`ಅಷ್ಟಮಿ’ ಭಾರತದಲ್ಲಿ ಆಚರಿಸಲ್ಪಡುವ ಅತ್ಯಂತ ಪ್ರಾಚೀನ ಹಬ್ಬಗಳಲ್ಲಿ ಒಂದು. ಜಗದೋದ್ಧಾರಕ ಕೃಷ್ಣ ಹುಟ್ಟಿದ ದಿನವನ್ನು ಅಷ್ಟಮಿ ಎಂದು ವೈಭವದಿಂದ ದೇಶ-ವಿದೇಶಗಳಲ್ಲಿ ಆಚರಿಸಲಾಗುತ್ತದೆ. ಪುರಾಣಗಳ ಪ್ರಕಾರ ಶ್ರಾವಣ ಮಾಸದಲ್ಲಿ ಬರುವ ಕೃಷ್ಣ ಪಕ್ಷದ ಅಷ್ಟಮಿ ಕೃಷ್ಣನು ಹುಟ್ಟಿದ ದಿನ. ಈ ಪ್ರಕಾರ ಇಂದು ಜಗದೋದ್ಧಾರಕನ ಜನ್ಮದಿನ.
‘ಬ್ಲಿಂಕ್’ ಸಿನಿಮಾದಲ್ಲೂ ಮೋಡಿ ಮಾಡಲಿದ್ದಾರೆ ‘ವಿಕ್ರಾಂತ್ ರೋಣ’ ಪಿಟಿ ಮೇಷ್ಟ್ರು ವಜ್ರಧೀರ್ ಜೈನ್
ಈ ಹಬ್ಬವನ್ನೇ ಬೇಸ್ ಆಗಿಟ್ಟುಕೊಂಡು ನಿರ್ದೇಶಕ ಜಗದೀಶ್ ಆಚಾರ್, `ಅಷ್ಟಮಿ’ ಎಂಬ ಟೈಟಲ್ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಚಿತ್ರಕ್ಕೆ `ಕೃಷ್ಣಂ ವಂದೇ ಜಗದ್ಗುರು’ ಎಂಬ ಆಕರ್ಷಕ ಟ್ಯಾಗ್‌ಲೈನ್ ಇಡಲಾಗಿದ್ದು, ಖ್ಯಾತ ನಿರ್ಮಾಪಕರಾದ ಚಂದ್ರಶೇಖರ್ ರೆಡ್ಡಿ ಸಾರಥ್ಯದಲ್ಲಿ `ಎಮ್&ಎಮ್’ ಗ್ರೂಪ್ ಅರ್ಪಿಸುವ ಈ ಚಿತ್ರವನ್ನು `sri lakshmi narasimha movies’ ಬ್ಯಾನರ್ ಅಡಿಯಲ್ಲಿ ಡಾ.ಹೇಮಂತ್ ಸಾಯಿ ಸ್ವರೂಪ್ ಮತ್ತು ಜಗತ್ ಬೋಪಣ್ಣ ನಿರ್ಮಿಸುತ್ತಿದ್ದಾರೆ.
ಹಲವು ಗಣ್ಯರ ಸಮ್ಮುಖದಲ್ಲಿ ಬಿಡುಗಡೆಯಾಯಿತು “ವೈಶಂಪಾಯನ ತೀರ” ದ ಟ್ರೇಲರ್
ಚಿತ್ರಕ್ಕೆ ಹಿರಿಯ ಪತ್ರಕರ್ತರಾದ ಗಣೇಶ್ ಕಾಸರಗೋಡು ಸಂಭಾಷಣೆಯಿದ್ದು, ಶೀಘ್ರದಲ್ಲೇ ತಾರಾಬಳಗದ ಬಗ್ಗೆ ಚಿತ್ರತಂಡ ಮಾಹಿತಿ ನೀಡಲಿದೆ. ಈ ಚಿತ್ರದ ಮೂಹುರ್ತ ಸಮಾರಂಭ ಇತ್ತೀಚಿಗೆ ನೆರವೇರಿದ್ದು, ಜನವರಿ ಮಾಸದ ಅಂತ್ಯದಲ್ಲಿ ಶೂಟಿಂಗ್ ಆರಂಭವಾಗಲಿದೆ.