ಬಾಹುಬಲಿ ಮತ್ತು ಮಾಹಿಷ್ಮತಿಯ ಜಗತ್ತಿನಲ್ಲಿ ಇದೂವರೆಗೂ ಕೇಳಿರದ, ಕಂಡಿರದ ಹಾಗೂ ತಿಳಿಯಲಾಗದಿದ್ದ ಅನೇಕ ಘಟನೆಗಳು ಕಥೆಗಳು ಇವೆ. ಮೂಲತ: ನಟರಾಗಿರುವ ಶರದ್ ಕೇಲ್ಕರ್ ಐತಿಹಾಸಿಕ ಪ್ರಾಜೆಕ್ಟ್‌ಗಳಿಗೆ ಧ್ವನಿ ನೀಡಿ ಖ್ಯಾತರಾಗಿದ್ದಾರೆ. ಇವರು ಸದ್ಯ ಬಾಹುಬಲಿ ನಾಯಕ ಪ್ರಭಾಸ್‌ಗೆ ಕಂಠದಾನ ಮಾಡಿರುವುದು ವಿಶೇಷ. ಈ ಕುರಿತಂತೆ ಅವರು ಖುಷಿಯನ್ನು ಹಂಚಿಕೊಂಡಿದ್ದಾರೆ.
READ MORE ; 2024ರಲ್ಲಿ ಸಂಭಾಷಣೆಯ ಮೂಲಕ ಗಮನ ಸೆಳೆದವರು ಯಾರು? ಯಾರು ಅರ್ಹರು `Chittara Best Dialogue Writer-2024’ ಪ್ರಶಸ್ತಿಗೆ?
ಮೊದಲು ನಾನೊಬ್ಬ ನಟ. ಉತ್ತಮವಾಗಿ ಅಭಿನಯಿಸಬಲ್ಲೆ. ವಿವಿಧ ಬಗೆಯ ಪಾತ್ರಗಳನ್ನು ಮಾಡುತ್ತಾ ಬಂದಿದ್ದೇನೆ. ಆದರೂ ಒಳ್ಳೆಯ ಕಾಲಕ್ಕೆ ಕಾಯುತ್ತಿದ್ದೇನೆ. ಅತ್ಯುತ್ತಮವಾದದು ಇನ್ನು ಬರಬಹುದು ಅಂತ ನಿರೀಕ್ಷೆಯಲ್ಲಿದ್ದೇನೆ. ಧ್ವನಿ ನೀಡುವಾಗ ಯಾವ ಆಯಾಮಕ್ಕೂ ತೆಗೆದುಕೊಂಡು ಹೋಗಬಲ್ಲೆ. ಬಾಹುಬಲಿಗೆ ಧ್ವನಿಯನ್ನಾಗಿ ಮಾಡಿದ ರಾಜಮೌಳಿ ಸರ್‌ಗೆ ಕೀರ್ತಿ ಸಲ್ಲಬೇಕು. ಪಾತ್ರಕ್ಕೆ ಕಲ್ಪಿಸುವಂತೆ ಡಬ್ ಮಾಡಲು ಸ್ವಾತಂತ್ರ್ಯ ನೀಡಿದರು. ಮೊದಲ ಭಾಗದಲ್ಲೇ ಸಂಜೆ ಬಂದು ಎಲ್ಲಾ ಡಬ್‌ಗಳನ್ನು ಪರೀಕ್ಷಿಸುತಿದ್ದರು. ಎರಡನೇ ಭಾಗದ ಡಬ್ಬಿಂಗ್ ನಡೆಯುವಾಗ ಬಾರದೆ, ನನ್ನ ಮೇಲೆ ಸಂಪೂರ್ಣ ವಿಶ್ವಾಸ ತೆಗೆದುಕೊಂಡಿದ್ದರು. ಗಯ್ಸ್ ನಿಮ್ಮ ಕೆಲಸ ಮಾಡಿ ಎಂದು ಹೇಳುತ್ತಿದ್ದರು. ಅಂತಹವರಿಂದ ಶಹಬ್ಬಾಸ್ ಅನ್ನಿಸಿಕೊಂಡಿದ್ದು ಮರೆಯಲಾಗದ ಅನುಭವ ಎನ್ನುತ್ತಾರೆ. ಎ ಗ್ರಾಫಿಕ್ ಇಂಡಿಯಾ ಮತ್ತು ಆರ್ಕ ಮೀಡಿಯಾ ವರ್ಕ್ಸ್ ಪ್ರೊಡಕ್ಷನ್ ಅಡಿಯಲ್ಲಿ ಎಸ್.ಎಸ್.ರಾಜಮೌಳಿ-ಶರದ್‌ದೇವರಾಜನ್ ಕ್ರಿಯೆಟೀವ್ ಮುಖ್ಯಸ್ಥರಾಗಿರುತ್ತಾರೆ. ಜೀವನ್.ಜೆ.ಕಾಂಗ್-ನವೀನ್ ಜಾನ್ ಜಂಟಿಯಾಗಿ ನಿರ್ದೇಶನ ಮಾಡಿದ್ದಾರೆ. ಇವರೆಲ್ಲರೂ ನಿರ್ಮಾಣದಲ್ಲಿ ಪಾಲುದಾರರಾಗಿರುತ್ತಾರೆ.
ಪವರ್ ಪ್ಯಾಕ್ಡ್ ಆಕ್ಷನ್ ಸೀರೀಸ್‌ದಲ್ಲಿ ಡಿಸ್ನಿ+ಹಾಟ್‌ಸ್ಟಾರ್‌ದಲ್ಲಿ ವೀಕ್ಷಿಸಬಹುದು.