ಸಿ .ಸಿ. ರಾವ್ ನಾಯಕ ನಟನಾಗಿ ಅಭಿನಯಿಸಿರುವ “ಅರ್ಜುನ್ ಸನ್ಯಾಸಿ” ಚಿತ್ರ ಇತ್ತೀಚಿಗೆ ನಮ್ಮ ಫ್ಲಿಕ್ಸ್ ನಲ್ಲಿ ಹವಾ ಸ್ರಷ್ಟಿಸುತ್ತಿದೆ. ಉತ್ತಮ ಅಭಿನಯ ಹಾಗೂ ನಿರ್ದೇಶನದ ಬಗ್ಗೆ ಒಳ್ಳೆ ಮಾತುಗಳು ಪತ್ರಿಕಾ ವಲಯ ಮತ್ತು ಸೋಶಿಯಲ್ ಮೀಡಿಯಾದಲ್ಲಿ ಕೇಳಿ ಬರುತ್ತಿದೆ. ಈಶ್ವರ್ ಪೋಲಂಕಿ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣ ಮಾಡಿದ್ದು ಗುರುಮೂರ್ತಿ ಹೆಗಡೆ ,ಕಣ್ಣಿ ಪಾಲ್, ನೇತ್ರಾ ರಾಜ್ ಭಾರತೀಪುರ ಹಾಗೂ ಅನುರಂಜನ್ ಎರ್ .ಕೋ ಪ್ರೊಡ್ಯೂಸರ್ ಆಗಿ ಕಾರ್ಯನಿರ್ವಹಿಸಿದ್ದಾರೆ.
ಯುವ ಪ್ರತಿಭೆ ಸಿ.ಸಿ ರಾವ್ ರವರು ನಾಯಕನಟರಾಗಿ ಈ ಚಿತ್ರ ತೆಲುಗಿನಲ್ಲಿ ಸಹ ಬಿಡುಗಡೆಯಾಗುತ್ತಿದೆ. ಅರ್ಜುನ್ still Virgin ಎಂಬ ಹೆಸರಿನಲ್ಲಿ ಬಿಡುಗಡೆಯಾಗುತ್ತಿರುವ ಚಿತ್ರದ ಚಿತ್ರೀಕರಣ ಬೆಂಗಳೂರು ಸುತ್ತಮುತ್ತ ನಡೆದಿದ್ದು, ತುಂಬಾ ಅದ್ಭುತವಾಗಿ ಮೂಡಿಬಂದಿದೆ.
ಇನ್ನು ಚಿತ್ರದ ತಾರಾಗಣದಲ್ಲಿ ಸಿ.ಸಿ ರಾವ್, ಸೌಂಧರ್ಯ ಗೌಡ , ಅಭಿನಯ, ನಾಗೇಂದ್ರ ಶಾ, ರೂಪ ರಾಯಪ್ಪ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಸೂರಜ್ ಮತ್ತು ವಾಣಿ ಅಭಿನಯಿಸಿದ್ದಾರೆ. ತಂತ್ರಜ್ಞಾನದ ವಿಭಾಗದಲ್ಲಿ ಹೇಮಂತ್ ಕುಮಾರ್ ಸಂಗೀತ ಸಂಯೋಜನೆ ಮಾಡುತ್ತಿದ್ದು ,ಅನುರಂಜನ್ ಹಾಗೂ ಗುರುಮೂರ್ತಿ ಹೆಗಡೆ ಚಿತ್ರಕ್ಕೆ ಸಂಕಲನ ಮಾಡಿದ್ದಾರೆ ಹಾಗೂ ವೀರೇಶ್ ಎನ್.ಟಿ. ಎ ಚಿತ್ರಕ್ಕೆ ಸಿನಿಮಾ ಟೋಗ್ರಾಫರ್ ಆಗಿ ಕಾರ್ಯನಿರ್ವಹಿಸಿದ್ದಾರೆ.