Left Ad
ಅಕ್ಕಿನೇನಿ ನಾಗಾರ್ಜುನಗೆ ನಾಯಕಿಯಾಗ್ತಿದ್ದಾರೆ ಕನ್ನಡತಿ ಆಶಿಕಾ ರಂಗನಾಥ್ - Chittara news
# Tags

ಅಕ್ಕಿನೇನಿ ನಾಗಾರ್ಜುನಗೆ ನಾಯಕಿಯಾಗ್ತಿದ್ದಾರೆ ಕನ್ನಡತಿ ಆಶಿಕಾ ರಂಗನಾಥ್

 ಕನ್ನಡ ಮೂಲದ ಬೆಡಗಿ ಆಶಿಕಾ ರಂಗನಾಥ್ ಈಗ ತೆಲುಗಿನಲ್ಲಿ ಕ್ಲಿಕ್ ಆಗುತ್ತಿದ್ದಾರೆ. ಇದೀಗ ಅಕ್ಕಿನೇನಿ ನಾಗಾರ್ಜುನ ಸಿನಿಮಾಗೆ ನಾಯಕಿಯಾಗಿ ಆಯ್ಕೆಯಾಗಿದ್ದಾರೆ.

ಕನ್ನಡದಲ್ಲಿ ಹಲವು ಸಿನಿಮಾ ಮಾಡಿದ್ದ ಆಶಿಕಾ ಬಳಿಕ ತೆಲುಗು ಚಿತ್ರರಂಗಕ್ಕೆ ಹಾರಿದ್ದರು. ಇದೀಗ ಅಕ್ಕಿನೇನಿ ನಾಗಾರ್ಜುನ ನಾಯಕರಾಗಿರುವ ನಾ ಸಾಮಿ ರಂಗ ಸಿನಿಮಾಗೆ ಆಶಿಕಾ ನಾಯಕಿಯಾಗಿದ್ದಾರೆ.ಆಶಿಕಾ ಪೋಸ್ಟರ್ ಕೂಡಾ ಚಿತ್ರತಂಡ ಬಿಡುಗಡೆ ಮಾಡಿದೆ. 60 ವರ್ಷದ ನಾಗಾರ್ಜುನಗೆ ಆಶಿಕಾ ನಾಯಕಿಯಾಗಿ ಕ್ಲಿಕ್ ಆಗುತ್ತಾರಾ ಕಾದು ನೋಡಬೇಕು.

ಈಗಾಗಲೇ ಕನ್ನಡ ಮೂಲದ ರಶ್ಮಿಕಾ, ಶ್ರೀಲೀಲಾ ತೆಲುಗಿನಲ್ಲಿ ಬೇಡಿಕೆಯ ನಟಿಯಾಗಿ ಬೆಳೆದಿದ್ದಾರೆ. ಅವರ ನಡುವೆ ಆಶಿಕಾ ಕೂಡಾ ಠಕ್ಕರ್ ಕೊಡಲು ಟಾಲಿವುಡ್ ಗೆ ಎಂಟ್ರಿ ಕೊಟ್ಟಿದ್ದಾರೆ.
Spread the love
Translate »
Right Ad