ನಿರ್ದೇಶನ : ಪ್ರೀತಮ್ ಗುಬ್ಬಿ
ನಿರ್ಮಾಣ: ಶ್ರೀವಾರಿ ಪ್ರೊಡಕ್ಷನ್
ತಾರಾಗಣ: ಗಣೇಶ್, ರುಕ್ಕಿಣಿ ವಸಂತ್, ರಂಗಾಯಣ ರಘು, ರೀಷ್ಮಾ ನಾಣಯ್ಯ
ಪುನೀತ್ ರಾಜ್ ಕುಮಾರ್ ಹಾಡಿರುವ `ಭಾನದಾರಿಯಲ್ಲಿ ಸೂರ್ಯ ಜಾರಿಹೋದೆ…’ ಹಾಡನ್ನು ಸಮರ್ಥವಾಗಿ ಬಳಸಿಕೊಂಡು, ಟೈಟಲ್‌ಗೆ ಮ್ಯಾಚ್ ಆಗುವಂತೆ ಸೂಕ್ತ ಸನ್ನಿವೇಶದಲ್ಲಿ ಆ ಹಾಡನ್ನು ತೆರೆಯ ಮೇಲೆ ತರುವುದರ ಮೂಲಕ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಹುಟ್ಟಿಸಿಬಿಡುತ್ತದೆ `ಬಾನದಾರಿಯಲ್ಲಿ’. ಆದರೆ, ಅದೇ ನಿರೀಕ್ಷೆ ಸಿನಿಮಾ ಸಾಗುತ್ತಿದ್ದಂತೆ ಸುಳ್ಳಾಗುತ್ತಾ ಹೋಗುತ್ತದೆ. ಸಿದ್ದು ಮತ್ತು ಲೀಲಾ ಒಲವಿನೆ ಲೀಲೆಗಳನ್ನು ಬಿಚ್ಚಿಡುವ ಚಿತ್ರವಿದು. ಸಿದ್ದುವಾಗಿ ನಾಯಕ ಗಣೇಶ್ ಮತ್ತೆ ‘ಮುಂಗಾರುಮಳೆ’ಯನ್ನು ನೆನಪಿಸುತ್ತಾರೆ ಎಂಬ ನಿರೀಕ್ಷೆಯಲ್ಲಿ ಹೋದವರಿಗೆ ಬರೀ `ಮೋಡ’ ಅಷ್ಟೇ! `ಸಪ್ತಸಾಗದಾಚೆ ಎಲ್ಲೋ’ ಸಿನಿಮಾ ನೋಡಿ ರುಕ್ಮಿಣಿ ವಸಂತ್ ಅವರ ನಟನೆಗೆ ಅಭಿಮಾನಿಯಾಗಿ ಚಿತ್ರ ನೋಡಲು ಹೋದರೆ `ಲೀಲಾ’, ನಿರ್ದೇಶಕ ಪ್ರೀತಂ ಗುಬ್ಬಿಯ ಸಾರಥ್ಯದಲ್ಲಿ ಅಷ್ಟಾಗಿ ಸೆಳೆಯುವುದಿಲ್ಲ. ಸುಂದರ ತಾಣಗಳು, ಅದ್ಭುತವಾದ ಛಾಯಾಗ್ರಹಣ, ಒಳ್ಳೆ ಕಲಾವಿದರು ಇದ್ದೂ ‘ಬಾನದಾರಿ’ ಚಿತ್ರಕಥೆಯಲ್ಲಿ ಅಲ್ಲಲ್ಲಿ `ದಾರಿ’ ತಪ್ಪಿದೆ!
ಇದನ್ನೂ ಓದಿ: Totapuri-2 review; ಮಾನವೀಯ ಮೌಲ್ಯಗಳ ಬಗ್ಗೆ ಕಾ`ಮಿಡಿ’ಯಾಗಿ ಹೇಳುವ `ಗಂಭೀರ’ ಪ್ರಯತ್ನ!
