ಜವಾನ್ ಸಿನಿಮಾದ ಮೂಲಕ ಟ್ರೆಂಡ್ ಆಗಿರುವ ಹೆಸರು ಅಟ್ಲಿ. ತಮಿಳಿನ ಖ್ಯಾತ ನಿರ್ದೇಶಕ ಇವರು. ಬಾಲಿವುಡ್ನಲ್ಲಿ ಮೊದಲ ಸಿನಿಮಾದಲ್ಲಿಯೇ ಸಖತ್ ಟ್ರೆಂಡ್ ಸೆಟ್ ಮಾಡಿದ್ದಾರೆ. ಅಟ್ಲೀ ಅವರ ಬ್ಲಾಕ್ಬಸ್ಟರ್ ಸಿನಿಮಾಗಳನ್ನು ನೋಡಿದ್ದೀರಾ? ಇಲ್ಲಿದೆ ಲಿಸ್ಟ್.ಲಸ್ಟ್ ಸ್ಟೋರಿ ಬಿಟ್ಟಿ ಪಬ್ಲಿಸಿಟಿಗೆ ತಮನ್ನಾ, ವಿಜಯ್ ವರ್ಮಾ ಲವ್ ಸ್ಟೋರಿ ಗಿಮಿಕ್.!
ಅಟ್ಲಿ ಎನ್ನುವ ಹೆಸರು ಕಳೆದ ಕೆಲವು ದಿನಗಳಿಂದ ಸಿಕ್ಕಾಪಟ್ಟೆ ಸುದ್ದಿಯಾಗುತ್ತಿದೆ. ಸೌತ್ ಸಿನಿಮಾ ಇಂಡಸ್ಟ್ರಿಯಲ್ಲಿ ಬೆಳೆಯುತ್ತಿರುವ ಪ್ರತಿಭಾನ್ವಿತ ನಿರ್ದೇಶಕನಿಗೆ ಬಾಲಿವುಡ್ನಲ್ಲಿ ಬಂಡವಾಳ ಹೂಡುತ್ತಿರುವುದು ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಅವರ ರೆಡ್ ಚಿಲ್ಲೀಸ್ ಎಂಟರ್ಟೈನ್ಮೆಂಟ್.ರಾಜಾ ರಾಣಿ ಸಿನಿಮಾ ಸೂಪರ್ಹಿಟ್ ರೊಮ್ಯಾಂಟಿಕ್ ಸಿನಿಮಾಗಳಲ್ಲಿ ಒಂದಾಗಿದೆ. ಆರ್ಯ, ನಯನತಾರಾ, ನಸ್ರಿಯಾ ನಝೀಮ್ ಪ್ರಮುಖ ಪಾತ್ರಗಳಲ್ಲಿ ನಟಿಸಿರುವ ಈ ಸಿನಿಮಾದಲ್ಲಿ ಎರಡು ಪ್ರೇಮ ಕಥೆಗಳನ್ನು ಸುಂದರವಾಗಿ ಪ್ರಸ್ತುತಪಡಿಸಲಾಗಿದೆ.
ಬಿಗಿಲ್ ಅಟ್ಲಿ ಅವರ ಇನ್ನೊಂದು ಸೂಪರ್ಹಿಟ್ ಸಿನಿಮಾ. ಹೆಣ್ಣುಮಕ್ಕಳನ್ನೇ ಹೈಲೈಟ್ ಮಾಡಿರುವ ಈ ಸಿನಿಮಾದಲ್ಲಿ ವಿಜಯ್ ಕೋಚ್ ಆಗಿ ಕಾಣಿಸಿಕೊಂಡಿದ್ದು ನಯನತಾರಾ ಹೀರೋಯಿನ್ ಆಗಿದ್ದಾರೆ. ಈ ಸಿನಿಮಾಗೆ ರೆಹಮಾನ್ ಸಂಗೀತ ಒದಗಿಸಿದ್ದಾರೆ. ಈ ಸಿನಿಮಾದ ಬಿಜಿಎಂ ಹಾಗೂ ಮ್ಯೂಸಿಕ್ ಸಖತ್ ಹಿಟ್ ಆಗಿದೆ. ಮರ್ಸೆಲ್ ಸಿನಿಮಾ ವಿಜಯ್ ಹಾಗೂ ನಿತ್ಯ ಮೆನನ್ ನಟಿಸಿದ ಮೂವಿ. ಅಟ್ಲಿ ಅವರು ಫ್ಲ್ಯಾಶ್ಬ್ಯಾಕ್ ಹಿಡಿದುಕೊಂಡು ವೈದ್ಯಕೀಯ ಕ್ಷೇತ್ರದ ಸ್ಕ್ಯಾಮ್ ಬಗ್ಗೆ ಮನಮುಟ್ಟುವಂತೆ ಹೇಳಿದ್ದಾರೆ. ಸಿನಿಮಾ ಎಲ್ಲಿಯೂ ಬೋರ್ ಹೊಡೆಸದೆ ಪ್ರೇಕ್ಷಕನನ್ನು ಕೂರಿಸುತ್ತದೆ. ಇದರಲ್ಲಿ ವಿಜಯ್ ತ್ರಿಬಲ್ ರೋಲ್ನಲ್ಲಿ ನಟಿಸಿದ್ದಾರೆ.
