Sandalwood Leading OnlineMedia

ವಿಧಿ ಆರ್ಟಿಕಲ್ 370 ಪೋಸ್ಟರ್ ಬಿಡುಗಡೆ

ಲೈರಾ ಎಂಟರ್‌ ಟೈನರ್ ಬ್ಯಾನರ್ ಮೂಲಕ ಭರತ್ ಗೌಡ, ಸಿ.ರಮೇಶ್ ಅವರು ನಿರ್ಮಿಸಿರುವ ಚಿತ್ರ ಆರ್ಟಿಕಲ್ 370. ಕೆ.ಶಂಕರ್ ಈ ಚಿತ್ರಕ್ಕೆ ಕಥೆ, ಚಿತ್ರಕಥೆ ಬರೆದು ಆ್ಯಕ್ಷನ್ ಕಟ್ ಹೇಳಿದ್ದಾರೆ, ಕಳೆದ ಸೋಮವಾರ ಈ ಚಿತ್ರದ ಪೋಸ್ಟರ್ ಬಿಡುಗಡೆ ಕಾರ್ಯಕ್ರಮ ನಡೆಯಿತು. ಈ ಸಂದರ್ಭದಲ್ಲಿ ಪತ್ರಕರ್ತ ಹಾಗೂ ಪಂಡಿತರೂ ಆದ ಆರ್.ಕೆ.ಮುಟ್ಟು, ಮಾಜಿ ಸೈನಿಕ ಪ್ರಹ್ಲಾದ್ ವಿ.ಕುಲಕರ್ಣಿ ಸೇರಿದಂತೆ ಇತರೆ ಸೈನಿಕರು ಅಲ್ಲಿ ಹಾಜರಿದ್ದರು.
 
 
 
ಹಿಂದೆ ಕಾಶ್ಮೀರದಲ್ಲಿ ಪಂಡಿತರ ಮೇಲೆ ನಡೆದ ಘೋರ ಹಲ್ಲೆ, ದೌರ್ಜನ್ಯದ ಕಥೆ ಇಟ್ಟುಕೊಂಡು ಹಿಂದಿಯಲ್ಲಿ ಕಶ್ಮೀರಿ ಫೈಲ್ಸ್ ಚಿತ್ರ ಬಂದಿತ್ತು. ಈಗ ಅಲ್ಲಿ ಅರ್ಟಿಕಲ್ 370 ಜಾರಿಯಾದ ನಂತರ ಏನೆಲ್ಲ ಬದಲಾವಣೆಗಳಾಗಿವೆ ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗಿದೆ.ಹಾಗಾಗಿ ಸೈನಿಕರಿಗೆ, ಕಾಶ್ಮೀರಿ ಪಂಡಿತರಿಗೆ ಈ ಸಿನಿಮಾ ಅರ್ಪಣೆ ಎಂದು ಚಿತ್ರತಂಡ ಹೇಳಿದೆ.
ಆ ಸಮಯದಲ್ಲಿ ಅಲ್ಲೇ ಇದ್ದು ನಡೆದ ಎಲ್ಲಾ ಘಟನೆಗಳನ್ನು ಕಣ್ಣಾರೆ ಕಂಡ ಮುಟ್ಟು ಅವರು, ಮಾತನಾಡಿ ನಾನ 1990ರಲ್ಲಿ ಬೆಂಗಳೂರಗೆ ಬಂದೆ. ಕರ್ನಾಟಕದ ಜನ ಒಳ್ಳೆಯವರು.
 
 
ತುಂಬಾ ಚೆನ್ನಾಗಿ ನೋಡಿಕೊಂಡರು. ಆಗ ಸುಮಾರು 800 ರಿಂದ 850 ಪಂಡಿತರನ್ನು ಕೊಲೆ ಮಾಡಲಾಯಿತು, ಮಹಿಳೆಯರ ಮೇಲೆ ರೇಪ್ ಮಾಡುವುದು, ರುಂಡ ಕತ್ತರಿಸುವುದು ಹೆಚ್ಚಾಗಿ ನಡೀತು. 32 ವರ್ಷಗಳಿಂದ ಅಲ್ಲಿನ ಜನ ಈ ಯಾತನೆಯನ್ನು ಅನುಭವಿಸುತ್ತಾ ಇದ್ದರು.350,35A ಎ ಮೊದಲು ಎಲ್ಲಾ ಬೇರೆಯಾಗಿತ್ತು, ಈಗ ಇದನ್ನು ತೆಗೆದಿದ್ದರಿಂದ ಖುಷಿ ಇದೆ ಎಂದು ವಿವರಿಸಿದರು.
 
