Sandalwood Leading OnlineMedia

ಗಮನಸೆಳೆಯುತ್ತಿದೆ ʻಅಥಿʼಯ ರೊಮ್ಯಾಂಟಿಕ್ ಫೋಟೋ ಶೂಟ್

ಒಂದು ಮನೆ, ಎರಡು ಪಾತ್ರಗಳನ್ನಿಟ್ಟುಕೊಂಡು ಸಿನಿಮಾ ರೂಪಿಸುವುದು ಅಂದರೆ ಸುಲಭದ ಮಾತಲ್ಲ. ಅದೂ ಹತ್ತಕ್ಕೂ ಹೆಚ್ಚು ನಿಮಿಷಗಳ ಸಿಂಗಲ್ ಶಾಟ್ಗಳನ್ನು ಕಂಪೋಸ್ ಮಾಡೋದು ಕೂಡಾ ಕಷ್ಟದ ಕೆಲಸವೇ. ಆರಂಭದಿಂದಲೂ ಒಂದಲ್ಲಾ ಒಂದು ಕಾರಣಕ್ಕೆ ಕುತೂಹಲ ಹೆಚ್ಚಿಸಿಕೊಂಡು ಬಂದಿರುವ ಚಿತ್ರ ʻಅಥಿʼ. ಹಾಗೆ ನೋಡಿದರೆ, ಕನ್ನಡದಲ್ಲಿ ಗಂಡಹೆಂಡತಿಯ ಸಂಬಂಧದ ಕುರಿತ ಸಾಕಷ್ಟು ಚಿತ್ರಗಳು ಬಂದಿವೆ. ಆದರೆ ʻʻ ವರೆಗೂ ಎಲ್ಲೂ, ಯಾರೂ ಹೇಳಿರದ ಹೊಸ ವಿಚಾರವೊಂದನ್ನು ನಾವಿನ್ನಲಿ ʻಅಥಿʼ ಮೂಲಕ ಅನಾವರಣ ಮಾಡುತ್ತಿದ್ದೇವೆʼʼ ಅನ್ನೋದು ಸ್ವತಃ ಚಿತ್ರದ ನಾಯಕನಟರೂ ಆಗಿರುವ, ನಿರ್ದೇಶಕ ಲೋಕೇಂದ್ರ ಸೂರ್ಯ ಅವರ ಮಾತು.

ಪೊನ್ನಿಯನ್ ಸೆಲ್ವನ್-2 ; ನೂರು ಕೋಟಿ ಕ್ಲಬ್ ಸೇರಿದ ಮಲ್ಟಿ ಸ್ಟಾರ್ ಸಿನಿಮಾ

ʻಅಟ್ಟಯ್ಯ ವರ್ಸಸ್ ಹಂದಿ ಕಾಯೋಳುʼ ಎನ್ನುವ ಚಿತ್ರದ ಮೂಲಕ ಚಿತ್ರರಂಗದ ವಾತಾವರಣದಲ್ಲಿ ಅಚ್ಛರಿ ಮೂಡಿಸಿದವರು ಲೋಕೇಂದ್ರ. ತನಕ ಯಾವ ಚಿತ್ರಗಳಲ್ಲೂ ನಟಿಸದ, ತಮಗೆ ಪರಿಚಿತರಿರುವವರನ್ನೇ ಪಾತ್ರಗಳನ್ನಾಗಿಸಿ, ಸಿನಿಮಾದ ಅನುಭವವೇ ಇರದವರನ್ನು ತಂತ್ರಜ್ಞರನ್ನಾಗಿಸಿ , ಕಾಡುವ ಕತೆಯ, ಚೆಂದದ ಸಿನಿಮಾ ನೀಡಿ ಎಲ್ಲರ ಗಮನ ಸೆಳೆದಿದ್ದರು. ಚಿತ್ರ ಬೆಂಗಳೂರು ಅಂತಾರಾಷ್ಟ್ರೀಯ ಚಲನಚಿತ್ರೋತ್ಸವ ಸೇರಿದಂತೆ ಸಾಕಷ್ಟು ಸಿನಿಮೋತ್ಸವಗಳಲ್ಲಿ ಪ್ರದರ್ಶನಗೊಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿತ್ತು. ಲೋಕೇಂದ್ರ ಅವರೇ ರೂಪಿಸಿರುವ ʻಕುಗ್ರಾಮʼ ಚಿತ್ರ ಕೂಡ ಬಿಡುಗಡೆಗೆ ತಯಾರಾಗಿದೆ.