ತೆರಿ ಆ್ಯಕ್ಷನ್ ಫ್ಲಾಸ್ ಫ್ಯಾಮಿಲಿ ಮೂವಿ. ನಟಿ ಮೀನಾ ಅವರ ಮಗಳು ಇದರಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದು ಸಮಂತಾ ಹಾಗೂ ಆ್ಯಮಿ ಜಾಕ್ಸನ್ ಹೀರೋಯಿನ್ಗಳಾಗಿದ್ದಾರೆ. ಈ ಸಿನಿಮಾದಲ್ಲಿ ವಿಜಯ್ ಪೊಲೀಸ್ ಪಾತ್ರವನ್ನು ಮಾಡಿದ್ದಾರೆ. ತಮಿಳಿನ ಖ್ಯಾತ ನಿರ್ದೇಶಕ ಅಟ್ಲೀ ನಿರ್ದೇಶನ ಮಾಡಿದ ಜವಾನ್ ಸಿನಿಮಾದ ಮೂಲಕ ನಯನತಾರಾ ಕೂಡಾ ಬಾಲಿವುಡ್ಗೆ ಕಾಲಿಡುತ್ತಿದ್ದಾರೆ. ಈ ಸಿನಿಮಾದಲ್ಲಿ ಶಾರುಖ್ ಖಾನ್ ಅವರು ದೀಪಿಕಾ ಪಡುಕೋಣೆ ಹಾಗೂ ನಯನತಾರಾ, ವಿಜಯ್ ಸೇತುಪತಿ ಜೊತೆ ನಟಿಸಲಿದ್ದಾರೆ.
ಜವಾನ್ ಸಿನಿಮಾದ ಟೀಸರ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಸೂಪರ್ ಹಿಟ್ ಎನ್ನುವುದರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟರಮಟ್ಟಿಗೆ ಪ್ರೇಕ್ಷಕರು ಟೀಸರ್ ನೋಡಿ ಫಿದಾ ಆಗಿದ್ದಾರೆ. ಇದೀಗ ತಮ್ಮ ಜವಾನ್ ಸಿನಿಮಾದ ಟೀಸರ್ಗೆ ಬಂದಿರೋ ರೆಸ್ಪಾನ್ಸ್ನಿಂದ ಫುಲ್ ಖುಷಿಯಾಗಿರುವ ಶಾರುಖ್ ಅಟ್ಲಿ ಅವರನ್ನು ಮುಕ್ತವಾಗಿ ಹೊಗಳಿದ್ದಾರೆ.
ಜವಾನ್ ಸಿನಿಮಾದ ಟೀಸರ್ಗೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ. ಸಿನಿಮಾ ಸೂಪರ್ ಹಿಟ್ ಎನ್ನುವುದರಲ್ಲಿ ಡೌಟೇ ಇಲ್ಲ ಎನ್ನುತ್ತಿದ್ದಾರೆ ನೆಟ್ಟಿಗರು. ಅಷ್ಟರಮಟ್ಟಿಗೆ ಪ್ರೇಕ್ಷಕರು ಟೀಸರ್ ನೋಡಿ ಫಿದಾ ಆಗಿದ್ದಾರೆ. ಇದೀಗ ತಮ್ಮ ಜವಾನ್ ಸಿನಿಮಾದ ಟೀಸರ್ಗೆ ಬಂದಿರೋ ರೆಸ್ಪಾನ್ಸ್ನಿಂದ ಫುಲ್ ಖುಷಿಯಾಗಿರುವ ಶಾರುಖ್ ಅಟ್ಲಿ ಅವರನ್ನು ಮುಕ್ತವಾಗಿ ಹೊಗಳಿದ್ದಾರೆ.ಶಾರುಖ್ ಖಾನ್ ಅವರು ಅಟ್ಲೀ ಬಗ್ಗೆ ಟ್ವೀಟ್ ಮಾಡಿ, ಸರ್.. ಮಾಸ್.. ಯು ಆರ್ ದಿ ಮ್ಯಾನ್. ನೀವು ಮಾಡಿರುವುದಕ್ಕೆ ಎಲ್ಲದಕ್ಕೂ ಧನ್ಯವಾದಗಳು ಎಂದು ಬರೆದಿದ್ದಾರೆ. ಇದನ್ನು ನೋಡಿದ ಸೌತ್ ಮಂದಿ ಖುಷಿ ಪಟ್ಟಿದ್ದಾರೆ.