತಮ್ಮ ಕೆಲಸದ ಮೂಲಕ ಉತ್ತರ ಶ್ರೀಮುರಳಿ ನೀಡುತ್ತಾರೆ. ಪೊಲೀಸ್ ಅಧಿಕಾರಿಯಾಗಿ, ಸೂಪರ್ ಹೀರೋ ಆಗಿ ಎರಡು ಪಾತ್ರದಲ್ಲೂ ಮುರಳಿ ಸೂಪರ್.

READ MORE ;  ಜೈ ಹನುಮಾನ್’ಗೆ ರಿಷಬ್ ಶೆಟ್ಟಿ ಜೈಕಾರ…ಹನುಮಾನ್ ಪಾತ್ರದಲ್ಲಿ ಕಾಂತಾರ ಸ್ಟಾರ್

ಟ್ರೇಲರ್‌ನಲ್ಲಿ ರುಕ್ಮಿಣಿ ವಸಂತ್ ಎಷ್ಟು ಕಡಿಮೆ ಅವಧಿಯಲ್ಲಿ ಕಾಣಿಸಿಕೊಳ್ಳುತ್ತಾರೋ ಅದೇ ರೀತಿಯಲ್ಲಿ  ಸಿನಿಮಾದಲ್ಲಿ ಅವರಿಗೆ ಹೆಚ್ಚಿನ ಸ್ಕ್ರೀನ್ ಸ್ಪೇಸ್ ಸಿಕ್ಕಿಲ್ಲ. ಗರುಡ ರಾಮ್ ಅವರು ಸೂಪರ್ ಹೀರೋಗೆ ಎದುರಾಗಿ ನಿಲ್ಲುವ ರಾಕ್ಷಸನಾಗಿ ಮುರಳಿಗೆ ಶಿಳ್ಳೆ ಗಿಟ್ಟುವಂತೆ ಮಾಡುತ್ತಾರೆ. ಪ್ರಕಾಶ್ ರಾಜ್, ರಂಗಾಯಣ ರಘು, ಅಚ್ಯುತ್ ಕುಮಾರ್, ಸುಧಾರಾಣಿ ಎಲ್ಲರೂ ಸೂರಿ ಗರಡಿಯಲ್ಲಿ ಸೂಪರ್ ಅಭಿನಯ ನೀಡಿದ್ದಾರೆ.

READ MORE ;  ದರ್ಶನ್ಗೆ ಜಾಮೀನು ; ಶುರುವಾಗುತ್ತಾ ಡೆವಿಲ್ ಚಿತ್ರೀಕರಣ!?

ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣ ಹಾಗೂ ಅಜನೀಶ್ ಬಿ. ಲೋಕನಾಥ್ ಅವರ ಸಂಗೀತ ಸೂರಿಯವರ ‘ಬಘೀರ’ದ ಆಶಯವನ್ನು ಎತ್ತಿ ಹಿಡಿದಿದೆ. ನಿರ್ದೇಶನದ ಜೊತೆಗೆ ಡೈಲಾಗ್‌ಗಳಲ್ಲೂ ಸೂರಿ ತಮ್ಮ ಕೈಚಳಕ ಮೆರೆದಿದ್ದಾರೆ. ಈಗಾಗಲೇ ಹಲವಾರು ಸೂಪರ್ ಹೀರೋ ಸಿನಿಮಾಗಳನ್ನು ನೋಡಿದ ಪ್ರೇಕ್ಷಕರಿಗೆ ‘ಬಘೀರ’ ಸಿನಿಮಾದ ಕಥೆ ಡಿಫೆರೆಂಟ್ ಆಗಿರುವುದರಿಂದ ಖುಷಿ ನೀಡಬಲ್ಲುದು. ಇಡೀ ಕಥೆ ಮಂಗಳೂರಿನಲ್ಲಿ ನಡೆದರೂ ಸಂಭಾಷಣೆಯ ಶೈಲಿಯಲ್ಲಿ ನೇಟಿವಿಟಿ ತುರುಕಿಸದೆ ಎಲ್ಲಾ ಕನ್ನಡಿಗರಿಗೂ ಸುಲಭವಾಗಿ ಅರ್ಥವಾಗುವ ಕನ್ನಡದಲ್ಲಿ ಸಿನಿಮಾವನ್ನು ಪ್ರೇಕ್ಷಕನಿಗೆ ದಾಟಿಸಿದ ಸೂರಿಯ ಜಾಣ್ಮೆಗೆ ಮೆಚ್ಚಬೇಕು. ಸಿನಿಮಾದ ಮೇಕಿಂಗ್ `ಕಿಂಗ್’ ಆಗಿರುವುದರಿಂದ `ಬಘೀರ’ ಕನ್ನಡದ ಮಟ್ಟಿಗೆ ಒಂದು ಅಪರೂಪದ ಸಿನಿಮಾ ಎಂದರೆ ತಪ್ಪಾಗದು. ಸೂರಿಯವರ ಸೂಪರ್ ಡೈರೆಕ್ಷನ್, ಮುರಳಿಯವರ ಸೂಪರ್ ಆ್ಯಕ್ಷನ್ ಬೆಳ್ಳಿತೆರೆಯ ಮೇಲೆ ಇಂದೇ ಕಣ್ತುಂಬಿಸಿಕೊಳ್ಳಿ.

 

Share this post:

Related Posts

To Subscribe to our News Letter.

Translate »