ರಕ್ಕಮ್ಮ ಸಾಂಗ್‌ಗೆ ಸಖತ್ತಾಗಿ ಕುಣಿದ್ರು ನಟಿ ಆಶಿಕಾ ರಂಗನಾಥ್
ಕಿಚ್ಚ ಸುದೀಪ್ ಮತ್ತು ಜಾಕ್ವೆಲಿನ್ ಫೆರ್ನಾಂಡಿಸ್ ಜೊತೆಯಾಗಿ ಹೆಜ್ಜೆ ಹಾಕಿರುವವ ರಾ ರಾ ರಕ್ಕಮ್ಮಈ ಹಾಡು ಈಗ ಯುಟ್ಯೂಬ್ ನಲ್ಲಿ ಸಾಕಷ್ಟು ಸದ್ದು ಮಾಡುತ್ತಿದೆ. ದುಬಾರಿ ವೆಚ್ಚದಲ್ಲಿ ನಿರ್ಮಿಸಲಾಗಿರುವ ಈ ಹಾಡನ್ನು ಅನುಪ್ ಭಂಡಾರಿ ಬರೆದಿದ್ದಾರೆ. ಜಗತ್ತಿನಾದ್ಯಂತ ಹೈಪ್ ಕ್ರಿಯೇಟ್ ಮಾಡಿ, ಅಭಿಮಾನಿಗಳ ಎದೆಬಡಿತ ಹೆಚ್ಚಿಸಿರುವ ‘ವಿಕ್ರಾಂತ್ ರೋಣ’ ಸಿನಿಮಾದ ಈ ಹಾಡು ಭರ್ಜರಿ ರೆಸ್ಪಾನ್ಸ್ ಪಡೆದು ಕೊಂಡಿದೆ
ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ಅಭಿನಯದ ವಿಕ್ರಾಂತ್ ರೋಣ ಬಿಡುಗಡೆಗೆ ಅಭಿಮಾನಿಗಳು ಕಾದು ಕುಳಿತಿದ್ದಾರೆ. ಇನ್ನೇನು ಕೆಲವೇ ದಿನಗಳಲ್ಲಿ ಬೆಳ್ಳಿತೆರೆ ಮೇಲೆ ಕಿಚ್ಚನ ಅಬ್ಬರ ಕಣ್ತುಂಬಿಕೊಳ್ಳಲು ಫ್ಯಾನ್ಸ್ ಕಾತುರರಾಗಿದ್ದಾರೆ. ಈ ಸಿನಿಮಾದ ಮೂಲಕ ಇದೇ ಮೊದಲ ಬಾರಿಗೆ ಜಾಕ್ವೆಲಿನ್ ಫರ್ನಾಂಡಿಸ್ ಕನ್ನಡ ಸಿನಿಮಾದಲ್ಲಿ ನಟಿಸಿದ್ದಾರೆ. ವಿಶೇಷ ಹಾಡೊಂದರಲ್ಲಿ ಸುದೀಪ್ ಜೊತೆ ಹೆಜ್ಜೆ ಹಾಕಿದ್ದಾರೆ.
ಸಾಂಗ್ ರಿಲೀಸ್ ಬಳಿಕ ಜಾಕ್ವೆಲಿನ್ ಅವರಿಗೆ ಕೊಟ್ಟ ಮಾತಿನಂತೆ ಕಿಚ್ಚ ಸುದೀಪ್ ರಾ ರಾ ರಕ್ಕಮ್ಮ ಹಾಡಿಗೆ ರೀಲ್ಸ್ ಮಾಡಿದ್ದರು. ಇದು ಅಭಿಮಾಣಿಗಳ ಮೆಚ್ಚುಗೆಗೆ ಕಾರಣವಾಗಿತ್ತು. ಕಿಚ್ಚನ ರೀಲ್ಸ್ ಬೆನ್ನಲ್ಲೇ ಇದೀಗ ಗಡಂಗ ರಕ್ಕಮ್ಮ ಹಾಡಿಗೆ ಅನೇಕರು ರೀಲ್ಸ್ ಮಾಡುತ್ತಿದ್ದಾರೆ. ಇದೀಗ ಈ ಹಾಡಿಗೆ ಕನ್ನಡದ ಕ್ಯೂಟ್ ನಟಿ ಆಶಿಕಾ ರಂಗನಾಥ್ ಸಖತ್ ಸ್ಟೆಪ್ ಹಾಕಿದ್ದಾರೆ.
https://www.instagram.com/p/CeJXcNtFcw2/