ಪ್ರೇಮಕಥೆಯನ್ನು ಪ್ರೇಕ್ಷಕನಿಗೆ ದಾಟಿಸಲು ಭಾವನೆಯೇ ಸೇತುವೆ. ಆದರೆ ನಿರ್ದೇಶಕರು ಸೇತುವೆಯನ್ನೇ ಮರೆತು ಕಥೆ ಹೇಳುವ ಧೈರ್ಯ ಮಾಡಿದ್ದಾರೆ. ಪ್ರೇಮ, ಪ್ರಣಯ, ಮದುವೆ, ಪ್ರಯಾಣ, ಪ್ರಯಾಸ, ನಿರಾಸೆ.. ಹೀಗೆ ಪ್ರೇಮ`ದಾರಿ’ಯಲ್ಲಿ ಬರುವ ಹತ್ತು ಹಲವು ಹಂತಗಳನ್ನು ಪ್ರೇಕ್ಷಕನಿಗೆ ತಲುಪಿಸಿವಲ್ಲಿ ನಿರ್ದೇಶಕ ಪ್ರೀತಂ ಗುಬ್ಬಿ ಉತ್ತಮ ಅವಕಾಶವನ್ನು ಬಳಸಿಕೊಳ್ಳುವಲ್ಲಿ ಸೋತಿದ್ದಾರೆ. ಎಷ್ಟರ ಮಟ್ಟಿಗೆ ಎಂದರೆ, ಸಿದ್ದ-ಲೀಲಾ ಪ್ರೇಮ ಲೀಲೆಯನ್ನು ಕಣ್ತುಂಬಿಸಿಕೊಳ್ಳೋಣವೆAದರೆ ಭಾವನೆಯೇ ಇಲ್ಲದ, ನೋಡುಗನಿಗೆ ಕನೆಕ್ಟ್ ಆಗದ ದೃಶ್ಯವನ್ನು `ಡಿಸ್ಕವರೀ ಚಾನೆಲ್’ನೊಳಗೆ ತೂರಿಸಿ ಬೋರ್ ಹೊಡೆಸುತ್ತಾರೆ.
ಇದನ್ನೂ ಓದಿ: Sapta Sagaradaache Ello – `Side A’ Review : `ಅಳು’ವ ಕಡಲೊಳು `ಒಲವ’ ಹಾಯಿ ದೋಣಿ..!
ಸಿದ್ದು ಕ್ರಿಕೆಟರ್ ಆದರೆ, ಲೀಲಾ ಸ್ವಿಮ್ಮರ್. ಮಕ್ಕಳಿಗೆ ಸ್ವಿಮ್ ಹೇಳಿಕೊಡುವುದೇ ಲಿಲಾಳ ಕಸುಬು. ಮೊದಲ ನೋಟದಲ್ಲಿಯೇ ಸಿದ್ದು ಲೀಲಾಳ ಕಣ್ಣೊಳಗೆ ಸ್ವಿಮ್ ಮಾಡಿ ಒಲವಿನ ಸಾಗರದಲ್ಲಿ ತೇಲುತ್ತಾನೆ. ಒಲವು ಮತ್ತು ಈಜನ್ನು ಸಮರ್ಥವಾಗಿ ಬಳಸಿಕೊಂಡಿರುವ ಗುಬ್ಬಿ, ಕ್ರಿಕೆಟ್ ಮತ್ತು ಸಿದ್ದುವನ್ನು ಕಥಗೆ ಪೋಣಿಸುವಲ್ಲಿ ಯಶಸ್ವಿಯಾಗಿಲ್ಲ. ಕ್ರಿಕೆಟಿಗನಾಗಿ ಸಿದ್ದುವನ್ನು ಸ್ಟೆöÊಲಿಶ್ ಆಗಿ, ತೋರಿಸುವುದಕ್ಷೇ ಕ್ರಿಕೆಟ್ ಅನ್ನು ಬಳಸಿಕೊಳ್ಳಲಾಗಿದ್ದು ಸಿನಿಮಾದ ಕೊನೆಯಲ್ಲಿ ಕ್ರಿಕೆಟ್ ಅನ್ನವುದು ತನ್ನ ಇಂಪಾರ್ಟೆನ್ಸ್ ಕಳೆದುಕೊಳ್ಳುತ್ತದೆ. ಚಿತ್ರಕಥೆಯಲ್ಲಿ ಸ್ವಿಮ್ಮಿಂಗ್‌ನAತೆ, ಕ್ರಿಕೆಟ್ ಅನ್ನೂ ಕೂಡ ಇನ್ನಷ್ಟು ಸಮರ್ಥವಾಗಿ ಬಳಸಿಕೊಂಡಿದ್ದರೆ `ಬಾನದಾರಿ’ ದಾರಿ ತಪ್ಪುತ್ತಿರಲಿಲ್ಲ. ಸಿದ್ದು-ಲೀಲಾ ದೃಶ್ಯಗಳಿಗೆ ಇನ್ನೇನು ಪ್ರೇಕ್ಷಕರಿಗೆ ಫಿದಾ ಆಗಬೇಕು ಅನ್ನವುವಷ್ಟರಲ್ಲಿ, ಸಿದ್ದು ಮತ್ತು ಲೀಲಾಳ ಅಪ್ಪ ವಾಸುವಿನ ದೃಶ್ಯಗಳ ಭ್ರಮನಿರಸನ ಗೊಳಿಸುತ್ತವೆ. ಹಾಸ್ಯ ಪಾತ್ರಗಳ ಮೂಲಕ ಮನೆ ಮಾತಾಗಿರುವ ರಂಗಾಯಣ ರಘು, ಲೀಲಾ ಅಪ್ಪನಾಗಿ ವಿಭಿನ್ನ ಪಾತ್ರದ ಮಾಡಿದ್ದಾರೆ.