 

`ಪುಷ್ಪವತಿ’ಯ ಖಾನಾ ಕಹಾನಿ

 

ಸದ್ಯ ಸೂರ್ಯ ಸಿನಿ ಫ್ಯಾಕ್ಟರಿಯಲ್ಲಿ ʻಅಥಿʼ ಚಿತ್ರಕ್ಕಾಗಿ ಕ್ಯೂಟ್ ಮತ್ತು ರೊಮ್ಯಾಂಟಿಕ್ ಫೋಟೋಶೂಟ್ ಮಾಡಲಾಗಿದೆ. ʻʻಫೋಟೋಗಳು ಎಲ್ಲರನ್ನೂ ಆಕರ್ಷಿಸುವುದರ ಜೊತೆಗೆ ಸಿನಿಮಾ ಕಂಟೆಂಟ್ ಹೇಳುವಂತಿರಬೇಕು ಎನ್ನುವ ಕಾರಣಕ್ಕೆ ಚಿತ್ರೀಕರಣವೆಲ್ಲಾ ಬಹುತೇಕ ಮುಕ್ತಾಯವಾಗುವ ಹಂತದಲ್ಲಿ ಫೋಟೋ ಶೂಟ್ ಮಾಡಿದ್ದೇವೆ. ಚುನಾವಣೆ ಮುಗಿಯುತ್ತಿದ್ದಂತೇ ಮೇ 13 ನಂತರ ʻಅಥಿʼ ಚಿತ್ರದ ಫಸ್ಟ್ ಲುಕ್ ಅನ್ನು ಬಿಡುಗಡೆ ಮಾಡುತ್ತೇವೆʼʼ ಎಂದು ಚಿತ್ರದ ನಿರ್ಮಾಪಕರಾದ  ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರು ಹೇಳಿದ್ದಾರೆ. ನಟಿಯಾಗಿ ಸಾಕಷ್ಟು ಹೆಸರು ಮಾಡಿರುವ ಋತುಚೈತ್ರ ಅವರು ವಸ್ತ್ರವಿನ್ಯಾಸ  ಮಾಡಿರುವುದು ಫೋಟೋಶೂಟ್ನ ಮತ್ತೊಂದು ವಿಶೇಷವಾಗಿದೆ.

 ‘ಹುಲಿಯಾ’ : ತೂತುಮಡಿಕೆ ಡೈರೆಕ್ಟರ್ ಹೊಸ ಪ್ರಯತ್ನ  

ಇನ್ನುಳಿದಂತೆ ಸೆವೆನ್ ರಾಜ್ ಆರ್ಟ್ಸ್ ನಿರ್ಮಿಸುತ್ತಿರುವ ಅಥಿ ಲವ್ ಯುʼ ಚಿತ್ರಕ್ಕೆ ಲೋಕೇಂದ್ರ ಸೂರ್ಯ ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶನ ಮಾಡುವುದರ ಜೊತೆಗೆ ನಾಯಕನಾಗಿ ಅಭಿನಯಿಸುತ್ತಿದ್ದಾರೆ. ಅನಂತ್ ಆರ್ಯನ್ ಸಂಗೀತ ಚಿತ್ರಕ್ಕಿದೆ. ಎನ್. ಓಂ ಪ್ರಕಾಶ್ ರಾವ್ ಅವರ ಪುತ್ರಿ ಶ್ರಾವ್ಯಾ ರಾವ್ ಅಂದ್ರೆ ಸಾತ್ವಿಕ ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಚಿತ್ರದ ಪರದೆಯನ್ನು ಬಹುತೇಕ ಸಾತ್ವಿಕ ಆವರಿಸಿಕೊಂಡಿದ್ದ ಬಿಡುಗಡೆಗೆ ಕಾತರದಲ್ಲಿ ಕಾಯುತ್ತಿರುವುದಾಗಿ ಹೇಳಿದ್ದಾರೆ ಸಾತ್ವಿಕ ಹೇಳಿದ್ದಾರೆ.ಅಲ್ಲದೆ  ರೆಡ್ ಅಂಡ್ ವೈಟ್ ಸೆವೆನ್ ರಾಜ್ ಅವರ ನಿರ್ಮಾಣದ ಎರಡನೇ ಚಿತ್ರ ಇದಾಗಿದೆ.

 

 

Share this post:

Translate »