ಮಾಜಿ ಸೈನಿಕರಾದ ಪ್ರಹ್ಲಾದ ವಿ ಕುಲಕರ್ಣಿ ಮಾತನಾಡಿ. ನಾನು 16ನೇ ವಯಸ್ಸಿನಲ್ಲಿಯೇ ಸೈನ್ಯಕ್ಕೆ ಸೇರಿದೆ. ಅಲ್ಲಿ ಧರ್ಮದ ಬಗ್ಗೆ ಬೇದಭಾವ ಇರಲ್ಲ. ಹೃದಯ ಕೈನಲ್ಲಿ ಇಟ್ಟುಕೊಂಡು ದೇಶಕ್ಕಾಗಿ ಹೋರಾಟ ಮಾಡಿದ್ದೇವೆ. ೩೭೦ ವಿಧಿ ಅವರಿಗೆ ಕೊಟ್ಟ ನಂತರ ನಮ್ಮ ಮೇಲೆ ಹಲ್ಲೆ ಮಾಡುತ್ತಾ ಬಂದರು. ಈಗ ಅದನ್ನು ತೆಗೆದಿದ್ದರಿಂದ ಒಳ್ಳೆಯದಾಗುತ್ತಿದೆ. ಕಾಶ್ಮೀರ ನಮ್ಮ ಭಾರತದ ಒಂದು ಭಾಗ ಎಂದು ಹೇಳಿದರು. ಸೈನಿಕರಾದ ಈರಣ್ಣ,ಈರಪ್ಪ, ಇವರೆಲ್ಲ ಆ ವಿಧಿಯ ಕುರಿತು ಮಾತನಾಡಿದರು.
 
ನಿರ್ಮಾಪಕ‌ ಭರತ ಗೌಡ ಮಾತನಾಡಿ ನಿರ್ದೇಶಕರು ಈ ಕಥೆ ಹೇಳಿದಾಗ ತುಂಬಾ ಇಷ್ಟವಾಯಿತು. ಹಾಗಾಗಿ ಈ ಸಿನಿಮಾ ನಿರ್ಮಾಣ ಮಾಡಿದ್ದೇನೆ. ಅಲ್ಲಿ ಚಿತ್ರೀಕರಣಕ್ಕೆ ಹೋದಾಗ ಸೈನಿಕರು ತುಂಬಾ ಸಪೋರ್ಟ್ ಮಾಡಿದರು ಎಂದರು.ನಿರ್ದೇಶಕ ಶಂಕರ್ ಮಾತನಾಡಿ, ಒಂದಿಷ್ಟು ವಿಷಯ ಕಲೆ ಹಾಕಿ ಈ ಚಿತ್ರವನ್ನು ಮಾಡಿದ್ದೇವೆ. 60 ದಿನ ಮಡಿಕೇರಿ, ಚಿಕ್ಕಮಗಳೂರು ಸೇರಿದಂತೆ ಕಾಶ್ಮೀರದಲ್ಲಿ ಹೆಚ್ಚಿನ ಭಾಗದ ಶೂಟಿಂಗ್ ಮಾಡಿದ್ದೇವೆ. ಶಶಿಕುಮಾರ್, ಶೃತಿ, ಶಿವರಾಂ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಕಳೆದ ತಿಂಗಳು ಸೆನ್ಸಾರ್ ಆಗಿದ್ದು, ಬರುವ ನವೆಂಬರ್ ನಲ್ಲಿ ಚಿತ್ರವನ್ನು ರಿಲೀಸ್ ಮಾಡುವುದಾಗಿಯೂ ಹೇಳಿದರು.

Share this post:

Related Posts

To Subscribe to our News Letter.

Translate »