Sandalwood Leading OnlineMedia

ಪಾರ್ಟಿ ನಂಟು, ಪ್ಯಾಮಿಲಿ ಗಗ್ಗಂಟು!

 

ಸಂತೋಷನಿಗೆ ಕಲ್ಯಾಣ ಪ್ರಾಪ್ತಿಯಾಗಿ ವರುಷಗಳು ಉರುಳಿದರೂ, ಫ್ಯಾಮಿಲೀ ಲೈಪ್‌ನಲ್ಲಿ ಫುಲ್ ಅಸೋಂತಷವೇ ಮನೆ ಮಾಡಿರುತ್ತದೆ. ಮನೆಯವರು ಇಷ್ಟಪಟ್ಟು ಮಾಡಿರುವ ಮದುವೆ, ಹೆಂಡತಿಯ ಕಟ್ಟು ಪಾಡುಗಳಿಗೆ ಗಂಟು ಬಿದ್ದು ಬದುಕುತ್ತಿರುವ ಸಂತೋಷನ ಪಾಡು, ಒಂದು ರೀತಿಯಲ್ಲಿ ತ್ರಿಶಂಕು ಸ್ಥಿತಿ. ಇಂಥ ಸಂತೋಷನ ಜೀವನದಲ್ಲಿ, ಸ್ನೇಹಿತನೊಬ್ಬನ `ಬ್ಯಾಚುಲರ್ ಪಾರ್ಟಿಗೆ ಬರುವ ಆಹ್ವಾನ ಆತನ ಜೀವನದ ದಿಕ್ಕನ್ನೇ ಬದಲಾಯಿಸುತ್ತದೆ. ನೋಡು ನೋಡುತ್ತಿದ್ದಂತೆ `ಬ್ಯಾಚುಲರ್ ಪಾರ್ಟಿಗೆ ದೊಡ್ಡ ಸ್ನೇಹಿತರ ಬಳಗವೇ ಬಂದು ಸೇರಿಕೊಳ್ಳುತ್ತದೆ. ಬೆಂಗಳೂರಿನಲ್ಲಿ ಶುರುವಾಗುವ `ಬ್ಯಾಚುಲರ್ ಪಾರ್ಟಿಬ್ಯಾಂಕಾಕ್‌ಗೆ ಬಂದು ನಿಲ್ಲುವ ಸೋಜಿಗವನ್ನು ಪ್ರೇಕ್ಷಕ ಅಚ್ಚರಿಯಲ್ಲಿ ನೋಡುವಂತೆ ಮಾಡಿರುವ ನಿರ್ದೇಶಕರ ಜಾಣ್ಮೆ ಮೆಚ್ಚ ಬೇಕಾಗಿದ್ದೆ.

READ MORE Sugar Factory Movie Review: ನಗುವಿನ ಕಡಲಲ್ಲಿ ರೋಚಕ ಒಲವಿನ ಪಯಣ

`ಬ್ಯಾಚುಲರ್ ಪಾರ್ಟಿಒಂದು ಸಂಪೂರ್ಣ ಹಾಸ್ಯಮಯ ಚಿತ್ರವಾದರೂ, ಇಂದಿನ ಕೌಟುಂಬಿಕ ಜೀವನ, ಯಾಂತ್ರಿಕ ಬದುಕು, ಸಾಮಾಜಿಕ ಕಟ್ಟುಪಾಡುಗಳ ಸಂಕೀರ್ಣತೆಯನ್ನು ಚಿತ್ರದಲ್ಲಿ ಪರಿಣಾಮಕಾರಿಯಾಗಿ ಕಟ್ಟಿಕೊಡಲಾಗಿದೆ. ಸಿನಿಮಾದ ಕಥೆ, ಅಲ್ಲಲ್ಲಿ ನಡೆಯುವ ವಿಚಿತ್ರ ಘಟನೆಗಳು, ಭಾವನಾತ್ಮಕ ದೃಶ್ಯಗಳು, ಕಚಗುಳಿಯಿಡುವ ಸಂಭಾಷಣೆ, ನಟರೆಲ್ಲರ ಅದ್ಭುತ ನಟನೆ `ಬ್ಯಾಚುಲರ್ ಪಾರ್ಟಿಯನ್ನು ಆಪ್ತವಾಗಿಸಿದೆ.

