ಹೈದರಾಬಾದ್: ಜನಪ್ರಿಯ ನಟ ಆಶಿಶ್ ವಿದ್ಯಾರ್ಥಿ ಅವರನ್ನು ಪ್ರೇಕ್ಷಕರಿಗೆ ಪರಿಚಯಿಸುವ ಯಾವುದೇ ಅಗತ್ಯವಿಲ್ಲ. ಬಹುಭಾಷಾ ನಟನಾಗಿ ಗುರುತಿಸಿಕೊಂಡ ಇವರು, ಖಳನಾಯಕರಾಗಿ ಮತ್ತು ಪೋಷಕ ನಟರಾಗಿ ನಟಿಸಿದ್ದಾರೆ. ಇತ್ತೀಚೆಗಷ್ಟೇ ಎರಡನೇ ಮದುವೆಯಾಗಿದ್ದು ಗೊತ್ತೇ ಇದೆ.
57 ವರ್ಷದ ಆಶಿಶ್ ವಿದ್ಯಾರ್ಥಿ ಈ ವರ್ಷದ ಮೇ ತಿಂಗಳಲ್ಲಿ, ಅಸ್ಸಾಂನ 33 ವರ್ಷದ ಫ್ಯಾಷನ್ ಉದ್ಯಮಿ ರೂಪಾಲಿ ಬರುವಾ ಅವರನ್ನು ವಿವಾಹವಾದರು.
ಕೋಲ್ಕತ್ತಾದಲ್ಲಿ ನಡೆದ ಅವರ ಮದುವೆಯಲ್ಲಿ ಎರಡೂ ಕುಟುಂಬದ ಸದಸ್ಯರು ಮತ್ತು ಆಪ್ತರು ಮಾತ್ರ ಹಾಜರಿದ್ದರು.
*ಗಿಣಿರಾಮ ಸೀರಿಯಲ್ ಹೀರೋ ಹೊಸ ಸಿನಿಮಾಗೆ ‘ಉತ್ಸವ’ ಟೈಟಲ್*
ಆಶಿಶ್ ಈ ಹಿಂದೆ ನಟಿ ಶಕುಂತಲಾ ಬರುವಾ ಅವರ ಪುತ್ರಿ ರಾಜೋಶಿ ಬರುವಾ ಅವರನ್ನು ವಿವಾಹವಾಗಿದ್ದರು ಮತ್ತು ಅವರಿಗೆ ಅರ್ಥ ವಿದ್ಯಾರ್ಥಿ ಎಂಬ ಮಗನಿದ್ದಾನೆ. ಆದರೆ.. ಭಿನ್ನಾಭಿಪ್ರಾಯಗಳಿಂದ ಬೇರ್ಪಟ್ಟರು. ನಂತರ 2ನೇ ಮದುವೆಯಾಗಿ ಜೀವನ ನಡೆಸುತ್ತಿದ್ದಾರೆ.
ಆಶಿಶ್ ಅವರ ಎರಡನೇ ಮದುವೆಗೆ ಹಲವು ಟೀಕೆಗಳು ಬಂದಿದ್ದವು. ಅವರು ಪ್ರತಿಕ್ರಿಯಿಸಿ, ತಮ್ಮ ಮೇಲೆ ಬರುತ್ತಿರುವ ಟೀಕೆಗಳನ್ನೆಲ್ಲ ಕೇಳಿಸಿಕೊಂಡ ಅವರು, ಮದುವೆಯಾಗುವುದು ಕೇವಲ ದೈಹಿಕ ಸುಖಕ್ಕಾಗಿ ಅಲ್ಲ, ಒಡನಾಡಿಗಾಗಿ ಮಾಡಿದ್ದೇನೆ ಎಂದು ಹೇಳಿದರು. ಆದರೆ ಇದೀಗ ಈ ಜೋಡಿಯ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿವೆ.
ಕುತೂಹಲ ಮೂಡಿಸಿದ ಶಿವರಾಜ್‌ಕುಮಾರ್ ಹೊಸ ಚಿತ್ರದ ಕಾನ್ಸೆಪ್ಟ್ ಪೋಸ್ಟರ್!
ಆಶಿಶ್ ಮತ್ತು ರೂಪಾಲಿ ಬರುವಾ ಇತ್ತೀಚೆಗೆ ಹನಿಮೂನ್‌ಗೆ ತೆರಳಿದ್ದರು. ಇಂಡೋನೇಷ್ಯಾದ ಬಾಲಿಯಲ್ಲಿ ಆನಂದಿಸುತ್ತಿದ್ದಾರೆ. ರೂಪಾಲಿ ಈ ಸಂಬಂಧ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಹಚ್ಚ ಹಸಿರಿನ ಬೆಟ್ಟಗಳ ಮಧ್ಯೆ ಕುಳಿತುಕೊಂಡಿರುವ ಫೋಟೋವನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳು ಇದೀಗ ವೈರಲ್ ಆಗಿವೆ. ಈ ಬಗ್ಗೆ ನೆಟ್ಟಿಗರು ವಯಸ್ಸಾಗಿದೆ ಎಂದು ಕಮೆಂಟ್ ಮಾಡುತ್ತಿದ್ದಾರೆ.