Sandalwood Leading OnlineMedia

ಸದ್ದು ಮಾಡುತ್ತಿದೆ ಹೊಸ ವರ್ಷದ ಹೊಸ್ತಿಲಲ್ಲಿ ರಿಲೀಸ್ ಆದ `ಮ್ಯಾಟ್ನಿ’ ಚಿತ್ರದ ವಿಭಿನ್ನ ಹಾಡು

ನ್ಯೂ ಈಯರ್‌ಗೆ ನೀನಾಸಂ ಸತೀಶ್ ನಟನೆಯ  ‘ಮ್ಯಾಟ್ನಿ’  ಸಿನಿಮಾದ ಪಾರ್ಟಿ ಹಾಡೊಂದು ಬಿಡುಗಡೆ ಆಗಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡುತ್ತಿದೆ. ನೀನಾಸಂ ಸತೀಶ್ ಹಾಗೂ ರಚಿತಾರಾಮ್ “ಅಯೋಗ್ಯ” ಸಿನಿಮಾದಲ್ಲಿ ಒಟ್ಟಿಗೆ ನಟಿಸಿ ಹಿಟ್ ನೀಡಿದ್ದರು. ಅದಾದ ಬಳಿಕ ಇದೀಗ ‘ಮ್ಯಾಟ್ನಿ’ ಸಿನಿಮಾದಲ್ಲಿ ಈ ಜೋಡಿ ಒಟ್ಟಿಗೆ ನಟಿಸಿದೆ. ಈ ಸಿನಿಮಾದ “ಬಾರೋ ಬಾರೋ ಬಾಟಲ್ ತಾರೋ” ಎಂಬ ಹಾಡೊಂದು ಹೊಸ ವರ್ಷದ ಸಂದರ್ಭದಲ್ಲಿ ಬಿಡುಗಡೆ ಆಗಿದೆ. ನೀನಾಸಂ ಸತೀಶ್​ರ ಗೆಳೆಯ ನಟ ಡಾಲಿ ಧನಂಜಯ ಈ ಹಾಡನ್ನು ಬಿಡುಗಡೆ ಮಾಡಿದ್ದಾರೆ. ಪೂರ್ಣಚಂದ್ರ ತೇಜಸ್ವಿ ಸಾಹಿತ್ಯ ಬರೆದು ಸಂಗೀತ ನೀಡಿರುವ ಈ ಹಾಡನ್ನು ಪೂರ್ಣಚಂದ್ರ ತೇಜಸ್ವಿ, ನೀನಾಸಂ ಸತೀಶ್ ಹಾಗೂ ರೀಲ್ ರೀನಾ ಹಾಡಿದ್ದಾರೆ.

ಇದನ್ನೂ ಓದಿ: ರಿಶಭ್ ಶೆಟ್ಟಿ ದೃಷ್ಟಿಯಲ್ಲಿ `ಯಶಸ್ಸು’

ಯುವಪೀಳಿಗೆಯ ಕೇಳುಗರನ್ನು ಸೆಳೆಯುವ ಉದ್ದೇಶದಿಂದ ಕ್ಯಾಚಿ ಲೈನುಗಳನ್ನು ಬಳಸಿಕೊಂಡು ರಚಿಸಿರುವ ಪಾರ್ಟಿ ಹಾಡಿದು. ಹಾಡಿನಲ್ಲಿ ಕುಡಿತದ ಬಗ್ಗೆ ಪಾರ್ಟಿ ಬಗ್ಗೆ ಸಾಲುಗಳಿವೆ. ಈ ಹಾಡಿಗೆ ನೀನಾಸಂ ಸತೀಶ್, ನಾಗಾಭೂಷಣ್ ಹಾಗೂ ಶಿವರಾಜ್ ಕೆ.ಆರ್ ಪೇಟೆ, ಮೈಸೂರು ಪೂರ್ಣ ಹೆಜ್ಜೆ ಹಾಕಿದ್ದಾರೆ. ಹೊಸವರ್ಷದ ಹರುಷವನ್ನು ಹೆಚ್ಚಿಸುವ ಈ ಹಾಡಿಗೆ ಮೆಚ್ಚುಗೆ ಮಹಾಪೂರವೇ ಹರಿದು ಬರುತ್ತಿದೆ.

ಹಾಡಿನ ಚಿತ್ರೀಕರಣವನ್ನು ಸಹ ಸ್ಟೈಲಿಷ್ ಆಗಿ ಮಾಡಲಾಗಿದೆ. ಪಬ್ ಒಂದರಲ್ಲಿ ಪಾರ್ಟಿ ಯುವಕರು ಪಾರ್ಟಿ ಮಾಡುತ್ತಿರುವ ರೀತಿಯಲ್ಲಿ ಹಾಡನ್ನು ಚಿತ್ರೀಕರಣ ಮಾಡಲಾಗಿದೆ. ‘ಬಾರೋ ಬಾರೋ ಬರುವಾಗ ಬಾಟ್ಲಿ ತಾರೋ’ ಎಂಬ ಸಾಲುಗಳ ಮೂಲಕ ಆರಂಭವಾಗುವ ಈ ಹಾಡು, ಗೆಳೆಯರನ್ನು ಎಣ್ಣೆ ಪಾರ್ಟಿಗೆ ಕರೆಯುವ ಮೂಡನ್ನು ಒಳಗೊಂಡಿದೆ.

F3 ಪ್ರೊಡಕ್ಷನ್ಸ್ ಲಾಂಛನದಲ್ಲಿ ಪಾರ್ವತಿ ಎಸ್ ಗೌಡ ಈ ಸಿನಿಮಾದ ನಿರ್ಮಾಣ ಮಾಡಿದ್ದಾರೆ. ಮನೋಹರ್ ಕಾಂಪಲ್ಲಿ ಸಿನಿಮಾದ ನಿರ್ದೇಶನ ಮಾಡಿದ್ದಾರೆ. ಸುಧಾಕರ್ ಎಸ್ ರಾಜ್ ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನ “ಮ್ಯಾಟ್ನಿ” ಸಿನಿಮಾಕ್ಕಿದೆ. ನೀನಾಸಂ ಸತೀಶ್, ರಚಿತಾ ರಾಮ್, ಅದಿತಿ ಪ್ರಭುದೇವ, ನಾಗಭೂಷಣ, ಶಿವರಾಜ ಕೆ.ಆರ್ ಪೇಟೆ ಮುಂತಾದವರು ಚಿತ್ರದ ತಾರಾಬಳಗದಲ್ಲಿದ್ದಾರೆ.

 

 

 

Share this post:

Related Posts

To Subscribe to our News Letter.

Translate »