READ MORE Garadi Movie Review : ಮೋಡಿ ಮಾಡದ ಗರಡಿ : ಭಟ್ರು ಎಡವಿದ್ದೆಲ್ಲಿ?

ಮೊದಲರ್ಧ ವೇಗವಾಗಿ, ಅಚ್ಚುಕಟ್ಟಾಗಿ ಸಾಗಿ ಮಧ್ಯಂತರದ ವರೆಗೆ ಕರೆದುಕೊಂಡು ಬರುವ ಚಿತ್ರಕಥೆ, ದ್ವಿತೀಯಾರ್ಧದಲ್ಲಿ ತನ್ನ track ಬದಲಿಸಿ ಇನ್ನಷ್ಟು ಇಂಟ್ರೆಸ್ಟಿAಗ್‌ನಿAದ ನೋಡುವಂತೆ ಮಾಡುತ್ತದೆ. ಎಲ್ಲಿಯೋ ಬೋರ್ ಹೊಡೆಸದ `ಪಾರ್ಟಿ’, ಯುವ ಪೀಳಿಗೆಗಂತೂ ಸಾಕಷ್ಟು `ಕಿಕ್ಕೊಡುತ್ತದೆ. ನಟರಾದ ದಿಗಂತ್, ಲೂಸ್‌ಮಾದ ಯೋಗಿ, ಅಚ್ಯುತ್ ಕುಮಾರ್ ಚಿತ್ರದ ತುಂಬಾ ಆವರಿಸಿಕೊಂಡು `ಪಾರ್ಟಿಯ ಮಜಾವನ್ನು ಹೆಚ್ಚಿಸಿದ್ದಾರೆ. ಈ ಮೂರೂ ಪಾತ್ರಗಳ ಮೂಲಕ ಪ್ರೀತಿಯ ಮೂರು ಆಯಾಮಗಳನ್ನು ಸಮರ್ಥವಾಗಿ ಕಟ್ಟಿಕೊಟ್ಟಿರುವ ನಿರ್ದೇಶಕ ಅಭಿಶೇಕ್ ಮೊದಲ ಚಿತ್ರದಲ್ಲೇ ಭರವಸೆ ಮೂಡಿಸಿದ್ದಾರೆ.

READ MORE Baanadariyalli Review: ದಾರಿ ತಪ್ಪಿದ ಬಾನ`ದಾರಿ’, ಪ್ರೇಕ್ಷಕನಿಗಿದು ದುಬಾರಿ!

ಇನ್ನುಳಿದಂತೆ ಅರವಿಂದ್ ಎಸ್ ಕಶ್ಯಪ್ ಛಾಯಾಗ್ರಹಣ, ಅಭಿಶೇಕ್ ಸಂಕಲನ, ಅರ್ಜುನ್ ರಾಮು ಸಂಗೀತ.. ಹೀಗೆ ಎಲ್ಲಾ ವಿಭಾಗಳಲ್ಲೂ ಚಿತ್ರ ಸೈ ಅನ್ನಿಸಿಕೊಂಡಿದೆ. ಯಾಂತ್ರಿಕ ಜೀವನದಲ್ಲಿ ಕಾಲಿಗೆ ಚಕ್ರ ಕಟ್ಟಿಕೊಂಡು ಓಡುತ್ತಿರುವವರು ಸ್ವಲ್ಪ ಬ್ರೇಕ್ ತಂಗೊAಡು `ಬ್ಯಾಚುಲರ್ ಪಾರ್ಟಿಸೇರಿಕೊಂಡು ರಿಲ್ಯಾಕ್ಸ್ ಆಗಬಹುದು. ಇನ್ನು, ಇಂಗ್ಲೀಷ್‌ನ `ದಿ ಹ್ಯಾಂಗ್ ಓವರ್ನಂತಹ ಜಾನರ್‌ನ ಚಿತ್ರವನ್ನು ಇಷ್ಟ ಪಡುವವರು ಖಂಡಿತಾ `ಬ್ಯಾಚುಲರ್ ಪಾರ್ಟಿಯನ್ನು ಮಿಸ್ ಮಾಡದೇ ನೋಡಿ.

 

Share this post:

Translate »