ಇದನ್ನೂ ಓದಿ: ‘Kousalya Supraja Rama’ movie review: ಕಲಿಯುಗ ರಾಮನ ಮಾಡರ್ನ್ ವನವಾಸ!
ಸೆಕೆಂಡ್ ಆಫ್‌ನಲ್ಲಿ `ಬಾನ’ ದಾರಿ ಕೀನ್ಯಾದ ಕಡೆಗೆ ಹೊರಳುತ್ತದೆ. `ಕೀನ್ಯಾದಲ್ಲಿ ಪ್ರಾಣಿಗಳಿಗೂ ಮನುಷ್ಯರಷ್ಟೇ ಪ್ರೀಡಮ್’ ಇದೆ ಎಂಬುದರಿAದ ಇಂಪ್ರೆಸ್ ಆದ ಲೀಲಾಳಿಗೆ ಕೀನ್ಯಾ ಪ್ರವಾಸವೇ ಜೀವನದ ದೊಡ್ಡ ಕನಸಾಗಿರುತ್ತದೆ. ಭಾರತದ ಸಂರಕ್ಷಿತಾರಣ್ಯಗಳಲ್ಲಿಯೂ ಪ್ರಾಣಿಗಳು ಬೋನಿನಿಂದ ಹೊರಗೆ ಬದುಕುತ್ತವೆಯಾದರೂ, ಗುಬ್ಬಿ ಕೀನ್ಯಾವನ್ನೇ ಆರಿಸಿಕೊಂಡದ್ದು ಯಾಕೆ.. ಎಂಬ ಪ್ರಶ್ನೆ ಮೂಡುತ್ತದೆ. ಏಕೆಂದರೆ, ಕೀನ್ಯಾದಲ್ಲಿ ಭಾರತಕ್ಕಿತ ಹೆಚ್ಚು ವೈಲ್ಡ್ ಸಫಾರಿಗೆ ಅವಕಾಶವಿದೆ, ಇಲ್ಲಿರುವ ಪ್ರಾಣಿ ಸಂಕುಲ ವರ್ಷವಿಡೀ ಕಾಣಸಿಗುವುದು ಕೀನ್ಯಾದಲ್ಲಿ ಮಾತ್ರ!. ಆದರೆ `ಡಿಸ್ಕವರೀ ಚಾನೆಲ್’ ಅನ್ನು ತೆರೆಯ ಮೇಲೆ ನೋಡುವ ಸಂಭ್ರಮ ಪ್ರೇಕ್ಷಕಕನಿಗೆ ಸಿಗುತ್ತಾದರೂ, ಲಾಜಿಕ್ ಇಲ್ಲದೆ `ಮ್ಯಾಜಿಕ್’ ಮಾಡಲು ಹೊರಟಿದ್ದೇ ಚಿತ್ರಕ್ಕೆ ಹಿನ್ನಲೆಯಾಗಿದೆ. ಹಿನ್ನೆಲೆ ಸಂಗೀತ ಮತ್ತು ಸಿನಿಮಾ ದೃಶ್ಯಗಳಿಗೆ ಹೊಂದಿಕೆಯಾಗಿಲ್ಲ. `ಬಾನದಾರಿಯಲ್ಲಿ’ ಎಂಬ ಒಂದು ಹಾಡು ಇಡೀ ಸಿನಿಮಾವನ್ನು ನೋಡಿಸಿಕೊಂಡು ಹೋಗಲು ಸಾಧ್ಯವೇ. ಒಟ್ಟಿನಲ್ಲಿ ಒಲವಿನ `ಡಿಸ್ಕವರೀ’ ಮಾಡಲು ಹೊರಟ ನಿರ್ದೇಶಕರು `ಡಿಸ್ಕವರೀ ಚಾನೆಲ್’ ಗುಂಗಿಗೆ ಮರುಳಾಗಿ ಇಡೀ ಚಿತ್ರದ `ದಾರಿ’ಯನ್ನು ತಾವೇ ತಪ್ಪಿಸಿದ್ದಾರೆ. ಇನ್ನು, `ಸ್ಟಾರ್’ ಚಿತ್ರ ಅನ್ನುವ ಓವರ್ ಕಾನ್ಫಿಡೆನ್ಸ್ನಿಂದ, ಸಿನಿಮಾವನ್ನು ಸಮರ್ಥ ಪಬ್ಲಿಸಿಟೀ ಮೂಲಕ ಜನರ ಬಳಿಗೆ ಕೊಂಡೋಯ್ಯದೇ ಇರುವುದೂ ಚಿತ್ರಕ್ಕೆ ದೊಡ್ಡ ಹಿನ್ನಲೆಯಾಗಿರುವುದನ್ನು ತಳ್ಳಿಹಾಕುವಂತಿಲ್ಲ.