ಬಿಗ್ ಬಾಸ್ ಕನ್ನಡ ಮನೆಯಲ್ಲಿ ನಡೆದ ನಾಟಕೀಯ ಘಟನಾವಳಿಗಳ ನಂತರದ ಎಪಿಸೋಡ್‌ನಲ್ಲಿ ಜಾನ್ವಿ, ಅಶ್ವಿನಿ ಗೌಡ ಮತ್ತು ಸುದೀಪ್ ನಡುವಿನ ಸಂಭಾಷಣೆ ಪ್ರೇಕ್ಷಕರ ಗಮನ ಸೆಳೆದಿತು.

ಎಲಿಮಿನೇಟ್ ಆದ ಅಶ್ವಿನಿ ಗೌಡ ಮತ್ತು ಮಂಜು ಭಾಷಿಣಿ ವೇದಿಕೆಗೆ ಬಂದಾಗ, ಸುದೀಪ್ ಅವರು ಜಾನ್ವಿ ಹಾಗೂ ಅಶ್ವಿನಿ ಗೌಡ ಕುರಿತು ಪ್ರಶ್ನೆ ಎತ್ತಿದರು. “ನೀವು ಪಾಠ ಮಾಡಿದ ಬಳಿಕ ಅವರು ಬದಲಾಗುತ್ತಾರೆ,” ಎಂದು ಮಂಜು ಆಶಾವಾದ ವ್ಯಕ್ತಪಡಿಸಿದರೂ, ಸುದೀಪ್ ಅದನ್ನು ಒಪ್ಪಲಿಲ್ಲ.
ಅಶ್ವಿನಿ ಗೌಡ ಹಾಗೂ ಆ್ಯಂಕರ್ ಜಾನ್ವಿ ರಕ್ಷಿತಾ ಶೆಟ್ಟಿಗೆ ಕಿರುಕುಳ ನೀಡಿದ ವಿಷಯ ಮನೆ ಹಾಗೂ ಹೊರಗೆ ಚರ್ಚೆಗೆ ಗ್ರಾಸವಾಗಿತ್ತು. ಈ ಕುರಿತು ಸುದೀಪ್ ಅವರು ಇಬ್ಬರಿಗೂ ಕಠಿಣವಾಗಿ ಬುದ್ಧಿವಾದ ಹೇಳಿದರು. ಅಶ್ವಿನಿ ಬಳಿಕ ರಕ್ಷಿತಾ ಶೆಟ್ಟಿ ಬಳಿ ಕ್ಷಮೆ ಕೇಳಿ ಸೌಹಾರ್ದತೆಯನ್ನು ತೋರಿದರೂ, ಜಾನ್ವಿ ಮಾತ್ರ “ನೇರವಾಗಿ ಇರ್ತೀವಿ, ಅದರಿಂದ ಕೆಟ್ಟವರು ಆಗ್ತೀವಿ. ಹಿಂಗಾಯ್ತು ಅಂತ ಬಗ್ಗೋದು ಬೇಡ. ಒಳ್ಳೆಯ ರೀತಿಯಲ್ಲಿ ಇರೋಣ,” ಎಂದು ಹೇಳಿ ತನ್ನ ಅಹಂಕಾರದಿಂದ ಹಿಂದೆ ಸರಿಯಲಿಲ್ಲ.
ನಂತರ ಸುದೀಪ್ ಅವರು ವೇದಿಕೆಯಲ್ಲಿ ಒಂದು ವಿಡಿಯೋ ಪ್ರದರ್ಶಿಸಿದರು. ಅದರಲ್ಲಿ ಜಾನ್ವಿ ಮತ್ತು ಅಶ್ವಿನಿ ಮಾತನಾಡುತ್ತಿರುವ ದೃಶ್ಯ ಕಾಣಿಸಿಕೊಂಡು, “ಇವರು ಯಾವುದೇ ಕಾರಣಕ್ಕೂ ಬದಲಾಗುವುದಿಲ್ಲ. ಅವರ ಟಾರ್ಗೆಟ್ ಬದಲಾಗಬಹುದು, ಆದರೆ ಅವರ ನಡವಳಿಕೆ ಅಲ್ಲ,” ಎಂದು ಸುದೀಪ್ ನೇರವಾಗಿ ಅಭಿಪ್ರಾಯಪಟ್ಟರು.
ಈ ಮಾತು ಪ್ರೇಕ್ಷಕರಿಗೂ ಸತ್ಯದಂತೆಯೇ ಅನಿಸಿತು. ಅತ್ತ, ಕಿಚ್ಚನ ಚಪ್ಪಾಳೆ ಪಡೆದ ಗಿಲ್ಲಿ ವಿಚಾರದಲ್ಲಿ ಅಶ್ವಿನಿ ಮತ್ತು ಜಾನ್ವಿ ಸ್ಪಷ್ಟವಾಗಿ ಅಸಹನೆ ವ್ಯಕ್ತಪಡಿಸಿದುದು ಆ ಎಪಿಸೋಡ್‌ನ ಮತ್ತೊಂದು ಹೈಲೈಟ್ ಆಗಿತ್ತು.
