Left Ad
ಬಚ್ಚನ್ ದೀಪಾವಳಿ ಪೂಜೆಗೆ ಗೈರಾದ ಐಶ್ವರ್ಯಾ: ಕೌಟುಂಬಿಕ ವಿರಸವೇ ಕಾರಣ? - Chittara news
# Tags

ಬಚ್ಚನ್ ದೀಪಾವಳಿ ಪೂಜೆಗೆ ಗೈರಾದ ಐಶ್ವರ್ಯಾ: ಕೌಟುಂಬಿಕ ವಿರಸವೇ ಕಾರಣ?

ಐಶ್ವರ್ಯಾ ರೈ ಬಚ್ಚನ್ ಮತ್ತು ಅಭಿಷೇಕ್ ಬಚ್ಚನ್ ದಾಂಪತ್ಯದಲ್ಲಿ ಬಿರುಕು ಮೂಡಿದೆ ಎಂಬಿತ್ಯಾದಿ ಸುದ್ದಿಗಳ ಬೆನ್ನಲ್ಲೇ ಬಚ್ಚನ್ ಕುಟುಂಬದ ದೀಪಾವಳಿ ಪೂಜೆಗೆ ಐಶ್ವರ್ಯಾ ಗೈರಾಗಿರುವುದು ಎಲ್ಲರೂ ಹುಬ್ಬೇರುವಂತೆ ಮಾಡಿದೆ.

 

ಇದನ್ನೂ ಓದಿ ಆ ನಟಿಯ ಜೊತೆ ನಟಿಸುವುದು ಸಾಧ್ಯವಿಲ್ಲ ಎಂದ ಕತ್ರಿನಾ ಕೈಫ್  

ಇತ್ತೀಚೆಗೆ ಐಶ್ವರ್ಯಾ ಹುಟ್ಟುಹಬ್ಬದ ಪಾರ್ಟಿಯಲ್ಲಿ ಬಚ್ಚನ್ ಕುಟುಂಬ ಗೈರಾಗಿತ್ತು. ಐಶ್ವರ್ಯಾ ಮಗಳ ಜೊತೆ ದೇವಸ್ಥಾನಕ್ಕೆ ಭೇಟಿ ನೀಡುವಾಗಲೂ ಪತಿ ಅಭಿಷೇಕ್ ಜೊತೆಗಿರಲಿಲ್ಲ. ಇದು ಹಲವರಿಗೆ ಅನುಮಾನ ಮೂಡಿಸಿತ್ತು.

ಇದನ್ನೂ ಓದಿ ಯುವ ಪ್ರತಿಭೆಗಳ ಸಂಗಮ; ಶೀಘ್ರವೇ ’ಬೆಂಬಿಡದ ನಾವಿಕ’ ತೆರೆಗೆ!

ಇದೀಗ ಬಚ್ಚನ್ ಕುಟುಂಬ ದೀಪಾವಳಿ ಪೂಜೆ ಹಮ್ಮಿಕೊಂಡಿದ್ದರೆ ಐಶ್ವರ್ಯಾ ತಮ್ಮ ಮಗಳು ಆರಾಧ‍್ಯ ಜೊತೆಗೆ ಮುಂಬೈ ಏರ್ ಪೋರ್ಟ್ ನಲ್ಲಿ ಕಾಣಿಸಿಕೊಂಡಿದ್ದರು. ಮಗಳ ಜೊತೆ ಅಜ್ಞಾತ ಸ್ಥಳಕ್ಕೆ ಐಶ್ವರ್ಯಾ ತೆರಳಿದ್ದಾರೆ. ಹೀಗಾಗಿ ಬಚ್ಚನ್ ಕುಟುಂಬ ಮತ್ತು ಐಶ್ವರ್ಯಾ ನಡುವೆ ಎಲ್ಲವೂ ಸರಿಯಿಲ್ಲ ಎಂಬ ಮಾತಿಗೆ ಮತ್ತಷ್ಟು ಬಲ ಸಿಕ್ಕಂತಾಗಿದೆ.

Spread the love
Translate »
Right Ad