ಪವಿತ್ರಾ ಹಾಗೂ ಚಂದು ಸಾವಿನ ನಂತರ ಅವರ ಪ್ರೀತಿಯ ಕುರಿತು ಒಂದೊಂದೇ ವಿಚಾರ ರಿವೀಲ್ ಆಗುತ್ತಿದೆ. ಪರಸ್ಪರ ಇಷ್ಟಪಟ್ಟು ಮದುವೆಗೂ ರೆಡಿಯಾಗಿದ್ದ ಈ ಜೋಡಿಯ ಲವ್ಸ್ಟೋರಿ ಶುರುವಾಗಿದ್ದೆಲ್ಲಿಂದ ಗೊತ್ತಾ? ಇವರು ಇಷ್ಟಪಡೋಕೆ ಶುರು ಮಾಡಿದ್ದು ಯಾವಾಗ?
ಇದನ್ನೂ ಓದಿ :ಕಾಲಘಟ್ಟವನ್ನೂ ಮೀರಿದ ಒಂದು ಅಪ್ರತಿಮ ಪ್ರೇಮ ಕಥೆ “A” ಚಿತ್ರ ಎನ್ನುತ್ತಾರೆ ನಾಯಕಿ ಚಾಂದಿನಿ
ಲಾಕ್ಡೌನ್ನಲ್ಲಿ ಪವಿತ್ರಾ ಹಾಗೂ ಚಂದು ಮಧ್ಯೆ ಪ್ರೀತಿ ಹುಟ್ಟಿತ್ತು. ಇಬ್ಬರೂ ಮದುವೆಯಾದವರು. ಪವಿತ್ರಾಗೂ ಮದುವೆಯಾಗಿದ್ದರೆ ಚಂದು ಅವರು ಮದುವೆಯಾಗಿ ತಂದೆಯೂ ಆಗಿದ್ದರು. ಪವಿತ್ರಾ ಜೊತೆ ಅವರ ಗಂಡನಾಗಿ ಸೀರಿಯಲ್ನಲ್ಲಿ ನಟಿಸುತ್ತಿದ್ದರು ಚಂದು.
ಅಣ್ಣಯ್ಯ ಅಣ್ಣಯ್ಯಾ ಎಂದೇ ಪವೊತ್ರಾ ಜಯರಾಂ ಚಂದು ಅವರನ್ನು ಕರೆಯುತ್ತಿದ್ದರು. ಹೀಗಿದ್ದರೂ ಕೂಡಾ ಅವರಿಬ್ಬರ ಮಧ್ಯೆ ಲವ್ ಆಗಿಬಿಟ್ಟಿತ್ತು. ಪರಸ್ಪರ ಒಬ್ಬರನ್ನೊಬ್ಬರು ತುಂಬಾ ಇಷ್ಟಪಡಲಾರಂಭಿಸಿದ್ದರು. ಲಾಕ್ಡೌನ್ ವೇಳೆ ಇವರ ಪ್ರೀತಿ ಬೆಳೆಯಿತು.
ಕೊನೆಗೆ ಚಂದು ತನ್ನ ಪತ್ನಿಯನ್ನು ಬಿಟ್ಟು ಪವಿತ್ರಾ ಜೊತೆ ಬಂದಿದ್ದರು. ಪವಿತ್ರಾ ಜಯರಾಂ ಕೂಡಾ ಗಂಡನನ್ನು ಬಿಟ್ಟು ಚಂದು ಜೊತೆಗಿರಲು ನಿರ್ಧರಿಸಿದ್ದರು. ಪವಿತ್ರಾ ಫ್ಲಾಟ್ನಲ್ಲಿಯೇ ಚಂದು ಇದ್ದರು. ಇಬ್ಬರೂ ಕೂಡಾ ತಮ್ಮ ಸಂಗಾತಿಯಿಂದ ದೂರವಾಗಿ ಒಟ್ಟಿಗೆ ವಾಸಿಸಲು ಶುರು ಮಾಡಿದ್ದರು.
ಈಗ ತಿಳಿದಿರೋ ಸುದ್ದಿ ಏನಪ್ಪಾ ಅಂದ್ರೆ ಪವಿತ್ರಾ ಹಾಗೂ ಚಂದು ಅಧಿಕೃತವಾಗಿ ಮದುವೆಯಾಗದೆ ಗಂಡ ಹೆಂಡತಿಯರಂತೆ ಬದುಕುತ್ತಿದ್ದರೂ ಕೂಡಾ ಅವರು ತಮ್ಮ ರಿಲೇಷನ್ಶಿಪ್ ಗುಟ್ಟಾಗಿ ಇಡಲು ಬಯಸಿರಲಿಲ್ಲ. ಬದಲಾಗಿ ಇಬ್ಬರೂ ಕೂಡಾ ತಮ್ಮ ರಿಲೇಷನ್ಶಿಪ್ ಬಗ್ಗೆ ಸಿಕ್ಕಾಪಟ್ಟೆ ಓಪನ್ ಆಗಿದ್ದರು.
ಇಬ್ಬರೂ ತಮ್ಮ ಲವ್ ಮ್ಯಾಟರ್ ಅನೌನ್ಸ್ ಮಾಡಿ ಎಲ್ಲರಿಗೂ ತಿಳಿಸಿಯೇ ಮದುವೆಯಾಗಬೇಕೆಂದು ಪ್ಲಾನ್ ಕೂಡಾ ಮಾಡಿದ್ದರು. ಆದರೆ ಅದಕ್ಕೂ ಮೊದಲೇ ಇಬ್ಬರೂ ಈಗ ಇಹಲೋಕ ತ್ಯಜಿಸಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಕ್ರಾಸ್ ಪೋಸ್ಟ್ಗಳನ್ನು ಮಾಡುತ್ತಾ ತಮ್ಮ ರಿಲೇಷನ್ಶಿಪ್ ಓಪನ್ ಇಟ್ಟಿದ್ದರು.
ಆದರೆ ಮದುವೆಯಾಗುವ ಮೊದಲೇ ಪವಿತ್ರಾ ಜಯರಾಂ ಅಪಘಾತದಲ್ಲಿ ಮೃತಪಟ್ಟರೆ ನಟ ಚಂದು ಆತ್ಮಹತ್ಯೆಯಿಂದ ಮೃತಪಟ್ಟಿದ್ದಾರೆ. ಅದರ ಬೆನ್ನಲ್ಲಿಯೇ ಚಂದು ಪವಿತ್ರಾ ಮನೆಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಅಂತೂ ಇವರ ಲವ್ಸ್ಟೋರಿ ಇವರ ಸಾವಿನ ನಂತರವೇ ಹೆಚ್ಚು ಸುದ್ದಿ ಮಾಡುತ್ತಿರುವುದಂತೂ ನಿಜ.