‘ಬಿಗ್ ಬಾಸ್ ಕನ್ನಡ ಸೀಸನ್ 12’ ಮನೆಯಲ್ಲಿನ ಸಂಭಾಷಣೆಗಳಲ್ಲಿ ಹೊಸ ವಿವಾದ ಹುಟ್ಟಿದೆ. ಜಾನ್ವಿ ಮತ್ತು ಅಭಿಷೇಕ್ ನಡುವಿನ ಮಾತುಕತೆ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಚರ್ಚೆಗೆ ಕಾರಣವಾಗಿದೆ.

ಅಭಿಷೇಕ್ ಅವರು ಮಾತಿನ ನಡುವೆ “ನನಗೆ ದೊಡ್ಡವರು ಇಷ್ಟ” ಎಂದಾಗ, ಜಾನ್ವಿ ತಕ್ಷಣ ಪ್ರತಿಕ್ರಿಯಿಸಿ – “ನೀವು ಆಂಟಿ ಲವರ್ ಆ?” ಎಂದು ಕೇಳಿದರು. ಈ ನೇರ ಪ್ರಶ್ನೆ ಕೇಳುತ್ತಿದ್ದಂತೆಯೇ ಮನೆಯವರ ಮುಖದಲ್ಲೇ ನಗು ಮೂಡಿತು. ಆದರೆ ಈ ಕ್ಲಿಪ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದಂತೆಯೇ ನೆಟ್ಟಿಗರ ನಡುವಿನ ಪ್ರತಿಕ್ರಿಯೆಗಳು ಹರಿದುಬಂದಿವೆ.
ಅಭಿಷೇಕ್ ಮತ್ತು ಅಶ್ವಿನಿ ಮನೆಯೊಳಗೆ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದು, ಅವರ ನಡುವೆ ಫ್ಲರ್ಟಿಂಗ್ ಕ್ಷಣಗಳು ಆಗಾಗ ಚರ್ಚೆಯಾಗುತ್ತಿವೆ. ಇತ್ತೀಚೆಗೆ ಅಭಿಷೇಕ್ ಅವರು “ನಿನ್ನಿಂದಲೇ…” ಹಾಡನ್ನು ಹಾಡುತ್ತಿದ್ದಾಗ, ಅಶ್ವಿನಿ ಹಾಸ್ಯವಾಗಿ “ಜಾನ್ವಿ ನಿಮಗಾಗಿ ಹಾಡುತ್ತಿದ್ದಾರೆ ನೋಡಿ” ಎಂದರು. ಅದಕ್ಕೆ ಜಾನ್ವಿ ತಕ್ಷಣ “ನೀವು ಇಷ್ಟೇ ರೀತಿಯ ಹಾಡು ಎಷ್ಟು ಜನರಿಗೆ ಹಾಡಿದ್ದೀರಿ?” ಎಂದು ಪ್ರಶ್ನೆ ಮಾಡಿದರು. ಅಭಿಷೇಕ್ ಕೂಡ ತಕ್ಷಣ “ನಿಮಗಾಗಿ ಮಾತ್ರ ಹೇಳೋದು” ಎಂದು ಉತ್ತರಿಸಿದರು.
ಆ ವೇಳೆ ವಯಸ್ಸಿನ ಬಗ್ಗೆ ಮಾತು ಬಂದಾಗ, ಅಭಿಷೇಕ್ ತಮಗೆ 29 ವರ್ಷ ಎಂದು ಹೇಳಿದರು. ಅದಕ್ಕೆ ಜಾನ್ವಿ, “ನಾನು ನಿಮಗಿಂತ 10 ವರ್ಷ ದೊಡ್ಡವಳು. ನಿಮಗೆ ದೊಡ್ಡವರು ಇಷ್ಟವೇ?” ಎಂದು ಕೇಳಿದರು. ಅಭಿಷೇಕ್ ಹೌದು ಎಂದಾಗಲೇ, ಜಾನ್ವಿ ನಗೆ ಚಿಮ್ಮುತ್ತಾ “ಹಾಗಾದರೆ ನೀವು ಆಂಟಿ ಲವರ್ ಆ” ಎಂದರು.
ಅಭಿಷೇಕ್ ಕೂಡ ತಕ್ಷಣ “ಹಾಗಾದರೆ ನೀವು ಆಂಟಿ ಅಂತ ಒಪ್ಪ್ತೀರಾ?” ಎಂದು ಪ್ರಶ್ನೆ ಮಾಡಿದರು. ಅದಕ್ಕೆ ಜಾನ್ವಿ, “ನಾನು ಆಂಟಿ ಅಲ್ಲ. ಆದರೆ, ಈ ವಯಸ್ಸಿನವರಿಗೆ ಸಮಾಜ ಹೀಗೆ ಕರೆಯುತ್ತದೆ. ನಾನು ನನ್ನ ಬಾಡಿಯನ್ನು ಹಾಗೆ ನೋಡಿಕೊಂಡಿದ್ದೇನೆ, ಆಂಟಿ ತರ ಕಾಣದಂತೆ” ಎಂದು ಸ್ಪಷ್ಟನೆ ನೀಡಿದರು.
ಈ ದೃಶ್ಯ ಈಗ ಸಾಮಾಜಿಕ ಜಾಲತಾಣಗಳಲ್ಲಿ ಟ್ರೆಂಡ್ ಆಗಿದ್ದು, ನೆಟ್ಟಿಗರು ನಾನಾ ರೀತಿಯ ಕಾಮೆಂಟ್‌ಗಳನ್ನು ಹಾಕುತ್ತಿದ್ದಾರೆ. ಕೆಲವರು ಜಾನ್ವಿಯ ಆತ್ಮವಿಶ್ವಾಸವನ್ನು ಶ್ಲಾಘಿಸುತ್ತಿದ್ದರೆ, ಇನ್ನು ಕೆಲವರು ಈ ಸಂಭಾಷಣೆಯನ್ನು ಟ್ರೋಲ್ ಮಾಡಿದ್ದಾರೆ.
